ಬೀಟ್ರೂಟ್ ರಸದಿಂದ ತಯಾರಿಸಿ ಕಣ್ಣುಗಳಿಗೆ ಆಕರ್ಷಕ ಲುಕ್ ನೀಡುವ ಐಲೈನರ್

First Published Nov 5, 2022, 10:54 AM IST

ಕಣ್ಣುಗಳು ನಮ್ಮ ದೇಹದ ಪ್ರಮುಖ ಭಾಗವಾಗಿದ್ದು, ಮುಖವನ್ನು ಆಕರ್ಷಕವನ್ನಾಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತೆ. ಕಣ್ಣನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು ನಾವು ಕಾಜಲ್ ಹಚ್ಚುತ್ತೇವೆ. ಇಂದು ನಾವು ಕಾಜಲ್ ಗೆ ಸಂಬಂಧಿಸಿದ ಕೆಲವು ಸಲಹೆಗಳನ್ನು ಹೇಳಲಿದ್ದೇವೆ. ಇದನ್ನು ತಿಳಿದ ನಂತರ, ನೀವು ಮಾರುಕಟ್ಟೆಯ ದುಬಾರಿ ಮಸ್ಕರಾಕ್ಕೆ ಖಂಡಿತವಾಗಿ ಗುಡ್ ಬೈ ಹೇಳುವಿರಿ. 
 

ಕಜ್ರಾ ರೆ ಕಜ್ರಾ ರೇ... ತೆರೆ ಕಾಲೆ ಕಾಲೆ ನೈನಾ. ಈ ಹಾಡನ್ನು ಯಾರು ಮರೆಯಲು ಸಾಧ್ಯ? ಈ ಹಾಡಿನ ಬಿಡುಗಡೆಯ ನಂತರ, ಸಾಮಾನ್ಯವಾದ ಒಂದು ವಿಷಯ ಏನೆಂದರೆ ಹುಡುಗಿ ಕಾಜಲ್ ಅಥವಾ ಮಸ್ಕರಾ ಹಾಕಿದ ಹುಡುಗಿ ಕಂಡ ಕೂಡಲೇ ಹುಡುಗರು ಈ ಹಾಡು ಹೇಳಲು ಆರಂಭಿಸುತ್ತಿದ್ದರು. ಯಾಕೆಂದರೆ ಕಾಡಿಗೆ ಬಳಿದ ಹೆಣ್ಣಿನ ಸೌಂದರ್ಯವೇ ಹಾಗಿರುತ್ತೆ.

ನಾವು ಎಲ್ಲಾ ಸೌಂದರ್ಯ ಉತ್ಪನ್ನಗಳಿಗೆ ಹೋಲಿಕೆ ಮಾಡಿದ್ರೆ ಎಲ್ಲಾ ಬ್ಯೂಟಿ ಪ್ರಾಡಕ್ಟ್ ಒಂದು ಬದಿಯಲ್ಲಿ ಇದ್ದರೆ, ಮಸ್ಕರಾ (mascara)ಸೌಂದರ್ಯವು ಎಲ್ಲದಕ್ಕೂ ಹೈ ಲೈಟ್ ಆಗಿರುತ್ತೆ.  ಕಾಜಲ್ ನ ಬಣ್ಣವು ಕಪ್ಪಾಗಿರಬಹುದು, ಆದರೆ ಯಾವುದೇ ಹುಡುಗಿ ಅಥವಾ ಮಹಿಳೆ ಕಾಜಲ್ ನಿಂದ ತನ್ನ ಕಣ್ಣುಗಳನ್ನು ಅಲಂಕರಿಸಿದರೆ, ಅವಳ ಸೌಂದರ್ಯವು ನೋಡಲು ಯೋಗ್ಯವಾಗಿರುತ್ತೆ. ಶತಶತಮಾನಗಳಿಂದ, ಮಹಿಳೆಯರು ತಮ್ಮ ಕಣ್ಣುಗಳ ಸೌಂದರ್ಯವನ್ನು ಹೆಚ್ಚಿಸಲು ಮಸ್ಕರಾ ಮತ್ತು ಐಲೈನರ್ ಅನ್ನು ಬಳಸುತ್ತಿದ್ದಾರೆ. 

ಮಾರುಕಟ್ಟೆಯ ದುಬಾರಿ ಮಸ್ಕರಾ ಬೈ ಹೇಳಿ
ಇಂದಿನ ಆಧುನಿಕ ಜೀವನಶೈಲಿಯ ಬಗ್ಗೆ ನೀವು ಗಮನ ಹರಿಸಿದ್ದರೆ, ಎಲ್ಲಾ ವಯಸ್ಸಿನ ಹುಡುಗಿಯರು ಅಥವಾ ಮಹಿಳೆಯರ ಹ್ಯಾಂಡ್ ಬ್ಯಾಗ್ ನಲ್ಲಿ ಮಸ್ಕರಾ ಇದ್ದೇ ಇರುತ್ತೆ.ಆದರೆ ಇತ್ತೀಚಿನ ದಿನಗಳಲ್ಲಿ ಕಾಜಲ್ ತುಂಬಾ ದುಬಾರಿಯಾಗಿವೆ. ಅಷ್ಟೇ ಅಲ್ಲದೇ,, ಮಾರುಕಟ್ಟೆಯಲ್ಲಿ ಕಂಡುಬರುವ ಮಸ್ಕರಾದಲ್ಲಿ ಸಾಕಷ್ಟು ರಾಸಾಯನಿಕಗಳಿವೆ (chemical based eyeliner). ಈ ಕಾರಣದಿಂದಾಗಿ ಮಹಿಳೆಯರು ಮತ್ತು ಹುಡುಗಿಯರಿಗೆ ಕಣ್ಣಿನ ಸಮಸ್ಯೆಗಳು ಸಹ ಹೆಚ್ಚಾಗಿವೆ. 

ಮನೆಯಲ್ಲಿ ಬೀಟ್ ರೂಟ್ ನಿಂದ ಮಸ್ಕರಾ (beetroot mascara) ತಯಾರಿಸಿ
ಹೆಚ್ಚಿನ ಮಹಿಳೆಯರು ಕಾಜಲ್ ಹಾಕಿಯೇ ಹಾಕುತ್ತಾರೆ. ಅದಕ್ಕಾಗಿಯೇ ಇಂದು ನಾವು ನಿಮಗೆ ಕಾಜಲ್ ಗೆ ಸಂಬಂಧಿಸಿದ ಕೆಲವು ಸಲಹೆಗಳನ್ನು ನೀಡಲಿದ್ದೇವೆ, ಇದರಿಂದ ನೀವು ಮಾರುಕಟ್ಟೆಯ ಮಸ್ಕರಾವನ್ನು ಅವಲಂಬಿಸಬೇಕಾಗಿಲ್ಲ, ನೀವು ಮನೆಯಲ್ಲಿ ಆಯುರ್ವೇದ ವಿಧಾನದಲ್ಲಿ ಕಾಜಲ್ ಅನ್ನು ತಯಾರಿಸಬಹುದು. 

ಮನೆಯಲ್ಲಿ ತಯಾರಿಸಿದ ಮಸ್ಕರಾದ ಬೆಸ್ಟ್ ಕ್ವಾಲಿಟಿ ಎಂದರೆ, ಈ ಮಸ್ಕರಾದಲ್ಲಿ ಯಾವುದೇ ರಾಸಾಯನಿಕ ಇರುವುದಿಲ್ಲ, ಇದನ್ನು ಹಚ್ಚೋದ್ರಿಂದ ಯಾವುದೇ ಅಡ್ಡಪರಿಣಾಮಗಳನ್ನು ಹೊಂದುವ ಪ್ರಶ್ನೆಯೇ ಇರೋದಿಲ್ಲ.. ಆದ್ದರಿಂದ ಇದನ್ನು ನೀವು ಮನೆಯಲ್ಲಿ ಸುಲಭವಾಗಿ ಮಾಡಬಹುದು.

ಇದನ್ನು ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ :
ನೀವು ಯಾವಾಗಲೂ ನಿಮ್ಮ ಮೇಕಪ್ ನೊಂದಿಗೆ ಡಿಫರೆಂಟ್ ಆಗಿ ಏನಾದರೂ ಟ್ರೈ ಮಾಡಲು ಬಯಸಿದರೆ ಈ ಸಲಹೆಗಳು ನಿಮ್ಮ ಉಪಯೋಗಕ್ಕೆ ಬರುತ್ತವೆ. ನಿಮಗಾಗಿ ಒಂದು ಉತ್ತಮ ಐಲೈನರ್ ಸೂತ್ರವಿದೆ. ಬೀಟ್ರೂಟ್ ಜ್ಯೂಸ್ (beetroot juice) ಮಸ್ಕರಾವನ್ನು ಮನೆಯಲ್ಲಿ ಬೇಗನೆ ತಯಾರಿಸುವುದು ಹೇಗೆ ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ. 

ಈ ಮಸ್ಕರಾ ತಯಾರಿಸಲು ಮೊದಲು ಅರ್ಧದಷ್ಟು ಬೀಟ್ರೂಟ್ ಅನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಬೀಟ್ ರೂಟ್ ರಸವನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಒಂದು ಬೌಲ್ ನಲ್ಲಿ ಹೊರತೆಗೆಯಿರಿ. ಮತ್ತೊಂದು ಬೌಲ್ ನಲ್ಲಿ ಒಂದು ಟೀಚಮಚ ಬೀಟ್ ರೂಟ್ ರಸವನ್ನು ತೆಗೆದುಕೊಳ್ಳಿ ಮತ್ತು ನಂತರ ಅದಕ್ಕೆ ಎರಡು ಟೀಚಮಚ ಅಲೋವೆರಾ ಜೆಲ್ ಅನ್ನು ಸೇರಿಸಿ. ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ತಯಾರಿಸಿ. ತದನಂತರ ಮಸ್ಕರಾ ಬ್ರಶ್ ಸಹಾಯದಿಂದ ಈ ಪೇಸ್ಟ್ ಅನ್ನು ನಿಮ್ಮ ಕಣ್ಣುಗಳಿಗೆ ಹಚ್ಚಿಕೊಳ್ಳಿ.

ಬೀಟ್ ರೂಟ್ ಮಸ್ಕರಾದ ಒಂದು ಪ್ರಯೋಜನವೆಂದರೆ ಈ ಪೇಸ್ಟ್ ನಿಮ್ಮ ಕಣ್ಣುಗಳ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ. ಎರಡನೆಯ ಪ್ರಯೋಜನವೆಂದರೆ ಯಾರಾದರೂ ಅದನ್ನು ನೋಡಿದರೆ, ನೀವು ಮರೂನ್ ಬಣ್ಣದ ಐಲೈನರ್ ಅನ್ನು ಎಲ್ಲಿಂದ ತೆಗೆದುಕೊಂಡಿದ್ದೀರಿ ಎಂದು ಕೇಳೋದಂತೂ ಗ್ಯಾರಂಟಿ.

ಆಕ್ಟಿವ್ ಚಾರ್ಕೋಲ್ ಐಲೈನರ್
ಮನೆಯಲ್ಲಿ ತಯಾರಿಸಿದ ಕಪ್ಪು ಐಲೈನರ್ ನಲ್ಲಿ ಬಳಸುವ ಅತ್ಯಂತ ವಸ್ತು ಎಂದರೆ ಇದ್ದಿಲು. ಮೊದಲನೆಯದಾಗಿ, ಇದ್ದಿಲಿನ ಪುಡಿಯನ್ನು (active charcoal) ತಯಾರಿಸಲಾಗುತ್ತದೆ. ತದನಂತರ ಅದಕ್ಕೆ ನೀರು ಅಥವಾ ತೆಂಗಿನಕಾಯಿ, ಬಾದಾಮಿ ಅಥವಾ ಜೊಜೊಬಾ ಎಣ್ಣೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತೆಳುವಾದ ಮೇಕಪ್ ಬ್ರಷ್ ಸಹಾಯದಿಂದ, ಐ ಲೈನರ್ ನಂತೆ ಕಣ್ಣುಗಳ ಮೇಲೆ ಹಚ್ಚಿ.

click me!