ಪರ್ಫ್ಯೂಮ್ ಇಷ್ಟ ಪಡೋರು ಈ ಗೋಲ್ಡನ್ ರೂಲ್ಸ್ ಫಾಲೋ ಮಾಡಿ...

First Published | Jan 8, 2021, 3:56 PM IST

ಹೊರಗಡೆ ಹೋಗೋಕೆ ರೆಡಿಯಾಗುವಾಗ ಕೊನೆಯದಾಗಿ ಪ್ರತಿಯೊಬ್ಬರೂ ಹುಡುಕಾಡುವುದು ಪರ್ಫ್ಯೂಮ್ ಅಥವಾ ಸುಗಂಧ ದ್ರವ್ಯಕ್ಕಾಗಿ. ದೇಹದಿಂದ ಹೊರ ಬರುವ ಬೆವರಿನ ವಾಸನೆ ತೊಡೆದು ಹಾಕಲು ಪರ್ಫ್ಯೂಮ್ ಬೇಕು, ಜೊತೆಗೆ ದೇಹದಿಂದ ಉತ್ತಮ ಸ್ಮೆಲ್ ಬರಲು, ದಿನಪೂರ್ತಿ ಫ್ರೆಶ್ ಆಗಿರಲು ಪರ್ಫ್ಯೂಮ್ ಬೇಕೇ ಬೇಕು. 

ಪರ್ಫ್ಯೂಮ್ ಹಾಕುವಾಗ ಹೇಗೇಗೋ ಬಳಸುತ್ತೇವೆ. ಇದನ್ನು ಬಳಸಲುವಿಧಾನವೂ ಇದೆ. ದೇಹದ ಕೆಲವೊಂದು ಭಾಗಗಳಿಗೆ ಅಥವಾ ಡ್ರೆಸ್ ಮೇಲೆ ಯಾವ ರೀತಿ ಪರ್ಫ್ಯೂಮ್ ಹಾಕಬೇಕು ಅನ್ನೋದನ್ನು ನಾವು ಸರಿಯಾಗಿ ತಿಳಿದುಕೊಂಡರೆ, ದಿನವಿಡೀ ಪರ್ಫ್ಯೂಮ್ ಸ್ಮೆಲ್ ಘಮ ಘಮ ಎಂದು ಹರಡೋದು ಖಂಡಿತಾ.
undefined
ದೇಹದ ಪಲ್ಸ್ ಪಾಯಿಂಟ್‌ಗೆ ಯಾವಾಗಲೂ ಪರ್ಫ್ಯೂಮ್ ಹಚ್ಚಿ. ಅಲ್ಲದೆ, ಎರಡೂ ಕೈಗಳ ಮಣಿಕಟ್ಟುಗಳ ಮೇಲೆ, ಎರಡು ಕಿವಿಗಳ ಹಿಂದೆ, ಗಂಟಲಿನ ಮಧ್ಯಭಾಗ, ಗಾಳಿಕೊಳವೆ ಮೇಲೆ ಮತ್ತು ಎರಡೂ ಮೊಣಕೈ ಕೀಲುಗಳ ಮೇಲೆ ಪರ್ಫ್ಯೂಮ್ ಹಚ್ಚಿ.
undefined

Latest Videos


ಎಲ್ಲಾ ಬಟ್ಟೆಗಳ ಮೇಲೆ ಸುಗಂಧ ದ್ರವ್ಯವನ್ನು ಸಿಂಪಡಿಸಬೇಡಿ. ದೇಹದ ಪಲ್ಸ್ ಪಾಯಿಂಟ್ ಮೇಲೆ ಯಾವಾಗಲೂ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸುಗಂಧದ್ರವ್ಯವನ್ನು ಹಚ್ಚಿ.
undefined
ಸುಗಂಧದ್ರವ್ಯವನ್ನು ಆಯ್ಕೆ ಮಾಡಿಕೊಳ್ಳುವಾಗ ಹವಾಮಾನದ ಬಗ್ಗೆಯೂ ಗಮನ ಹರಿಸಬೇಕು. ಬೇಸಿಗೆಯಲ್ಲಿಬಲವಾದ ಪರಿಮಳ ಹೊಂದಿರುವ ಸುಗಂಧದ್ರವ್ಯವನ್ನು ಮತ್ತು ಚಳಿಗಾಲದಲ್ಲಿ ಕಡಿಮೆ ಪರಿಮಳ ಹೊಂದಿರುವ ಸುಗಂಧದ್ರವ್ಯ ಹಾಕಬಹುದು.
undefined
ಸುಗಂಧದ್ರವ್ಯವನ್ನು ಹೇಗೆ ಬಳಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಕೂಡ ಮುಖ್ಯ. ಕಚೇರಿ, ವಿಚಾರ ಸಂಕಿರಣ ಅಥವಾ ಅಧಿಕೃತ ಸಮಾರಂಭಗಳಲ್ಲಿ ಯಾವಾಗಲೂ ಸೌಮ್ಯ ವಾದ ಸುಗಂಧದ್ರವ್ಯವನ್ನು ಬಳಸಿ.
undefined
ಯಾವಾಗಲೂ ಸೂರ್ಯನ ಬೆಳಕಿನ ನೇರ ಸಂಪರ್ಕದಿಂದ ಸುಗಂಧದ್ರವ್ಯವನ್ನು ದೂರವಿಡಿ. ಸೂರ್ಯನ ಬೆಳಕಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ಸುಗಂಧದ್ರವ್ಯದ ಪರಿಮಳ ಕಡಿಮೆಯಾಗುತ್ತದೆ.
undefined
ಸುಗಂಧದ್ರವ್ಯವನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಲು ನಿಮ್ಮ ಸುಗಂಧದ್ರವ್ಯವನ್ನು ಸಿಂಪಡಿಸುವ ಮೊದಲು ವ್ಯಾಸೆಲಿನ್ ಅನ್ನು ನಿಮ್ಮ ನಾಡಿಯ ಬಿಂದುಗಳ ಮೇಲೆ ಉಜ್ಜಿ. ಒಣ ಚರ್ಮಕ್ಕೆ ಸಿಂಪಡಿಸುವುದಕ್ಕಿಂತಲೂ ಡ್ರೈ ಸ್ಕಿನ್ ಮೇಲೆ ಹೆಚ್ಚು ಕಾಲ ಉಳಿಯುತ್ತದೆ.
undefined
ಚರ್ಮವು ಹೆಚ್ಚು ಎಣ್ಣೆಯಂಶ ಹೊಂದಿದಷ್ಟುಹೆಚ್ಚು ಕಾಲ ಸುಗಂಧವನ್ನು ಹಿಡಿದಿಡಬಹುದಾದಷ್ಟು, ಕಿವಿಮೇಲ್ಭಾಗವು ಎಣ್ಣೆಅಂಶ ಹೊಂದಿರುವುದರಿಂದ ಕಿವಿಯ ಹಿಂಭಾಗದಲ್ಲಿ ಪರ್ಫ್ಯೂಮ್ ಹಚ್ಚಬಹುದು.
undefined
ತ್ವಚೆಮೇಲಿರುವ ತೇವಾಂಶವು ಸುಗಂಧವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ಇದು ಸೂಪರ್ ಸೂಕ್ಷ್ಮವಾದ ಬಟ್ಟೆಗಳು ಅಥವಾ ಆಭರಣದ ಕಲೆಗಳನ್ನು ಸಹ ತಡೆಯುತ್ತದೆ. ಸ್ನಾನ ಮಾಡಿದ ಕೂಡಲೇ ದೇಹ ತೇವದಿಂದ ಕೂಡಿರುತ್ತದೆ. ಆ ಸಮಯದಲ್ಲಿ ಪೆರ್ಫ್ಯೂಮ್ ಬಳಕೆ ಮಾಡಿ.
undefined
click me!