ಮೇಕಪ್ ರಿಮೂವರ್ ಇಲ್ಲದೆ ಮ್ಯಾಟ್ ಲಿಪ್ ಸ್ಟಿಕ್ ಹೀಗೂ ತೆಗೆಯಬಹುದು!

First Published | Sep 1, 2022, 7:14 PM IST

ಮ್ಯಾಟ್ ಲಿಪ್ ಸ್ಟಿಕ್ ನಿಮ್ಮ ಲುಕ್ ಅನ್ನು ಇನ್ನಷ್ಟು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತೆ. ಇದು ನಿಮಗೆ ಬೋಲ್ಡ್ ಲುಕ್ ನೀಡುವುದಲ್ಲದೇ, ಎಲ್ಲರ ಮಧ್ಯದಲ್ಲೂ ಎದ್ದು ಕಾಣುವಂತೆ ಮಾಡುತ್ತದೆ. ಆದರೆ ಈ ಲಿಪ್ ಸ್ಟಿಕ್ ನ್ನು ತೆಗೆದು ಹಾಗೋದು ಸುಲಭದ ಕೆಲಸವಾಗಿ ಉಳಿದಿಲ್ಲ. ಏಕೆಂದರೆ ಅದರ ಕಲೆಗಳು ತುಂಬಾ ಹಠಮಾರಿಯಾಗಿವೆ, ಇದನ್ನು ಮೇಕಪ್ ರಿಮೂವರ್ ಇಲ್ಲದೆ ತೆಗೆದುಹಾಕಲು ತುಂಬಾ ಕಷ್ಟವಾಗುತ್ತದೆ. ಇಲ್ಲಿ ನಿಮಗೆ ಮೇಕಪ್ ರಿಮೂವರ್ ಇಲ್ಲದೇನೆ ಮೇಟ್ ಲಿಪ್ ಸ್ಟಿಕ್ ಹೇಗೆ ತೆಗೆದುಹಾಕೋದು ಅನ್ನೋದನ್ನು ಹೇಳುತ್ತೇವೆ.
 

ನೀವು ಬೋಲ್ಡ್ ಮತ್ತು ಬ್ಯೂಟಿಫುಲ್ ಲುಕ್ ಗಾಗಿ ಮೇಟ್ ಲಿಪ್ ಸ್ಟಿಕ್ (matte lipstick) ಹಚ್ಚಿದ್ದೀರಾ? ಇದೇನೋ ನಿಮ್ಮ ಅಂದವನ್ನು ಹೆಚ್ಚಿಸುತ್ತೆ, ಆದರೆ ಅದನ್ನು ರಿಮೂವ್ ಮಾಡೋ ಕಷ್ಟ ಯಾರಿಗಾದಿತು ಅಲ್ವಾ? ಇದನ್ನು ತೆಗೆಯಲು ಮೇಕಪ್ ರಿಮೂವರ್ ಬೇಕೆ ಬೇಕು. ಆದರೆ ನಿಮ್ಮ ಬಳಿ ಮೇಕಪ್ ರಿಮೂವರ್ ಇಲ್ಲದಿದ್ದರೆ ಏನಾಗುತ್ತೆ?  ಚಿಂತಿಸಬೇಡಿ. ಇಂದು ನಾವು ನಿಮಗೆ ಈ ಲೇಖನದಲ್ಲಿ ಕೆಲವು ಸಲಹೆಗಳನ್ನು ನೀಡಲಿದ್ದೇವೆ, ಇದರಿಂದ ನೀವು ಮೇಕಪ್ ರಿಮೂವರ್ ಇಲ್ಲದೆ ನಿಮ್ಮ ತುಟಿಗಳಿಂದ ಲಿಪ್ ಸ್ಟಿಕ್ ತೆಗೆದುಹಾಕಬಹುದು. 

ಮ್ಯಾಟ್ ಲಿಪ್ ಸ್ಟಿಕ್ ತೆಗೆಯಲು ಸಲಹೆಗಳು

ಪೆಟ್ರೋಲಿಯಂ ಜೆಲ್ಲಿ ಬಳಸಿ
ತುಟಿಗಳಿಂದ ಮ್ಯಾಟ್ ಲಿಪ್ ಸ್ಟಿಕ್ ತೆಗೆದುಹಾಕಲು ಪೆಟ್ರೋಲಿಯಂ ಜೆಲ್ಲಿ ಬಳಸಿ. ಇದಕ್ಕಾಗಿ, ಮೊದಲಿಗೆ, ನಿಮ್ಮ ತುಟಿಗಳಿಗೆ ಪೆಟ್ರೋಲಿಯಂ ಜೆಲ್ (petroleum gel) ಹಚ್ಚಿ. ಸುಮಾರು 2 ರಿಂದ 3 ನಿಮಿಷಗಳ ನಂತರ, ಹತ್ತಿಯ ಉಂಡೆಯಿಂದ ಅದನ್ನು ತೆಗೆಯಿರಿ. ಇದು ಲಿಪ್ ಸ್ಟಿಕ್ ಸುಲಭವಾಗಿ ತೆಗೆದು ಹಾಕಲು ಸಹಾಯ ಮಾಡುತ್ತೆ.

Latest Videos


ಬಾದಾಮಿ ಎಣ್ಣೆ

ಮ್ಯಾಟ್ ಲಿಪ್ ಸ್ಟಿಕ್ ಅನ್ನು ತೆಗೆದುಹಾಕಲು ಬಾದಾಮಿ ಎಣ್ಣೆ ಬಳಸಿ. ಬಾದಾಮಿ ಎಣ್ಣೆ (almond oil) ಹಚ್ಚಲು, ಮೊದಲು 1 ಹತ್ತಿ ಉಂಡೆ ತೆಗೆದುಕೊಳ್ಳಿ, ಅದನ್ನು ಬಾದಾಮಿ ಎಣ್ಣೆಯಲ್ಲಿ ಅದ್ದಿ, ಇದನ್ನು ನಿಮ್ಮ ತುಟಿಗಳಿಗೆ ಹಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ನಂತರ, ಹತ್ತಿ ಬಟ್ಟೆಯ ಸಹಾಯದಿಂದ ಅದನ್ನು ಒರೆಸಿ. ಇದು ಮ್ಯಾಟ್ ಲಿಪ್ ಸ್ಟಿಕ್ ತೆಗೆಯಲು ಸಹಾಯ ಮಾಡುತ್ತೆ.

ಟೂತ್ ಬ್ರಷ್

ಮ್ಯಾಟ್ ಲಿಪ್ ಸ್ಟಿಕ್ ಅನ್ನು ತೆಗೆದುಹಾಕಲು ಟೂತ್ ಬ್ರಷ್ (tooth brush) ಬಳಸಿ. ಇದಕ್ಕಾಗಿ, ಹಲ್ಲುಗಳನ್ನು ಸ್ವಚ್ಛಗೊಳಿಸುವ ಬ್ರಷ್ ತೆಗೆದುಕೊಳ್ಳಿ. ಈಗ ಅದನ್ನು ತುಟಿಗಳ ಮೇಲೆ ಇರಿಸಿ ಮತ್ತು ನಿಧಾನವಾಗಿ ಸ್ವಚ್ಛಗೊಳಿಸಿ. ಇದು ತುಟಿಗಳ ಮೇಲೆ ಉಳಿದ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ, ಇದು ನಿಮ್ಮ ತುಟಿಗಳನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ. 

ಲಿಪ್ ಸ್ಕ್ರಬ್

ಮ್ಯಾಟ್ ಲಿಪ್ ಸ್ಟಿಕ್ ಕಲೆಗಳು ಹೆಚ್ಚು ಹಠಮಾರಿಯಾಗಿವೆ. ಈ ಕ್ರಮಗಳು ನಿಮ್ಮ ತುಟಿಗಳಿಂದ ಕಲೆಗಳನ್ನು ತೆಗೆದುಹಾಕದಿದ್ದರೆ, ಲಿಪ್ ಸ್ಕ್ರಬ್ (lip scrub) ಬಳಸಿ. ಲಿಪ್ ಸ್ಕ್ರಬ್ ತಯಾರಿಸಲು, 1 ಟೀಸ್ಪೂನ್ ಸಕ್ಕರೆ ತೆಗೆದುಕೊಳ್ಳಿ, ಅದರಲ್ಲಿ ಸ್ವಲ್ಪ ಜೇನುತುಪ್ಪ ಬೆರೆಸಿ. ಈಗ ಅದನ್ನು ನಿಮ್ಮ ತುಟಿಗಳಿಗೆ ಹಚ್ಚಿ ಮತ್ತು ಸ್ಕ್ರಬ್ ನಂತೆ ಉಜ್ಜಿ. ಇದು ಸುಂದರ ತುಟಿಗಳನ್ನು ನಿಮಗೆ ನೀಡುತ್ತೆ.

ಲಿಪ್ ಬಾಮ್

ಲಿಪ್ ಬಾಮ್ (lip balm) ಸಹಾಯದಿಂದ, ನೀವು ತುಟಿಗಳಿಂದ ಮ್ಯಾಟ್ ಲಿಪ್ ಸ್ಟಿಕ್ ಕಲೆಗಳನ್ನು ಸಹ ತೆಗೆದುಹಾಕಬಹುದು. ಇದಕ್ಕಾಗಿ, ನಿಮ್ಮ ಬೆರಳಿಗೆ ಸ್ವಲ್ಪ ಲಿಪ್ ಬಾಮ್ ಹಚ್ಚಿ. ಈಗ ಅದನ್ನು ನಿಮ್ಮ ತುಟಿಗಳಿಗೆ ಹಚ್ಚಿ ಮತ್ತು ಕೆಲವು ಸೆಕೆಂಡುಗಳ ಕಾಲ ಉಜ್ಜಿ. ಇದು ಮ್ಯಾಟ್ ಲಿಪ್ ಸ್ಟಿಕ್ ನ ಕಲೆಗಳನ್ನು ತೆಗೆದು ಹಾಕುತ್ತದೆ. 

ಮ್ಯಾಟ್ ಲಿಪ್ ಸ್ಟಿಕ್ ನ ಕಲೆಯನ್ನು ತೆಗೆದುಹಾಕಲು ಈ ಸಲಹೆಗಳನ್ನು ಬಳಸಿ. ಇದು ನಿಮಗೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಅಲ್ಲದೆ, ನಿಮ್ಮ ತುಟಿಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತೆ. ನಿಮ್ಮ ತುಟಿಗಳಿಗೆ ಲಿಪ್ ಸ್ಟಿಕ್ ಹೆಚ್ಚು ಹಚ್ಚಬಾರದು ಎಂಬುದನ್ನು ನೆನಪಿನಲ್ಲಿಡಿ. ಇದು ನಿಮ್ಮ ತುಟಿಗಳ ಬಣ್ಣ ಮತ್ತು ಚರ್ಮವನ್ನು ಹಾಳುಮಾಡಬಹುದು. 

click me!