ತಲೈವಿ ಪ್ರಮೋಷನ್: ಚಂದದ ಸೀರೆಗಳಲ್ಲಿ ಮಿಂಚಿದ ಕಂಗನಾ

Suvarna News   | Asianet News
Published : Sep 10, 2021, 10:29 AM ISTUpdated : Sep 10, 2021, 02:46 PM IST

ಬಾಲಿವುಡ್ ನಟಿ ಕಂಗನಾ ಅವರ ಬಹುನಿರೀಕ್ಷಿತ ಸಿನಿಮಾ ರಿಲೀಸ್ ತಲೈವಿ ಸಿನಿಮಾ ಪ್ರಮೋಷನ್‌ನಲ್ಲಿ ಸಖತ್ ಸೀರೆಗಳಲ್ಲಿ ಮಿಂಚಿದ ಕ್ವೀನ್

PREV
110
ತಲೈವಿ ಪ್ರಮೋಷನ್: ಚಂದದ ಸೀರೆಗಳಲ್ಲಿ ಮಿಂಚಿದ ಕಂಗನಾ

ಬಾಲಿವುಡ್ ನಟಿ ಕ್ವೀನ್ ಕಂಗನಾ ರಣಾವತ್ ಮಾಡರ್ನ್ ಹಾಗೂ ದೇಸಿ ಲುಕ್‌ನಲ್ಲೂ ಮಿಂಚುತ್ತಾರೆ. ಎರ್ಪೋರ್ಟ್‌ನಲ್ಲಿಯೂ ಸೀರೆಯಲ್ಲಿ ಕಾಣಿಸಿಕೊಳ್ಳೋ ಕಂಗನಾ ಸೀರೆ ಲವ್ ಕಮ್ಮಿ ಏನಲ್ಲ. ಇತ್ತೀಚೆಗೆ ತಮ್ಮ ಬಹುನಿರೀಕ್ಷಿತ ಸಿನಿಮಾ ತಲೈವಿ ಪ್ರಮೋಷನ್‌ಗಳಲ್ಲಿ ತಮ್ಮ ಸೀರೆ ಕಲೆಕ್ಷನ್‌ಗಳನ್ನು ತೋರಿಸಿದ್ದಾರೆ.

210

ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಸಿನಿಮಾ  'ತಲೈವಿ' ಬಿಡುಗಡೆಯಾಗಿದೆ. ಇದು ನಟಿ-ರಾಜಕಾರಣಿ ಜೆ.ಜಯಲಲಿತಾ ಅವರ ಜೀವನ ಆಧಾರಿತ ಚಿತ್ರ. ಎ.ಎಲ್. ವಿಜಯ್ ನಿರ್ದೇಶನದ ಈ ಚಿತ್ರವನ್ನು ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ.

310

ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗಾಗಿ ನಟಿ ತನ್ನ ಅದ್ಭುತವಾದ ಸೀರೆ ನೋಟದಿಂದ ಎಲ್ಲರನ್ನೂ ಆಕರ್ಷಿಸಿದ್ದಾರೆ. ಪ್ರತಿ ಸಾರ್ವಜನಿಕ ಎಪಿಯರೆನ್ಸ್‌ನಲ್ಲಿಯೂ ಆಕೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಭಾರತದಲ್ಲಿ ಹಬ್ಬದ ಸೀಸನ್ ಆರಂಭವಾಗಿರುವುದರಿಂದ ನಟಿಯ ಪ್ರಮೋಷನ್ ಕಲೆಕ್ಷನ್‌ನ ಆಕೆಯ ಅತ್ಯುತ್ತಮ ಸೀರೆ ಲುಕ್‌ಗಳು ವೈರಲ್ ಅಗಿವೆ. ಹಬ್ಬದ ಸೀಸನ್‌ನಲ್ಲಿ ಸೀರೆಯ ಝಕಲ್ ಕಣ್ತುಂಬಿಕೊಳ್ಳಿ

410

ಸನ್‌ಶೈನ್ ಸೀರೆ: ಈ ಹಳದಿ ರೇಷ್ಮೆ ಸೀರೆಯಲ್ಲಿ ನಟಿ ಸೂರ್ಯನ ಕಿರಣದಂತೆ ಕಾಣುತ್ತಿದ್ದರು. ಈ ಡ್ರೇಪ್ ಅನ್ನು ಜರಿಯಿಂದ ನೇಯಲಾಗುತ್ತದೆ. ನಟಿ ಅದನ್ನು ವಿ-ನೆಕ್ ಬ್ಲೌಸ್‌ನೊಂದಿಗೆ ಸ್ಟೈಲ್ ಆಗಿ ಉಟ್ಟಿದ್ದಾರೆ. ನಟಿ ಮುತ್ತಿನ ಚೋಕರ್, ಜುಮ್ಕಾ ಧರಿಸಿದ್ದಳು. ಕೂದಲನ್ನು ಬನ್ ಮಾಡಿ ತಾಜಾ ಮಲ್ಲಿಗೆ ಹೂವುಗಳಿಂದ ಅಲಂಕರಿಸಲಾಗಿತ್ತು. ಕಂಗನಾ ತನ್ನ ಮೇಕ್ಅಪ್ ನಲ್ಲಿ ಆಕರ್ಷಕ ಕಣ್ಣುಗಳು, ಕೆಂಪಾದ ಕೆನ್ನೆ ಮತ್ತು ಗುಲಾಬಿ ಬಣ್ಣದ ಲಿಪ್‌ ಸ್ಟಿಕ್ ಆರಿಸಿಕೊಂಡಿದ್ದಾರೆ

510

ಗೋ ಗ್ರೀನ್: ಮಾಧ್ಯಮ ಸಂವಾದಗಳಿಗಾಗಿ ಕಂಗನಾ ರಣಾವತ್ ಹೈದರಾಬಾದಿನಲ್ಲಿದ್ದಾಗ ಅವರು ಸುಂದರವಾದ ಹಸಿರು ಸೀರೆ ಉಟ್ಟಿದ್ದರು. ಅದು ಅಲಂಕೃತ ಅಂಚನ್ನು ಹೊಂದಿತ್ತು. ಅದಕ್ಕೆ ಹೊಂದುವ ಸ್ಲೀವ್‌ಲೆಸ್ ಬ್ಲೌಸ್‌ ಧರಿಸಿದ್ದರು.

610

ಕಂಗನಾ ತೂಗಾಡುವ ಕಿವಿಯೋಲೆಗಳೊಂದಿಗೆ ತನ್ನ ನೋಟವನ್ನು ಕಂಪ್ಲೀಟ್ ಮಾಡಿದ್ದಾರೆ. ಹೆಣೆಯಲ್ಪಟ್ಟ ಹೆಡ್‌ಬ್ಯಾಂಡ್ ಶೈಲಿ ಮತ್ತು ಕನಿಷ್ಠ ಮೇಕಪ್‌ನೊಂದಿಗೆ ಸ್ಟೈಲ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.

710

'ಕ್ವೀನ್' ನಟಿ ಕೆಂಪು ಮತ್ತು ಚಿನ್ನದ ಅಂಚಿನೊಂದಿಗೆ ಈ ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ಸೊಗಸಾದ ಕಿವಿಯೋಲೆಗಳು ಮತ್ತು ಮುತ್ತಿನ ಚೋಕರ್ ಸೆಟ್ನೊಂದಿಗೆ ನಟಿ ಲುಕ್ ಕಂಪ್ಲೀಟ್ ಮಾಡಿದ್ದಾರೆ

810

ಅವಳ ಕೂದಲನ್ನು ಅಚ್ಚುಕಟ್ಟಾಗಿ ಬನ್ ನಲ್ಲಿ ಕಟ್ಟಿ, ಹೂವುಗಳಿಂದ ಮುಚ್ಚಲಾಗಿತ್ತು. ಮೇಕ್ಅಪ್ ಬಗ್ಗೆ ಹೇಳುವುದಾದರೆ, ಕಂಗನಾ ಅದನ್ನು ಸಂಪೂರ್ಣವಾಗಿ ಚಿತ್ರಿಸಿದ ಹುಬ್ಬುಗಳು ಮತ್ತು ಹವಳದ ಲಿಪ್ ಶೇಡ್‌ನೊಂದಿಗೆ ತನ್ನ ಸೀರೆಗೆ ತಕ್ಕುದಾಗಿ ಕಾಣಿಸಿದ್ದಾರೆ.

910

ಸಿಲ್ಕ್ ಲವ್: ಕಂಗನಾ ತನ್ನ ಪ್ರಚಾರದ ಸಮಯದಲ್ಲಿ ರೇಷ್ಮೆ ಸೀರೆಗಳಲ್ಲಿ ರಾಕ್ ಮಾಡಿದ್ದಾರೆ. ಈ ಲುಕ್ ಬುಕ್‌ಮಾರ್ಕ್‌ಗೆ ಯೋಗ್ಯವಾಗಿದೆ! ನಟಿ ತನ್ನ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ ಸಮಾರಂಭಕ್ಕೆ ಕಸ್ಟಮೈಸ್ ಮಾಡಿದ ಪಚ್ಚೆ ಹಾರವನ್ನು ವಿನ್ಯಾಸಗೊಳಿಸಿದ ಈ ಅದ್ಭುತ ರೇಷ್ಮೆ ಸೀರೆಯಲ್ಲಿ ಧರಿಸಿ ರಾಜಮನೆತನವನ್ನು ಮೆರೆದಿದ್ದಾರೆ.

1010

ಈ ನೇಯ್ಗೆ ಮತ್ತು ಪಚ್ಚೆ ಆಭರಣಗಳು ನನ್ನ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ವಿಶೇಷವಾಗಿ ಕಸ್ಟಮೈಸ್ ಮಾಡಲಾಗಿದೆ. ಆದರೆ ಕೋವಿಡ್‌ನಿಂದಾಗಿ ಅದು ವಿಳಂಬವಾಯಿತು. ಈ ಸುಂದರಿಯರನ್ನು ಧರಿಸಲು ನಾನು ಇನ್ನು ಕಾಯಲು ಸಾಧ್ಯವಿಲ್ಲ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ವಿಂಟೇಜ್ ಕೇಶವಿನ್ಯಾಸದೊಂದಿಗೆ ಕಂಗನಾ ನೋಟವನ್ನು ಪೂರ್ಣಗೊಳಿಸಿದರು.

click me!

Recommended Stories