Old Saree Reuse: ಹಳೆ ಸೀರೆಗಳನ್ನು ಇನ್ನು ಎಸೆಯಬೇಡಿ, ಆಕರ್ಷಕವಾಗಿ ಹೀಗೆ ಬಳಸಿ ನೋಡಿ!

Published : Aug 17, 2026, 01:51 PM IST

ಹಳೆಯ ಸೀರೆಗಳನ್ನು ವೇಸ್ಟ್ ಮಾಡದೆ, ಅದೇ 'ಮಾಮೂಲಿ' ಕುಶನ್ ಕವರ್, ಟೇಬಲ್ ಕ್ಲಾತ್‌ಗಳಂತಹ ಐಡಿಯಾಗಳನ್ನು ಬಿಟ್ಟು, ಹೊಸದಾಗಿ, ವಿಭಿನ್ನವಾಗಿ, ಎಲ್ಲರ ಮೆಚ್ಚುಗೆ ಗಳಿಸುವಂತೆ ಹೇಗೆ ಬಳಸಬಹುದು ಎಂದು ಯೋಚಿಸುತ್ತಿದ್ದರೆ, ಈ ಐಡಿಯಾಗಳನ್ನು ಟ್ರೈ ಮಾಡಿ ನೋಡಿ.

PREV
16
ಟೆಂಟ್ ಹೌಸ್
ದುಡ್ಡು ಕೊಟ್ಟು ಟೆಂಟ್ ಹೌಸ್ ಖರೀದಿಸಬೇಡಿ. ಹಳೆಯ ಕಾಟನ್ ಅಥವಾ ಬ್ರಾಂಡೆಡ್ ಸೀರೆಗಳನ್ನು ಬಳಸಿ, ಮನೆಯೊಳಗೆ ಮಕ್ಕಳಿಗೆ ಒಂದು ಪುಟ್ಟ ಡೇರೆ ನಿರ್ಮಿಸಿಕೊಡಿ. ಅವರು ಖುಷಿ ಪಡುತ್ತಾರೆ!
26
ಸ್ಟೈಲಿಶ್ ಓವರ್ ಕೋಟ್
ಜೀನ್ಸ್ ಮತ್ತು ಟೀ-ಶರ್ಟ್ ಧರಿಸುವ ಅಭ್ಯಾಸವಿದೆಯೇ? ಹಳೆಯ ರೇಷ್ಮೆ ಅಥವಾ ಜಾರ್ಜೆಟ್ ಸೀರೆಯನ್ನು ಉದ್ದನೆಯ ಶ್ರಗ್ (Long Shrug) ಅಥವಾ ಕಿಮೋನೊ ಜಾಕೆಟ್‌ನಂತೆ ಹೊಲಿಸಿ ಧರಿಸಿ. ಇದು ನಿಮಗೆ ಸಖತ್ ಮಾಡರ್ನ್ ಲುಕ್ ಕೊಡುತ್ತದೆ!
36
ರಾಯಲ್ ಲುಕ್
ಸೀರೆಯಲ್ಲಿರುವ ಸುಂದರವಾದ ಜರಿ ಸೆರಗು ಅಥವಾ ಎಂಬ್ರಾಯಿಡರಿ ವಿನ್ಯಾಸವನ್ನು ಮಾತ್ರ ಕತ್ತರಿಸಿ, ಮರದ ಫ್ರೇಮ್‌ ಹಾಕಿ ಗೋಡೆಗೆ ಅಲಂಕಾರ ವಸ್ತುವಾಗಿ ಬಳಸಿ. ಖರ್ಚಿಲ್ಲದೆ ನಿಮ್ಮ ಲಿವಿಂಗ್ ರೂಮ್‌ಗೆ ರಾಯಲ್ ಲುಕ್ ಸಿದ್ಧ!
46
ಗಿಫ್ಟ್ ಪ್ಯಾಕ್
ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ನೀಡುವಾಗ, ಪ್ಲಾಸ್ಟಿಕ್ ಕವರ್ ಬದಲು ಹಳೆಯ ರೇಷ್ಮೆ ಸೀರೆಯ ಬಾರ್ಡರ್‌ಗಳನ್ನು ಕತ್ತರಿಸಿ ಗಿಫ್ಟ್ ಪ್ಯಾಕ್ ಮಾಡಿ. ಉಡುಗೊರೆಗಿಂತ ನಿಮ್ಮ ಪ್ಯಾಕಿಂಗ್‌ಗೆ ಹೆಚ್ಚು ಮೆಚ್ಚುಗೆ ಸಿಗುತ್ತದೆ.
56
ಬಟ್ಟೆ ಬ್ಯಾಗ್‌
ಕಾಲೇಜು ಮತ್ತು ಆಫೀಸ್‌ಗೆ ಬಟ್ಟೆ ಬ್ಯಾಗ್‌ಗಳು (Totebags) ಈಗಿನ ಟ್ರೆಂಡ್. ಹಳೆಯ ದಪ್ಪನೆಯ ಕಾಂಚೀಪುರಂ ರೇಷ್ಮೆ ಅಥವಾ ಕಲಂಕಾರಿ ಸೀರೆಗಳನ್ನು ಸ್ಟೈಲಿಶ್ ಬ್ಯಾಗ್‌ಗಳಾಗಿ ಪರಿವರ್ತಿಸಿ ಎಲ್ಲರ ಗಮನ ಸೆಳೆಯಿರಿ.
66
ಬಾಲ್ಕನಿ ಅಥವಾ ಗಾರ್ಡನ್‌ನಲ್ಲಿ ಕರ್ಟನ್
ತೆಳುವಾದ ನೆಟೆಡ್ (Netted) ಅಥವಾ ಶಿಫಾನ್ ಸೀರೆಗಳನ್ನು ನಿಮ್ಮ ಬಾಲ್ಕನಿ ಅಥವಾ ಗಾರ್ಡನ್‌ನಲ್ಲಿ ಕರ್ಟನ್ ರೀತಿ ಹಾಕಿ. ಸಂಜೆಯ ಬಿಸಿಲು ಅದರ ಮೇಲೆ ಬಿದ್ದಾಗ, ಆ ಜಾಗವೇ ಒಂದು ಮ್ಯಾಜಿಕ್ ಥಿಯೇಟರ್‌ನಂತೆ ಕಾಣಿಸುತ್ತದೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories