ಮುಖದ ಮೇಲಿನ ಕಪ್ಪು ಕಲೆ ಹೋಗಲಾಡಿಸಲು ಹಿತ್ತಲಲ್ಲಿರುವ ಈ ಒಂದು ಹಣ್ಣು ರಾಮಬಾಣ

Published : Apr 26, 2026, 05:33 PM IST

Remove face tanning naturally Kannada: ಬೇಸಿಗೆಯ ಬಿಸಿಲಿಗೆ ಮುಖ ಕಪ್ಪಾಗಿದೆಯೇ? ಕೇವಲ 10 ನಿಮಿಷದಲ್ಲಿ ನಿಮ್ಮ ಮುಖದ ಕಾಂತಿಯನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಸರಳ ಮನೆಮದ್ದು. 

PREV
15
ಟ್ಯಾನಿಂಗ್ ದೂರವಾಗಿಸಲು ಏನು ಹಚ್ಚಬೇಕು?

ಬೇಸಿಗೆಯ ಕಾಲದಲ್ಲಿ ಮುಖದ ಮೇಲೆ ಕಪ್ಪು ಕಲೆ ಅಂದರೆ ಟ್ಯಾನಿಂಗ್ ಆಗುವುದು ಸಾಮಾನ್ಯ ವಿಷಯ. ಕಪ್ಪು ಕಲೆಯ ಕಾರಣದಿಂದ ನಿಮ್ಮ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಇಂದು ನಾವು ಮನೆಯಲ್ಲಿಯೇ ಅಂದರೆ ನೈಸರ್ಗಿಕವಾಗಿ ಯಾವ ರೀತಿ ಮುಖದ ಕಪ್ಪು ಕಲೆಗಳಿಂದ ಮುಕ್ತಿ ಪಡೆಯಬಹುದು ಎಂದು ತಿಳಿಸಿಕೊಡುತ್ತೇವೆ.

25
ಫೇಸ್ ಪ್ಯಾಕ್ ತಯಾರಿಸುವ ವಿಧಾನ

ಮನೆಯಲ್ಲಿ ಫೇಸ್ ಪ್ಯಾಕ್ ತಯಾರಿಸಲು ನಿಮಗೆ ಪಪ್ಪಾಯಿ ಮತ್ತು ಜೇನುತುಪ್ಪದ ಅಗತ್ಯವಿರುತ್ತದೆ. ಮೊದಲಿಗೆ ನೀವು ಪಪ್ಪಾಯಿಯ ಕೆಲವು ತುಂಡುಗಳನ್ನು (slices) ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಬೇಕು. ಈಗ ಒಂದು ಬಟ್ಟಲಿನಲ್ಲಿ ಅರ್ಧ ಕಪ್ ಹಣ್ಣಾದ ಮ್ಯಾಶ್ ಮಾಡಿದ ಪಪ್ಪಾಯಿ ಮತ್ತು ಒಂದು ಚಮಚ ಔಷಧೀಯ ಗುಣವುಳ್ಳ ಜೇನುತುಪ್ಪವನ್ನು ತೆಗೆದುಕೊಳ್ಳಿ.

35
ಬಳಸುವ ರೀತಿ

ಈ ಎರಡೂ ಕೆಮಿಕಲ್ ಮುಕ್ತ ವಸ್ತುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ನಯವಾದ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಈಗ ನೀವು ಈ ನಯವಾದ ಪೇಸ್ಟ್ ಅನ್ನು ಫೇಸ್ ಪ್ಯಾಕ್ ತರಹ ಬಳಸಬಹುದು. ಪೋಷಕಾಂಶಗಳಿಂದ ಕೂಡಿದ ಈ ಪೇಸ್ಟ್ ಅನ್ನು ನಿಮ್ಮ ಪೂರ್ಣ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ.

45
ಉತ್ತಮ ಫಲಿತಾಂಶಕ್ಕಾಗಿ

ಉತ್ತಮ ಫಲಿತಾಂಶ ಪಡೆಯಲು ನೀವು ಸುಮಾರು 10 ನಿಮಿಷಗಳ ಕಾಲ ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿರಬೇಕು. ಹತ್ತು ನಿಮಿಷದ ನಂತರ ನೀವು ಫೇಸ್ ವಾಶ್ ಮಾಡಬಹುದು. ಮುಖ ತೊಳೆಯಲು ನೀವು ತಣ್ಣೀರನ್ನು ಬಳಸಬೇಕು. ಆದರೆ, ಈ ಪೇಸ್ಟ್ ಅನ್ನು ನಿಮ್ಮ ಪೂರ್ಣ ಮುಖಕ್ಕೆ ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದನ್ನು ಮರೆಯಬಾರದು.

ಕನಿಷ್ಠ 4 ರಿಂದ 5 ಗಂಟೆಗಳ ಕಾಲ ಮುಖಕ್ಕೆ ಯಾವುದೇ ಸೋಪು ಹಚ್ಚದಿದ್ದರೆ ಫೇಸ್ ಪ್ಯಾಕ್‌ನ ಪೂರ್ಣ ಲಾಭ ನಿಮ್ಮದಾಗುತ್ತದೆ! 

55
ಪಯೋಜನಗಳು

ಕಪ್ಪು ಕಲೆ ಅಂದರೆ ಟ್ಯಾನಿಂಗ್ ಅನ್ನು ನೈಸರ್ಗಿಕವಾಗಿ ಹೋಗಲಾಡಿಸಲು ನೀವು ಪಪ್ಪಾಯಿ ಮತ್ತು ಜೇನುತುಪ್ಪದ ಮಿಶ್ರಣವನ್ನು ಬಳಸಬಹುದು. ಹೊಳೆಯುವ ಚರ್ಮವನ್ನು ಪಡೆಯಲು ನೀವು ಈ ಫೇಸ್ ಪ್ಯಾಕ್ ಯೂಸ್ ಮಾಡಬಹುದು. ಒಣ ಚರ್ಮವನ್ನು ಮೃದುವಾಗಿಸಲು ಕೂಡ ಈ ಫೇಸ್ ಪ್ಯಾಕ್ ಅನ್ನು ಬಳಸಬಹುದು. ಯಾವಾಗಲೂ ಕಲಬೆರಕೆ ಇಲ್ಲದ ಜೇನುತುಪ್ಪ ಬಳಸಲು ಪ್ರಯತ್ನಿಸಿ. ಕೆಮಿಕಲ್ ಮಿಶ್ರಿತ ಜೇನುತುಪ್ಪ ಚರ್ಮಕ್ಕೆ ಹಾನಿ ಮಾಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories