ಪಾರ್ಟಿಗೆ ಹೋಗೋ ಮುನ್ನ ಈ ರೀತಿ ಗ್ರೂಮಿಂಗ್ ಮಾಡ್ಕೊಳಿ

First Published | Oct 31, 2022, 3:45 PM IST

ಪಾರ್ಟಿಗೆ ಹೋಗಲು ಈಗಾಗಲೇ ಎಲ್ಲಾ ರೀತಿಯಾಗಿ ರೆಡಿಯಾಗಿದ್ದೀರಾ? ಬಟ್ಟೆಗಳಿಂದ ಹಿಡಿದು ಶೂಗಳವರೆಗೆ ಮತ್ತು ನಂತರ ಹೇರ್ ಸ್ಟೈಲ್ ಕೂಡ ರೆಡಿಯಾಗಿದೆ. ಆದರೂ ನೀವಿನ್ನೂ ಪೂರ್ತಿಯಾಗಿ ರೆಡಿಯಾಗಿಲ್ಲ. ಅದು ಹೇಗೆ, ಎಂದು ನೀವು ಯೋಚಿಸುತ್ತಿದ್ದೀರಿ ಅಲ್ವಾ?  ಪಾರ್ಟಿಗೆ ಹೋಗಲು ನೀವು ಪಾರ್ಟಿಗೆ ಮುಂಚಿತವಾಗಿ ಗ್ರೂಮಿಂಗ್ ಮಾಡಬೇಕು. ಇದರಿಂದ ಪಾರ್ಟಿಯಲ್ಲಿ ಎಲ್ಲರ ಕಣ್ಣುಗಳು ನಿಮ್ಮ ಮೇಲೆ ಇರುತ್ತವೆ. ಇದಕ್ಕಾಗಿ, ನೀವು ಕೆಲವು ವಿಶೇಷ ಗ್ರೂಮಿಂಗ್ ಟಿಪ್ಸ್ ಟ್ರೈ ಮಾಡಬೇಕು. ಈ ಸಲಹೆಗಳನ್ನು ಪ್ರಯತ್ನಿಸುವ ಮೂಲಕ, ನೀವು ಖಂಡಿತವಾಗಿಯೂ ಎಲ್ಲರ ಹೃದಯ ಗೆಲ್ಲೋದು ಗ್ಯಾರಂಟಿ. 

ಪಾರ್ಟಿಯ ಮೊದಲು ಗ್ರೂಮಿಂಗ್  
ನೀವು ಗ್ರೂಮಿಂಗ್ ಬಗ್ಗೆ ಸಾಕಷ್ಟು ಗಮನ ಹರಿಸಿದರೆ, ಪಾರ್ಟಿಗೆ ಮೊದಲು ಅದರ ಬಗ್ಗೆ ವಿಶೇಷ ಗಮನ ಹರಿಸಿ. ನೀವು ಏನು ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳಿ-

1. ಒಂದು ದಿನ ಮುಂಚಿತವಾಗಿ ಎಕ್ಸ್ಫೋಲಿಯೇಟ್ ಮಾಡಿ
ಕನಿಷ್ಠ ಪ್ರಯತ್ನದಲ್ಲಿ, ಗರಿಷ್ಠ ಪ್ರಯೋಜನ ಪಡೆಯಲು ಮೊದಲಿಗೆ ಮುಖಕ್ಕೆ ಎಕ್ಸ್ಫೋಲಿಯೇಟ್ (exfoliate) ಮಾಡಬೇಕು. ಎಕ್ಸ್ಫೋಲಿಯೇಶನ್ ನಂತರ, ಚರ್ಮವು ತಾಜಾವಾಗುತ್ತದೆ. ಇದು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ, ಅಲ್ಲದೇ ಚರ್ಮದಲ್ಲಿರುವ ಕೊಳೆಯೂ ನಿವಾರಣೆಯಾಗುತ್ತೆ. ವಿಷವು ಬಿಡುಗಡೆಯಾದ ತಕ್ಷಣ ಚರ್ಮವು ತಾಜವಾಗುತ್ತದೆ. ಇದಕ್ಕಾಗಿ, ಸ್ವಲ್ಪ ಸ್ಕ್ರಬ್ ತೆಗೆದುಕೊಳ್ಳಿ. ಈಗ ಹಣೆ, ಕೆನ್ನೆ, ಗಲ್ಲ ಮತ್ತು ಮೂಗಿನ ಮೇಲೆ ಬೆರಳಿನ ತುದಿಯಿಂದ ಮಸಾಜ್ ಮಾಡಿ. 

2. ಹೊಸ ಹೇರ್ ಕಟ್ ಮಾಡಿಸಿಕೊಳ್ಳಿ 
ಪಾರ್ಟಿಗೆ ಹೋಗುವ ಮೊದಲು ಹೇರ್ ಕಟ್ (new haircut) ಮಾಡುವುದು ಅತ್ಯಗತ್ಯ. ಇದು ಮುಖ್ಯವಾಗಿದೆ ಏಕೆಂದರೆ ನಿಮ್ಮ ಲುಕ್ ಚೆನ್ನಾಗಿ ಕಾಣಿಸುತ್ತೆ.  ಆದರೆ ಕೂದಲಿನ ಬಗ್ಗೆ ಯಾವುದೇ ವಿಶಿಷ್ಟ ಪ್ರಯೋಗ ಮಾಡದಿರೋದು ಒಳ್ಳೇದು. ಸೇಫ್ ಆಗಿರೋ ಹೇರ್ ಸ್ಟೈಲ್ ಮಾಡಿ. ಇದು ನಿಮ್ಮ ಲುಕ್ ನ್ನು ಬದಲಾಯಿಸುತ್ತೆ. ಇದರಿಂದ ನಿಮ್ಮ ಸಂಪೂರ್ಣ ಲುಕ್ ಬದಲಾಗುತ್ತೆ. 

Latest Videos


3. ಸಣ್ಣ ವಿಷಯಗಳ ಬಗ್ಗೆ ಗಮನ ಹರಿಸಿ 
ಸಾಮಾನ್ಯವಾಗಿ ಪುರುಷರು ಕೂದಲು, ಬಟ್ಟೆ ಮತ್ತು ಹೇರ್ ಸ್ಟೈಲ್ ಚರ್ಮದ ಬಗ್ಗೆ ಗಮನ ಹರಿಸುತ್ತಾರೆ, ಆದರೆ ಸಣ್ಣ ವಿಷಯಗಳನ್ನು ಬಿಟ್ಟುಬಿಡುತ್ತಾರೆ. ಅಂದರೆ ಉಗುರು, ಕಿವಿಗಳು ಅಥವಾ ಮೂಗಿನಿಂದ ಹೊರಬರುವ ಕೂದಲು. ಇವುಗಳ ಬಗ್ಗೆಯೂ ಗಮನ ಹರಿಸಬೇಕು.  ಇದರಿಂದ ನಿಮ್ಮ ಲುಕ್ ಕಂಪ್ಲೀಟ್ ಆಗುತ್ತೆ. ಇದರ ಜೊತೆಗೆ ಡ್ರೆಸ್ ಬಗ್ಗೆಯೂ ಗಮನ ಹರಿಸಬೇಕು.
 

4. ಸ್ವಲ್ಪ ಮೇಕಪ್
ಇತ್ತೀಚಿನ ದಿನಗಳಲ್ಲಿ ಪುರುಷರು ಸಹ ಮೇಕಪ್ (makeup) ಮಾಡ್ತಾರೆ. ನೀವು ಸಹ ಇದನ್ನ ಟ್ರೈ ಮಾಡಿ. ಆದರೆ ಆ ದಿನ ಮೇಕಪ್ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತೆ, ಆದ್ದರಿಂದ ನೀವು ಒಂದು ದಿನ ಮುಂಚಿತವಾಗಿ ಮೇಕಪ್ ಟ್ರೈ ಮಾಡಬೇಕು. ಇದರಿಂದ ನಿಮ್ಮ ಮುಖಕ್ಕೆ ಯಾವ ಮೇಕಪ್ ಚೆನ್ನಾಗಿ ಕಾಣುತ್ತೆ ಅನ್ನೋದು ತಿಳಿಯುತ್ತೆ.

5. ಲಾಂಗ್ ಲಾಸ್ಟಿಂಗ್ ಡಿಯೋ
ಪಾರ್ಟಿಗೆ ಹೋಗುವ ಮೊದಲು, ಲಾಂಗ್ ಲಾಸ್ಟಿಂಗ್ ಡಿಯೋ (long lasting deodorant) ಬಳಸಬೇಕು. ಇದನ್ನು ಬಳಸೋದ್ರಿಂದ ನೀವು ದೀರ್ಘ ಕಾಲದವರೆಗೂ ಫ್ರೆಶ್ ಆಗಿರಬಹುದು. ಸ್ಯಾಂಡಲ್, ಮಾಸ್ಕ್, ಪಚೌಲಿಯಂತಹ ತಯಾರಿಸಿದ ಡಿಯೋ ತುಂಬಾ ಸಮಯದವರೆಗೆ ಹಾಗೆ ಉಳಿಯುತ್ತೆ. ಈ ಸಮಯದಲ್ಲಿ, ಮಣಿಕಟ್ಟು ಮತ್ತು ಕುತ್ತಿಗೆಯ ಮೇಲೆ, ಎದೆ ಮೇಲೆ, ಅಂಡರ್ ಆರ್ಮ್ ಗೆ ಡೀಯೋ ಹಾಕೋದನ್ನು ಮರೆಯಬೇಡಿ. 

6. ಸೀರಮ್ ಮತ್ತು ಮಾಯಿಶ್ಚರೈಸರ್
ನೀವು ಆಗಾಗ್ಗೆ ಚರ್ಮದ ಆರೈಕೆಯನ್ನು ತೆಗೆದುಕೊಳ್ಳದಿದ್ದರೂ, ಪಾರ್ಟಿಯ ಮೊದಲು ಚರ್ಮದ ಆರೈಕೆ ಮಾಡೋದು ಮುಖ್ಯ. ಇದಕ್ಕಾಗಿ, ನೀವು ಪಾರ್ಟಿಯ ಹಿಂದಿನ ರಾತ್ರಿ ಚರ್ಮದ ಆರೈಕೆ ಮಾಡಬೇಕು. ಅದಕ್ಕಾಗಿ ಸೀರಮ್ (serum) ಮತ್ತು ಮಾಯಿಶ್ಚರೈಸರ್ (moisturiser) ಬಳಸಬೇಕು. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತೆ.

7. ಆಯಾಸ ನಿವಾರಿಸಲು ಶೀಟ್ ಮಾಸ್ಕ್
ಶೀಟ್ ಮಾಸ್ಕ್ (sheet mask) ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಇದು ತಕ್ಷಣವೇ ಮುಖದ ಮೇಲೆ ಪರಿಣಾಮ ಬೀರುತ್ತೆ. ನೀವು ದಿನವಿಡೀ ತುಂಬಾ ದಣಿದಿರುವಾಗ ಸಂಜೆ ಶೀಟ್ ಮಾಸ್ಕ್ ಬಳಸಿದ್ರೆ ಆಯಾಸ ತಕ್ಷಣವೇ ದೂರವಾಗುತ್ತೆ. ಆದ್ದರಿಂದ ನಿಮ್ಮ ಚರ್ಮಕ್ಕೆ ಅನುಗುಣವಾಗಿ ಶೀಟ್ ಮಾಸ್ಕ್ ಅನ್ನು ತನ್ನಿ. ಪಾರ್ಟಿಗೆ ಸಿದ್ಧರಾಗುವ ಮೊದಲು ಮಾಸ್ಕ್ ಧರಿಸಿ. 

8. ಹಲ್ಲುಗಳನ್ನು ಸ್ವಚ್ಛಗೊಳಿಸೋದು
ಹೌದು, ನೀವು ಪ್ರತಿದಿನ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಿರಬೇಕು (clean teeth) , ಆದರೆ ಪಾರ್ಟಿಗೆ ಮೊದಲು, ಹಲ್ಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಒಂದು ರಾತ್ರಿ ಮೊದಲು ಬಾಯಿಯನ್ನು ತೊಳೆಯಿರಿ. ಪಾರ್ಟಿಗೆ ಹೊರಡುವ ಮೊದಲೇ ಬಾಯಿ ಕ್ಲೀನ್ ಮಾಡಿ. ಇದರಿಂದ ನಿಮ್ಮ ಬಾಯಿಯಿಂದ ವಾಸನೆ ಬರೋದಿಲ್ಲ ಮತ್ತು ನಿಮ್ಮ ಬಾಯಿ ಸಹ ತಾಜಾವಾಗಿರುತ್ತೆ.  

9. ಡ್ರೈ ಶಾಂಪೂ ಟ್ರೈ ಮಾಡಿ
ಪಾರ್ಟಿಗೆ ತಯಾರಾಗಲು ನಿಮಗೆ ಸಮಯವಿಲ್ಲದಿರೋದ್ರಿಂದ ಕೂದಲನ್ನು ಚೆನ್ನಾಗಿ ತೊಳೆಯಲು ಸಾಧ್ಯವಾಗದಿರಬಹುದು.  ಅಂತಹ ಸಮಯದಲ್ಲಿ ನೀವು ಡ್ರೈ ಶಾಂಪೂ (dry shampoo) ಟ್ರೈ ಮಾಡಿ.  ಇದು ಕೆಲವೇ ನಿಮಿಷಗಳಲ್ಲಿ ನಿಮ್ಮ ಕೂದಲನ್ನು ತಾಜಾತನದಿಂದ ಕಾಣುವಂತೆ ಮಾಡುತ್ತದೆ. ಇದು ಕೂದಲನ್ನು ಮಾತ್ರವಲ್ಲದೆ ನಿಮ್ಮನ್ನು ಸಹ ರಿಫ್ರೆಶ್ ಮಾಡುತ್ತಾರೆ. ನಿಮ್ಮ ಕೂದಲಿಗೆ ಅನುಗುಣವಾಗಿ ನೀವು ಅತ್ಯುತ್ತಮಡ್ರೈ ಒಣ ಶಾಂಪೂ ಖರೀದಿಸಬಹುದು. 

10. ತುಟಿಗಳಿಗೇನು ಮಾಡೋದು?
ನೀವು ಟಾಪ್ ಟು ಬಾಟಮ್ ಚೆನ್ನಾಗಿ ಕಾಣಬೇಕೆಂದು ಬಯಸುವಿರಿ, ಹೀಗಿರೋವಾಗ ತುಟಿಗಳನ್ನು ಇಗ್ನೋರ್ ಮಾಡಬೇಡಿ. ಆದ್ದರಿಂದ ಪಾರ್ಟಿಗೆ ಹೋಗುವ ಮೊದಲು ಲಿಪ್ ಬಾಮ್ ಹಚ್ಚೋದನ್ನು ಮರೆಯಬೇಡಿ. ನೀವು ಈ ಲಿಪ್ ಬಾಮ್ ನಿಮ್ ಜೊತೆ ಇಟ್ಟುಕೊಂಡರೆ ಒಳ್ಳೆಯದು.

click me!