ಮಳೆಗಾಲದಲ್ಲಿ ಜೀನ್ಸ್ ಒಣಗುತ್ತಿಲ್ವಾ? ನೀರಿಲ್ಲದೇ ಮನೆಯಲ್ಲೇ ಡ್ರೈ ಕ್ಲೀನ್ ಮಾಡುವ ಸಿಂಪಲ್ ಟ್ರಿಕ್ಸ್!

Published : Jul 20, 2026, 04:46 PM IST

How to dry clean jeans at home: ಮಳೆಗಾಲದಲ್ಲಿ ಜೀನ್ಸ್ ಒಣಗಲು ದಿನಗಟ್ಟಲೆ ಬೇಕೇ? ಮಳೆಗಾಲದಲ್ಲಿ ಜೀನ್ಸ್ ಒಣಗಿಸುವುದು ಕಷ್ಟ. ಆದರೆ ಜೀನ್ಸ್ ನೆನೆಸದೇ ದುರ್ವಾಸನೆ ಮತ್ತು ಕಲೆಗಳನ್ನು ತೆಗೆದು ಮನೆಯಲ್ಲೇ ಫ್ರೆಶ್ ಆಗಿಡಲು 4 ಸರಳ ಡ್ರೈ ಕ್ಲೀನಿಂಗ್ ಸಲಹೆಗಳು ಇಲ್ಲಿವೆ.

PREV
15
ಮಳೆಗಾಲದಲ್ಲಿ ಜೀನ್ಸ್ ಒಣಗುತ್ತಿಲ್ವಾ?

ಮಳೆಗಾಲದಲ್ಲಿ ಸೆಕೆ, ಬಿಸಿಲು ಇರುವುದಿಲ್ಲ, ಇದರಿಂದ ಆರಾಮ ಸಿಗುತ್ತದೆ ನಿಜಾ. ಆದರೆ ಅದರ ಜೊತೆಗೆ ಅನೇಕ ಸಮಸ್ಯೆಗಳನ್ನು ತರುತ್ತದೆ. ಈ ಋತುವಿನಲ್ಲಿ ಬಟ್ಟೆಗಳನ್ನು ಒಣಗಿಸುವುದು ತುಂಬಾನೆ ಕಷ್ಟಕರವಾಗುತ್ತದೆ. ಅದರಲ್ಲೂ ಜೀನ್ಸ್ ವಿಷಯಕ್ಕೆ ಬಂದರೆ, ಒಣಗಲು ಕನಿಷ್ಠ 2-3 ದಿನಗಳು ಬೇಕಾಗುತ್ತದೆ. ಜೀನ್ಸ್ ಇತರ ಉಡುಪುಗಳಿಗಿಂತ ಸ್ವಲ್ಪ ದಪ್ಪವಾಗಿರುತ್ತದೆ, ಅದಕ್ಕಾಗಿಯೇ ಅವು ಬೇಗನೆ ಒಣಗುವುದಿಲ್ಲ.

25
ನೀರಿಲ್ಲದೇ ಜೀನ್ಸ್ ಒಣಗಿಸಲು ಟ್ರಿಕ್ಸ್

ಇಲ್ಲಿದೆ ನೋಡಿ ಕ್ಳೆಯಾಗಿರುವ ಜೀನ್ಸ್ ನ್ನು ವಾಶ್ ಮಾಡುವ ಹಾಗೂ ಜೀನ್ಸ್ ನ್ನು ಫ್ರೆಶ್ ಆಗಿಡಲು ಸಹಾಯ ಮಾಡುವ ನಾಲ್ಕು ಡ್ರೈ ಕ್ಲೀನಿಂಗ್ ವಿಧಾನಗಳು. ವಿಶೇಷವೆಂದರೆ ನೀವು ಅವುಗಳನ್ನು ನೀರಿನಲ್ಲಿ ನೆನೆಸದೆಯೇ ಸ್ವಚ್ಛಗೊಳಿಸಬಹುದು. ನೀವು ಕೂಡ ಮಳೆಗಾಲದಲ್ಲಿ ಈ ಟಿಪ್ಸ್ ಟ್ರೈ ಮಾಡಿ.

35
ಬಿಳಿ ವಿನೆಗರ್ ಬಳಸಿ

ಡ್ರೈ ಕ್ಲೀನ್ ಮಾಡಲು, ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ವಿನೆಗರ್ ಅನ್ನು ಸಮಾನ ಭಾಗಗಳಲ್ಲಿ ಸೇರಿಸಿ. ಚೆನ್ನಾಗಿ ಬೆರೆಸಿ. ಸುವಾಸನೆಗಾಗಿ ನೀವು ಈ ಮಿಶ್ರಣಕ್ಕೆ ಕೆಲವು ಹನಿ ಎಸೆನ್ಶಿಯಲ್ ಆಯಿಲ್ ಕೂಡ ಸೇರಿಸಬಹುದು. ಮಿಶ್ರಣವನ್ನು ನಿಮ್ಮ ಜೀನ್ಸ್ ಮೇಲೆ ಸಿಂಪಡಿಸಿ ಮತ್ತು ಫ್ಯಾನ್ ಅಡಿಯಲ್ಲಿ ಒಣಗಲು ಬಿಡಿ. ಒಣಗಿದ ನಂತರ, ಜೀನ್ಸ್ ನಿಂದ ವಾಸನೆ ನಿವಾರಣೆಯಾಗಿ ಫ್ರೆಶ್ ಆಗಿರುತ್ತದೆ.

45
ಕಲೆಗಳನ್ನು ಸ್ವಚ್ಛಗೊಳಿಸಲು ಹೇಗೆ?

ಅನೇಕ ಬಾರಿ ಮೇಲಿನ ಕಲೆಗಳನ್ನು ಸ್ವಚ್ಛಗೊಳಿಸಲು ಸಂಪೂರ್ಣ ಜೀನ್ಸ್ ಅನ್ನು ಜನ ನೆನೆಸುತ್ತಾರೆ. ಆದರೆ ಸಂಪೂರ್ಣ ಜೀನ್ಸ್ ತೊಳೆಯುವ ಬದಲು, ನೀವು ಸ್ಟೇನ್ ಮಾತ್ರ ಸ್ವಚ್ಛಗೊಳಿಸಬಹುದು. ಇದಕ್ಕಾಗಿ, ಹಳೆಯ ಹಲ್ಲುಜ್ಜುವ ಬ್ರಷ್‌ನಲ್ಲಿ ಲಿಕ್ವಿಡ್ ಡಿಟರ್ಜೆಂಟ್ ಅಥವಾ ಡಿಶ್‌ವಾಶ್ ಲಿಕ್ವಿಡ್ ಹಾಕಿ, ಕಲೆ ಇರುವ ಜಾಗಕ್ಕೆ ಉಜ್ಜಿಕೊಳ್ಳಿ. ನಂತರ ಅದನ್ನು ಒದ್ದೆಯಾದ ಬಟ್ಟೆಯಿಂದ ಒರೆಸಿ. ಇದರಿಂದ ಕಲೆ ನಿವಾರಣೆಯಾಗುತ್ತದೆ ಮತ್ತು ಜೀನ್ಸ್ ಒದ್ದೆಯಾಗದೆ ಕ್ಲೀನ್ ಆಗುತ್ತದೆ.

55
ಅಡಿಗೆ ಸೋಡಾ ಬಳಸಿ

ಮಳೆಯಿಂದಾಗಿ ನಿಮ್ಮ ಜೀನ್ಸ್ ಒದ್ದೆಯಾಗಿ ವಾಸನೆ ಬರುತ್ತಿದ್ದರೆ, ನೀವು ಈ ವಿಧಾನವನ್ನು ಟ್ರೈ ಮಾಡಬಹುದು. ಮೊದಲು, ಅವುಗಳನ್ನು ಚೆನ್ನಾಗಿ ಹರಡಿ, ಅವುಗಳ ಮೇಲೆ ಅಡಿಗೆ ಸೋಡಾ ಸಿಂಪಡಿಸಿ, ಮತ್ತು ಒಂದು ಗಂಟೆ ಹಾಗೆಯೇ ಬಿಡಿ. ನಂತರ, ಸೋಡಾವನ್ನು ಬ್ರಷ್ ಮಾಡಿ ಅಥವಾ ಜೀನ್ಸ್ ನಿಂದ ಅದನ್ನು ತೆಗೆದು ಹಾಕಿ. ಇದು ವಾಸನೆ ಮತ್ತು ತೇವಾಂಶವನ್ನು ತೆಗೆದುಹಾಕುತ್ತದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories