Kiara Advani: ಹೈಟ್ 5.2 ಆದ್ರೂ ಕಿಯಾರಾ ಅಡ್ವಾಣಿ ಅಷ್ಟೊಂದು ಎತ್ತರ ಕಾಣಿಸೋದು ಹೇಗೆ … ಸೀಕ್ರೆಟ್ ರಿವೀಲ್

Published : Jun 26, 2026, 03:10 PM IST

Kiara Advani : ನೀವು ತುಂಬಾ ಕುಳ್ಳಗಿದ್ದೀರಾ? ಆದರೆ ಹೆಚ್ಚು ಶ್ರಮವಿಲ್ಲದೆ ಎತ್ತರವಾಗಿ ಕಾಣಲು ಬಯಸಿದರೆ, ನೀವು ಖಂಡಿತವಾಗಿಯೂ ಕಿಯಾರಾ ಅಡ್ವಾಣಿಯವರ ಸ್ಟೈಲ್ ಫಾಲೋ ಮಾಡಬಹುದು. ನೀವು ಎತ್ತರವಾಗಿ ಮತ್ತು ತೆಳ್ಳಗೆ ಕಾಣಲು ಸಹಾಯ ಮಾಡುವ ನಟಿಯ ಐದು ಫ್ಯಾಷನ್ ಟೆಕ್ನಿಕ್ ಬಗ್ಗೆ ತಿಳಿಯಿರಿ. 

PREV
17
ಟಾಕ್ಸಿಕ್ ಸುಂದರಿ ಕಿಯಾರಾ ಅಡ್ವಾಣಿ

ನಟಿ ಕಿಯಾರಾ ಅಡ್ವಾಣಿ ಯಾರಿಗೆ ಗೊತ್ತಿಲ್ಲ ಹೇಳಿ? ಇಂದು, ಜಗತ್ತು ಅವರ ನಟನೆ ಮತ್ತು ಸ್ಟೈಲ್ ಗೆ ಮನ ಸೋತಿದೆ.ಬಾಲಿವುಡ್ ಅಲ್ಲದೇ ತೆಲುಗು ಚಿತ್ರರಂಗದಲ್ಲೂ ನಟಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದೀಗ ಟಾಕ್ಸಿಕ್ ಸಿನಿಮಾದಲ್ಲೂ ಯಶ್ ಜೊತೆ ರೊಮ್ಯಾನ್ಸ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ನಟಿಯನ್ನು ನೋಡಿದ್ರೆ ಆಕೆಯ ಎತ್ತರ ಕನಿಷ್ಠ 5'7 ಅಥವಾ 5'8 ಇದೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ನಟಿಯ ನಿಜವಾದ ಹೈಟ್ ಎಷ್ಟು ಗೊತ್ತಾ?

27
ಕಿಯಾರಾ ಅವರ ಎತ್ತರ ಎಷ್ಟು?

ಕಿಯಾರಾ ಅಡ್ವಾಣಿ ಅವರ ಎತ್ತರ 5'2 ರಿಂದ 5'3 ರ ನಡುವೆ ಇದೆ. ಆದರೆ, ಅವರು ರೆಡ್ ಕಾರ್ಪೆಟ್ ಮೇಲೆ, ಚಲನಚಿತ್ರಗಳಲ್ಲಿ ಅಥವಾ ಫೋಟೋಶೂಟ್‌ಗಳಲ್ಲಿ ಹೆಚ್ಚು ಎತ್ತರವಾಗಿ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಇದು ಖಂಡಿತವಾಗಿಯೂ ಮ್ಯಾಜಿಕ್ ಅಲ್ಲ, ಬದಲಿಗೆ ಸ್ಮಾರ್ಟ್ ಸ್ಟೈಲಿಂಗ್‌ನ ರಿಸಲ್ಟ್. ಅವರುಕೆಲವು ಟ್ರಿಕ್ಸ್ ಫಾಲೋ ಮಾಡುವ ಮೂಲಕ ಶಾರ್ಟ್ ಇದ್ದರೂ ಹೈಟ್ ಇರುವಂತೆ ಕಾಣಿಸುತ್ತಾರೆ.

37
ಮೋನೊಕ್ರೋಮ್ ಡ್ರೆಸ್

ಕಿಯಾರಾ ಶಾರ್ಟ್ ಇದ್ದರೂ ಎತ್ತರವಾಗಿ ಕಾಣುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರ ಮೊನೊಕ್ರೋಮ್ ಡ್ರೆಸ್, ಅಂದರೆ, ಏಕವರ್ಣದ ಉಡುಪುಗಳು. ಅವರು ಹೆಚ್ಚಾಗಿ ಒಂದೇ ಬಣ್ಣದ ಟಾಪ್ ಮತ್ತು ಬಾಟಮ್ ಧರಿಸುತ್ತಾರೆ. ಕಿಯಾರಾ ಸಾಮಾನ್ಯವಾಗಿ ಸಂಪೂರ್ಣ ಉಡುಪನ್ನು ಒಂದೇ ಬಣ್ಣದಲ್ಲಿ ಧರಿಸುತ್ತಾರೆ. ಇದರಿಂದ ಅವರು ಹೆಚ್ಚು ಹೈಟ್ ಕಾಣಿಸುತ್ತಾರೆ.

47
ಹೈ-ವೇಸ್ಟೆಡ್ ಬಾಟಮ್ಸ್

ಕಿಯಾರ ಹೆಚ್ಚಾಗಿ ಹೈ-ವೇಸ್ಟೆಡ್ ಬಾಟಮ್ಸ್ ಧರಿಸುತ್ತಾರೆ. ಹೈ-ವೇಸ್ಟೆಡ್ ಪ್ಯಾಂಟ್, ಸ್ಕರ್ಟ್‌ಗಳು ಅಥವಾ ಲೆಹೆಂಗಾಗಳು ಸೊಂಟವನ್ನು ಎದ್ದು ಕಾಣುವಂತೆ ಮಾಡುತ್ತದೆ, ಇದರಿಂದಾಗಿ ನಟಿಯ ಕಾಲುಗಳು ಉದ್ದವಾಗಿ ಕಾಣುತ್ತವೆ. ಈ ಕಾಂಬಿನೇಶನ್ ಶಾರ್ಟ್ ಟಾಪ್‌ಗಳೊಂದಿಗೆ ಹೆಚ್ಚಾಗಿ ಮಾಡುತ್ತಾರೆ.

57
ಶಾರ್ಪ್ ಹೀಲ್ಸ್-ನ್ಯೂಡ್ ಕಲರ್ಸ್

ಕಿಯಾರಾ ಯಾವಾಗಲೂ ಶಾರ್ಪ್ ಹೀಲ್ಸ್ ಧರಿಸುತ್ತಾರೆ. ಶಾರ್ಪ್ ಸ್ಟಿಲೆಟ್ಟೊಗಳು ಅಥವಾ ಶಾರ್ಪ್ ಬೂಟುಗಳು ಕಾಲುಗಳನ್ನು ಉದ್ದವಾಗಿ ಕಾಣುವಂತೆ ಮಾಡುತ್ತೆ, ಇದರಿಂದ ಶಾರ್ಟ್ ಇದ್ದವರೂ ಸಹ ಎತ್ತರವಾಗಿ ಕಾಣಿಸುತ್ತಾರೆ. ನ್ಯೂಡ್ ಅಥವಾ ಸ್ಕಿನ್ ಟೋನ್ ಹೀಲ್ಸ್ ಧರಿಸುವುದರಿಂದ ಕಾಲುಗಳು ಉದ್ದವಾಗಿ ಕಾಣುತ್ತವೆ. ನಟಿ ಹೆಚ್ಚಾಗಿ ಅಂತವುಗಳನ್ನೇ ಧರಿಸಿ ಎತ್ತರವಾಗಿ ಕಾಣಿಸಿಕೊಳ್ಳುತ್ತಾರೆ.

67
ವಿ-ನೆಕ್‌ಗಳು ಮತ್ತು ಓಪನ್ ನೆಕ್‌ಲೈನ್‌ಗಳು

ನಟಿಯರು ಹೆಚ್ಚಾಗಿ ವಿ-ಆಕಾರದ ಅಥವಾ ಡೀಪ್ ನೆಕ್‌ಲೈನ್‌ಗಳನ್ನು ಧರಿಸುವುದನ್ನು ಕಾಣಬಹುದು. ಇವು ಸ್ಟೈಲಿಶ್ ಆಗಿ ಕಾಣುವುದಲ್ಲದೆ ಮುಖ ಮತ್ತು ಕುತ್ತಿಗೆಯನ್ನು ಉದ್ದವಾಗಿ ಕಾಣುವಂತೆ ಮಾಡುತ್ತದೆ. ಇದು ದೇಹದ ಶೇಪ್ ನ್ನು ತೆಳ್ಳಗೆ ಮತ್ತು ಎತ್ತರವಾಗಿ ಕಾಣುವಂತೆ ಮಾಡುತ್ತದೆ. ಜೊತೆಗೆ ಉದ್ದನೆಯ ಕಿವಿಯೋಲೆ ಧರಿಸುವ ಮೂಲಕ ಹೈಟ್ ಹೆಚ್ಚಿಗೆ ಕಾಣುವಂತೆ ಮಾಡುತ್ತಾರೆ.

77
ಪೋಸ್ಚರ್ ಮತ್ತು ಕಾನ್ಫಿಡೆನ್ಸ್

ಕಿಯಾರಾ ಪ್ಯಾಪ್ಸ್ ಮುಂದೆ ಕಾಣಿಸಿಕೊಂಡಾಗಲೆಲ್ಲಾ, ಬೆನ್ನು ನೇರವಾಗಿ, ಭುಜಗಳನ್ನು ಹಿಂದಕ್ಕೆ ಮತ್ತು ಗಲ್ಲವನ್ನು ಮೇಲಕ್ಕೆ ಇಟ್ಟುಕೊಂಡಿರುವುದನ್ನು ನೀವು ಗಮನಿಸಬಹುದು. ಇದರಿಂದ ಕಾನ್ಫಿಡೆನ್ಸ್ ಕೂಡ ಹೆಚ್ಚುತ್ತದೆ. ಉತ್ತಮ ಭಂಗಿಯು ಕುಳ್ಳ ಆಕೃತಿಯನ್ನು ಎತ್ತರವಾಗಿ ಕಾಣುವಂತೆ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories