ಗಡ್ಡವನ್ನು ಬೆಳೆಸೋದ್ರಿಂದ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

First Published Dec 24, 2020, 3:56 PM IST

‘ನೋ-ಶೇವ್ ನವೆಂಬರ್’ ನಂತಹ ಪ್ರವೃತ್ತಿ ಜನಪ್ರಿಯವಾದಾಗ, ಇದು ಗಡ್ಡವನ್ನು ಬೆಳೆಯಲು ಇಷ್ಟಪಡದವರು ಇದನ್ನು ಮಾಡಿದ್ದು ಎನ್ನಲಾಗುತ್ತಿದೆ. ಆದರೆ , ನೋ-ಶೇವ್ ನವೆಂಬರ್ ನ ಗುರಿ ಕೂದಲನ್ನು ಕಳೆದುಕೊಳ್ಳುವ ಕ್ಯಾನ್ಸರ್ ರೋಗಿಗಳ ಬಗ್ಗೆ ಜಾಗೃತಿ ಮೂಡಿಸುವುದು. ಈ ಪ್ರವೃತ್ತಿಯು ನಿಮ್ಮ ಕೂದಲನ್ನು  ಮುಕ್ತವಾಗಿ ಬೆಳೆಯಲು ಅವಕಾಶ ಮಾಡಿಕೊಡುವುದು ಮತ್ತು ಕ್ಷೌರ ಮತ್ತು ಟ್ರಿಮ್ ಮಾಡಿಸಲು ನೀವು ಸಾಮಾನ್ಯವಾಗಿ ಖರ್ಚು ಮಾಡುವ ಹಣವನ್ನು ದಾನ ಮಾಡುವುದಾಗಿದೆ. ಆದರೆ, ಅಂತಹ ಪ್ರವೃತ್ತಿಗಳ ಹೊರತಾಗಿ, ಗಡ್ಡವು ಪ್ರಪಂಚದಾದ್ಯಂತ ಸ್ಥಿರವಾಗಿ ಜನಪ್ರಿಯತೆಯನ್ನು ಗಳಿಸಿದೆ.

ಇತ್ತೀಚಿನ ಜನರೇಷನ್ ಹೆಚ್ಚಾಗಿ ಗಡ್ಡ ಬೆಳೆಸಲು ಇಷ್ಟ ಪಡುತ್ತದೆ.ಅವುಗಳನ್ನು ಸ್ಟೈಲ್ ಸ್ಟೇಟ್ಮೆಂಟ್ ಎಂದೂ ಪರಿಗಣಿಸಲಾಗುತ್ತದೆ. ದುರದೃಷ್ಟವಶಾತ್, ಗಡ್ಡವನ್ನು ಬೆಳೆಸುವುದು ಆರೋಗ್ಯಕರ ಅಥವಾ ಇದೊಂದು ಉತ್ತಮ ಕೆಲಸ ಎಂದು ಅನೇಕ ಜನರು ಭಾವಿಸುವುದಿಲ್ಲ.
undefined
ಕೇವಲ ಫ್ಯಾಷನ್ ಗಿಂತ ಮುಖದ ಕೂದಲನ್ನು ಬೆಳೆಸಲು ಹೆಚ್ಚಿನ ಕಾರಣಗಳಿವೆ. ಗಡ್ಡವನ್ನು ಬೆಳೆಸುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳನ್ನು ನೋಡೋಣ ಮತ್ತು ಆಗಾಗ್ಗೆ ಕ್ಷೌರ ಮಾಡದಿರುವುದು ಏಕೆ ಉತ್ತಮ ತಿಳಿಯೋಣ. ಆದ್ದರಿಂದ, ಹುಡುಗರೇ, ಶೇವಿಂಗ್ ಕಿಟ್ ಗಳಿಗೆ ವಿದಾಯ ಹೇಳಿ ಏಕೆಂದರೆ ಕೂದಲು ತುಂಬಿದ ಮುಖವು ಕೆಲವು ಅನುಕೂಲಗಳನ್ನು ನೀಡುತ್ತದೆ.
undefined
ಇದು ಯುವಿ ಕಿರಣಗಳನ್ನು ನಿರ್ಬಂಧಿಸುತ್ತದೆದಪ್ಪ ಗಡ್ಡವನ್ನು ಹೊಂದಿರುವುದು ಸೂರ್ಯನ ಹಾನಿಕಾರಕ ಕಿರಣಗಳಿಂದ ಮುಖವನ್ನು ರಕ್ಷಿಸುತ್ತದೆ. ಹೌದು, ಆ ಮುಖದ ಕೂದಲು ದಪ್ಪವಾಗಿ ಬೆಳೆಯಲು ಬಿಟ್ಟರೆ ಯುವಿ ಕಿರಣಗಳು ಮುಖವನ್ನು ತಲುಪದಂತೆ ತಡೆಯಬಹುದು. ಜೊತೆಗೆ ಚರ್ಮವನ್ನು ಬರ್ನ್ ಮಾಡುವುದು ಮತ್ತು ಟ್ಯಾನ್ಗಳಿಂದ ರಕ್ಷಿಸಲು ಗಡ್ಡ ಸಹಕಾರಿ.
undefined
ಮುಖವನ್ನು ಕೊಳಕಿನಿಂದ ರಕ್ಷಿಸುತ್ತದೆಗಡ್ಡವು ರಕ್ಷಕನಾಗಿ ಬದಲಾಗಬಹುದು. ಗೊಂದಲವಾಗುತ್ತಿದೆಯೇ? ಮುಖವನ್ನು ಧೂಳು, ಕೊಳಕು ಮತ್ತು ಅಲರ್ಜಿಯಿಂದ ರಕ್ಷಿಸಲು ಗಡ್ಡ ಸಹಾಯ ಮಾಡುತ್ತದೆ. ಅದು ಪರದೆಯಂತೆ ವರ್ತಿಸುವ ಮೂಲಕ ಮುಖವನ್ನು ರಕ್ಷಿಸುತ್ತದೆ, ಇದು ಎಲ್ಲಾ ಧೂಳಿನ ಕಣಗಳನ್ನು ನಿರ್ಬಂಧಿಸುತ್ತದೆ ಮತ್ತು ಚರ್ಮವನ್ನು ತಲುಪದಂತೆ ಮಾಡುತ್ತದೆ.
undefined
ಸರಿಯಾಗಿ ಗಡ್ಡವನ್ನು ಟ್ರಿಮ್ ಮಾಡುವ ದಿನಚರಿಯನ್ನು ಅನುಸರಿಸುವ ಮೂಲಕ ಗಡ್ಡದ ನೈರ್ಮಲ್ಯವನ್ನು ಪರಿಶೀಲಿಸಬೇಕು. ಕೆಲವು ಗಡ್ಡದ ಶಾಂಪೂ, ಗಡ್ಡದ ಕ್ರೀಮ್ಗಳು ಇತ್ಯಾದಿಗಳನ್ನು ಉಪಯೋಗಿಸುವುದು ಇದರಲ್ಲಿ ಸೇರಿದೆ.
undefined
ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡುತ್ತದೆನಿಮ್ಮ ಗಡ್ಡವನ್ನು ಆಗಾಗ್ಗೆ ಕತ್ತರಿಸುವುದು ನಿಮ್ಮ ಚರ್ಮದಲ್ಲಿನ ರಂಧ್ರಗಳನ್ನು ತೆರೆಯಲು ಕಾರಣವಾಗುತ್ತದೆ. ಇದು ಶುಷ್ಕತೆ ಮತ್ತು ತುರಿಕೆಗೆ ಕಾರಣವಾಗಬಹುದು. ಅಲ್ಲದೆ, ಬೇಸಿಗೆ ಮತ್ತು ಚಳಿಗಾಲದ ಸಮಯದಲ್ಲಿ, ತೆರೆದ ರಂಧ್ರಗಳು ತೇವಾಂಶದ ನಷ್ಟಕ್ಕೆ ಕಾರಣವಾಗಬಹುದು.
undefined
ಇದು ಮೊಡವೆಗಳನ್ನು ದೂರ ಇಡುತ್ತದೆಮುಖದಲ್ಲಿ ಮೊಡವೆಗಳು ಏಕಾಏಕಿ ಕಂಡುಬರುತ್ತಿದೆಯೇ ಅಥವಾ ಅಂತಹ ಯಾವುದೇ ಸ್ಥಿತಿಗೆ ಗುರಿಯಾಗಿದ್ದರೆ, ಗಡ್ಡವನ್ನು ಬೆಳೆಸುವುದು ಸಹಾಯಕ ಎಂದು ಹೇಳಬಹುದು. ಹೌದು, ಶೇವಿಂಗ್ ನಿಮ್ಮ ಚರ್ಮದಲ್ಲಿ ಕಿರಿಕಿರಿ ಮತ್ತು ದದ್ದುಗಳಿಗೆ ಕಾರಣವಾಗುವುದರಿಂದ ನಿಮ್ಮ ರೇಜರ್ಗಳನ್ನು ದೂರವಿರಿಸಿ ಮತ್ತು ನಿಮ್ಮ ಮುಖದ ಕೂದಲನ್ನು ಬೆಳೆಸಿಕೊಳ್ಳಿ.
undefined
ಮನಸ್ಥಿತಿಯನ್ನು ಸುಧಾರಿಸುತ್ತದೆತಜ್ಞರ ಪ್ರಕಾರ, ಗಡ್ಡವನ್ನು ಬೆಳೆಸುವುದು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಆಶ್ಚರ್ಯಪಡಬೇಡಿ. ಕ್ಲೀನ್ ಶೇವ್ ಮಾಡಿದವರಿಗಿಂತ ಗಡ್ಡವನ್ನು ಹೊಂದಿರುವ ಪುರುಷರು ಹೆಚ್ಚು ಗಮನ ಸೆಳೆಯುವ ಸಾಧ್ಯತೆಯಿದೆ ಎಂದು ವಿಜ್ಞಾನ ಸೂಚಿಸುತ್ತದೆ.
undefined
ಇನ್ನೊಂದು ವಿಷಯ ಕೇಳಿ... ಗಡ್ಡವನ್ನು ಶೇವ್ ಮಾಡದಿರಲು ಇನ್ನೊಂದು ಕಾರಣವಿದೆ. ಒಬ್ಬ ಮನುಷ್ಯ ಶೇವ್ ಮಾಡಲು ಜೀವನದಲ್ಲಿ ಸರಾಸರಿ ಸುಮಾರು 4.5 ತಿಂಗಳು ಕಳೆಯುತ್ತಾನೆ. ನೀವು ಅದನ್ನು ಬೇರೆಡೆ ಹೂಡಿಕೆ ಮಾಡಿದರೆ ಎಷ್ಟು ಸಮಯ ಉಳಿಸಲು ಸಾಧ್ಯವಾಗುತ್ತದೆ ಎಂದು ನೀವೇ ಕಲ್ಪಿಸಿಕೊಳ್ಳಿ.
undefined
click me!