ಮೊಸರಿನೊಂದಿಗೆ ಈ ವಸ್ತು ಬೆರೆಸಿ ಸೇವಿಸಿದ್ರೆ ಕೂದಲು ಉದುರಲ್ವಂತೆ!

First Published | Oct 9, 2023, 2:38 PM IST

ಕೂದಲು ಉದುರುವುದನ್ನು ತಡೆಯಲು ಎಲ್ಲಾ ಟಿಪ್ಸ್ ಗಳನ್ನು ಫಾಲೋ ಮಾಡಿ, ಮಾಡಿ ನಿಮಗೂ ಸಾಕಾಗಿ ಹೋಗಿದೆ ಅಲ್ವಾ?, ಈ ಬಾರಿ ಮೊಸರಿನೊಂದಿಗೆ ಈ ಒಂದು ವಸ್ತುವನ್ನು ಒಮ್ಮೆ ಟ್ರೈ ಮಾಡಿ. ನಿಮ್ಮ ಸಮಸ್ಯೆ ಕಡಿಮೆಯಾಗಬಹುದು.
 

ಕೂದಲು ಉದುರುವುದು (hair loss) ಎಲ್ಲರೂ ಅನುಭವಿಸುವ ಸಾಮಾನ್ಯ ಸಮಸ್ಯೆ. ಬಹಳಷ್ಟು ಜನರು ಈ ಸಮಸ್ಯೆಯಿಂದ ಬೇಸತ್ತಿದ್ದಾರೆ. ಈ ಕಾರಣದಿಂದ ಕೂದಲು ತೆಳ್ಳಗಾಗುತ್ತದೆ ಮತ್ತು ತುಂಬಾ ಹಗುರವಾಗುತ್ತದೆ. ವಿಶೇಷವಾಗಿ ಮಹಿಳೆಯರು ಈ ಸಮಸ್ಯೆಗೆ ಹೆಚ್ಚಾಗಿ ಒಳಗಾಗುತ್ತಾರೆ. ಅನೇಕ ಬಾರಿ ಕೂದಲು ಉದುರುವಿಕೆಯು ಸಮಸ್ಯೆ ಎಷ್ಟಿರುತ್ತೆ ಅಂದ್ರೆ, ಕೂದಲು ಮನೆಯ ಎಲ್ಲೆಡೆ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಏನು ಮಾಡಬೇಕೆಂದು ಜನರಿಗೆ ತಿಳಿದಿಲ್ಲ. 
 

ಕೂದಲು ಉದುರೋದನ್ನು ತಡೆಯಲು ಕೆಲವರು ಕೂದಲಿನ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ, ಕೆಲವರು ಶಾಂಪೂ ಬದಲಾಯಿಸುತ್ತಾರೆ. ಕೆಲವರು ಸಂಪ್ಲಿಮೆಂಟ್ಸ್ ತೆಗೆದುಕೊಳ್ಳುತ್ತಾರೆ. ಆದರೆ ಇದರ ಹೊರತಾಗಿಯೂ, ಕೂದಲು ಉದರೋದು ನಿಲ್ಲುವುದಿಲ್ಲ. ನೀವು ಸಹ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ಚಿಂತಿಸಬೇಡಿ, ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ.

Latest Videos


ಮೊಸರು ಮತ್ತು ಅಗಸೆಬೀಜ
ಮೊಸರು ಮತ್ತು ಅಗಸೆಬೀಜವನ್ನು  (Flax Seeds) ಸೇವಿಸುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ತೆಗೆದುಹಾಕಬಹುದು ಎಂದು ತಜ್ಞರು ಹೇಳುತ್ತಾರೆ. ಅಗಸೆಬೀಜದಿಂದ ನೀವು ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯುತ್ತೀರಿ. ಜೊತೆಗೆ ಮೊಸರಿನಿಂದ ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳು ಲಭ್ಯವಿರುತ್ತವೆ. 

ಮೊಸರು ಮತ್ತು ಅಗಸೆ ಬೀಜದ ಕಾಂಬಿನೇಶನ್ ಕೊಬ್ಬನ್ನು ಕರಗುವ ಜೀವಸತ್ವಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಇದು ಕೂದಲಿನ ಬೇರನ್ನು ಪೋಷಿಸುತ್ತದೆ. ಜೊತೆಗೆ ಕೂದಲು ಉದುರುವಿಕೆ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಒಟ್ಟಾರೆ ಆರೋಗ್ಯಕ್ಕೆ (healthy hair) ಸಹಾಯ ಮಾಡುತ್ತದೆ. ಕೂದಲಿನ ವಿನ್ಯಾಸ ಮತ್ತು ಶಕ್ತಿಯನ್ನು ಸುಧಾರಿಸುತ್ತದೆ. ಮೊಸರು ಮತ್ತು ಅಗಸೆ ಬೀಜ ಅಥವಾ ಫ್ಲಾಕ್ಸಿ ಸೀಡ್ಸ್ ಅನ್ನು ಯಾವುದೇ ಒಂದು ಉಪಾಹಾರ ಅಥವಾ ಊಟದಲ್ಲಿ ಸೇವಿಸಬಹುದು.

ತಿನ್ನುವ ವಿಧಾನ ಯಾವುದು?
ಮೊದಲು ಅಗಸೆ ಬೀಜವನ್ನು ಹುರಿಯಿರಿ.
ಈಗ ಅದನ್ನು ಗ್ರೈಂಡರ್‌ನಲ್ಲಿ ಪುಡಿ ಮಾಡಿ.
ಈಗ ಒಂದು ಕಪ್‌ನಲ್ಲಿ ಮೊಸರನ್ನು ತೆಗೆದುಕೊಂಡು ಅದರಲ್ಲಿ ಒಂದು ಟೀಸ್ಪೂನ್ ಅಗಸೆ ಬೀಜ ಪುಡಿಯನ್ನು ಬೆರೆಸಿ. ಈಗ ಅದನ್ನು ಸೇವಿಸಿ. 
ನೀವು ಇದನ್ನು ಪ್ರತಿದಿನ ನಿಮ್ಮ ಆಹಾರದ ಭಾಗವಾಗಿ ಮಾಡಿಕೊಂಡರೆ, ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.

ಇದನ್ನು ಮಾಡಿದ್ರೆ ಮಾತ್ರ ಸಾಲದು, ಉತ್ತಮ ಕೂದಲಿನ ಆರೋಗ್ಯಕ್ಕಾಗಿ ಸರಿಯಾದ ಜೀವನಶೈಲಿ, ಸಮತೋಲಿತ ಆಹಾರ (Balanced Diet), ಎಲ್ಲವೂ ಮುಖ್ಯ. ಜೊತೆಗೆ ಹೈಡ್ರೇಟ್ ಆಗಿರೋದು ಸಹ ಮುಖ್ಯ ಮತ್ತು ಉತ್ತಮ ಕೂದಲಿನ ಆರೈಕೆ ದಿನಚರಿಯನ್ನು ಅನುಸರಿಸುವುದು ಯಾವಾಗಲೂ ಮುಖ್ಯ. ಇದರಿಂದ ಕೂದಲು ಸದೃಢ ಸುಂದರವಾಗಿ ಬೆಳೆಯೋದಕ್ಕೆ ಸಾಧ್ಯ. 

click me!