Fashion Tips: ಹಬ್ಬ , ಮದುವೆಗೆ ಚೆನ್ನಾಗಿ ಕಾಣಿಸಬೇಕು ಎನ್ನುವುದು ಎಲ್ಲರ ಆಸೆ. ಆದರೆ ಹಬ್ಬಕ್ಕಾಗಿಯೇ ಸ್ಪೆಷಲ್ ಆಗಿ ಸ್ಟಿಚ್ ಮಾಡಿದ ಬ್ಲೌಸ್ ಅಥವಾ ಸೂಟ್ ನ ನೆಕ್ ಸಡಿಲವಾಗಿ ಜಾರುತ್ತಿದ್ದರೆ, ಇಡೀ ಲುಕ್ ಹಾಳಾಗುತ್ತೆ ಅಲ್ವಾ?. ಈ ಸಿಂಪಲ್ ಟ್ರಿಕ್ಸ್ ಮೂಲಕ ಟೈಲರ್ ಬಳಿ ಹೋಗದೇ ನಿಮ್ಮ ಸಮಸ್ಯೆ ನಿವಾರಿಸಿ.
ಹಬ್ಬಗಳ ಸಮಯದಲ್ಲಿ ಮಹಿಳೆಯರು ಸೂಟ್, ಸೀರೆ ಸೇರಿದಂತೆ ಎಥ್ನಿಕ್ ಅಥವಾ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಇಷ್ಟಪಡುತ್ತಾರೆ. ಮದುವೆಗಳಲ್ಲೂ ಸೀರೆ ಧರಿಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ತುಂಬಾ ಆಸೆಯಿಂದ ಬ್ಲೌಸ್ ಅಥವಾ ಸೂಟ್ ಹೊಲಿಸಿದರೂ, ಟೈಲರ್ ಕುತ್ತಿಗೆ ಭಾಗವನ್ನು ಹೆಚ್ಚು ದೊಡ್ಡದಾಗಿ ಅಥವಾ ಸಡಿಲವಾಗಿ ಮಾಡಿರುತ್ತಾರೆ. ಇದರಿಂದ ಅದು ಪದೇ ಪದೇ ಜಾರಲು ಆರಂಭಿಸುತ್ತದೆ. ಕೆಲವೊಮ್ಮೆ ಅದನ್ನು ಮತ್ತೆ ಟೈಲರ್ ಬಳಿ ತೆಗೆದುಕೊಂಡು ಹೋಗಿ ಸರಿಪಡಿಸಿಕೊಳ್ಳಲೂ ಸಮಯ ಇರುವುದಿಲ್ಲ.
25
ಫ್ಯಾಷನ್ ಟೇಪ್ ಅಥವಾ ಡಬಲ್ ಸೈಡ್ ಟೇಪ್
ನೀವು ಅರ್ಜೆಂಟಾಗಿ ಎಲ್ಲಿಗಾದರೂ ಹೋಗಬೇಕಾಗಿದ್ದು, ಟೈಲರ್ ಬಳಿ ಹೋಗಲು ಸಮಯವಿಲ್ಲದಿದ್ದರೆ ಫ್ಯಾಷನ್ ಟೇಪ್ ಅಥವಾ ಡಬಲ್ ಸೈಡ್ ಟೇಪ್ ನಿಮ್ಮ ಸಹಾಯಕ್ಕೆ ಬರಬಹುದು. ಬ್ಲೌಸ್ ಅಥವಾ ಸೂಟ್ ಯಾವ ಭಾಗದಿಂದ ಜಾರುತ್ತಿದೆಯೋ, ಆ ಜಾಗದಲ್ಲಿ ಫ್ಯಾಷನ್ ಟೇಪ್ ಅಥವಾ ಡಬಲ್ ಸೈಡ್ ಟೇಪ್ ಅಂಟಿಸಿ. ಇದರಿಂದ ಉಡುಪು ತನ್ನ ಜಾಗದಲ್ಲೇ ಸರಿಯಾಗಿ ಉಳಿಯುತ್ತದೆ.
35
ಸೇಫ್ಟಿ ಪಿನ್‌ನಿಂದ ಭುಜದ ಗ್ಯಾಪ್ ಕಡಿಮೆ ಮಾಡಿ
ಟೈಲರ್ ಬಳಿ ಹೋಗಲು ಸಮಯವಿಲ್ಲದಿದ್ದರೆ ಅಥವಾ ಸ್ಟಿಚ್ ಮಾಡಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ಸೇಫ್ಟಿ ಪಿನ್ ಬಳಸುವುದು ಉತ್ತಮ. ಮೊದಲು ಬ್ಲೌಸ್ ಅನ್ನು ಒಳಭಾಗಕ್ಕೆ ತಿರುಗಿಸಿ ಮೇಜು ಅಥವಾ ಸಮತಟ್ಟಾದ ಜಾಗದಲ್ಲಿ ಇಡಿ. ಎರಡೂ ಭುಜಗಳ ಬಳಿ ಎಷ್ಟು ಭಾಗ ಸಡಿಲವಾಗಿದೆ ಎಂಬುದನ್ನು ಅಳೆಯಿರಿ. ಆ ಜಾಗದಲ್ಲಿ ಬಟ್ಟೆಯನ್ನು ಸ್ವಲ್ಪ ಮಡಚಿ, ಹೊಲಿಗೆ ಮಾಡುವಂತೆ ಎರಡು ಸಣ್ಣ ಸೇಫ್ಟಿ ಪಿನ್‌ಗಳನ್ನು ಹಾಕಿ. ಪಿನ್ ಬಟ್ಟೆಯಲ್ಲಿ ಗಟ್ಟಿಯಾಗಿ ಸಿಕ್ಕಿಕೊಂಡಿರುವಂತೆ ನೋಡಿಕೊಳ್ಳಿ. ಇದೇ ರೀತಿ ಎರಡೂ ಭುಜಗಳಲ್ಲೂ ಮಾಡಿ. ಇದರಿಂದ ಕುತ್ತಿಗೆ ಭಾಗ ಸ್ವಲ್ಪ ಚಿಕ್ಕದಾಗಿ, ಜಾರದೆ ಇರುತ್ತದೆ.
ಶೋಲ್ಡರ್ ತುಂಬಾ ಕೆಳಗೆ ಜಾರುತ್ತಿದ್ದರೆ ಈ ವಿಧಾನ ವೇಗವಾಗಿ ಕೆಲಸ ಮಾಡುತ್ತದೆ. ವಿಶೇಷವಾಗಿ ಬ್ಯಾಕ್‌ಲೆಸ್ ಅಥವಾ ಡೀಪ್ ನೆಕ್ ಬ್ಲೌಸ್‌ಗಳಿಗೆ ಇದು ಹೆಚ್ಚು ಉಪಯುಕ್ತ. ಮಾರುಕಟ್ಟೆಯಲ್ಲಿ ಸಿಗುವ ಸಿಲ್ವರ್, ಗೋಲ್ಡ್, ಕಾಪರ್ ಅಥವಾ ಬ್ಲೌಸ್‌ಗೆ ಹೊಂದುವ ಬಣ್ಣದ ರೆಡಿಮೇಡ್ ಡೋರಿಯನ್ನು ತೆಗೆದುಕೊಳ್ಳಿ. ಅದನ್ನು ಎರಡು ತುಂಡುಗಳಾಗಿ ಕತ್ತರಿಸಿ. ಬ್ಲೌಸ್‌ನ ಹಿಂಭಾಗದ ಕುತ್ತಿಗೆ ಭಾಗದ ಎರಡೂ ಬದಿಗಳಲ್ಲಿ ಒಳಗಿನಿಂದ ಸೇಫ್ಟಿ ಪಿನ್ ಸಹಾಯದಿಂದ ಡೋರಿಯನ್ನು ಅಳವಡಿಸಿ. ಬ್ಲೌಸ್ ಧರಿಸಿದ ನಂತರ ಎರಡೂ ಡೋರಿಗಳನ್ನು ಹಿಂಭಾಗದಲ್ಲಿ ಕಟ್ಟಿಕೊಳ್ಳಿ. ಇದರಿಂದ ಭುಜಗಳು ಒಳಭಾಗಕ್ಕೆ ಎಳೆಯಲ್ಪಟ್ಟು ಕುತ್ತಿಗೆ ಭಾಗ ಜಾರುವುದಿಲ್ಲ.
55
ಕಂಕುಳಿನ ಭಾಗದಲ್ಲಿ ಪಿನ್ ಹಾಕಿ
ಈ ವಿಧಾನವೂ ಮತ್ತಷ್ಟು ಎಫೆಕ್ಟಿವ್ ಆಗಿದೆ. ಬ್ಲೌಸ್ ಅನ್ನು ಒಳಭಾಗಕ್ಕೆ ತಿರುಗಿಸಿ, ಆರ್ಮ್‌ಹೋಲ್‌ನ ಒಳಭಾಗದಲ್ಲಿ ಸ್ವಲ್ಪ ಬಟ್ಟೆಯನ್ನು ಮಡಚಿ ಸೇಫ್ಟಿ ಪಿನ್ ಹಾಕಿ. ಎರಡೂ ಬದಿಗಳಲ್ಲೂ ಇದೇ ರೀತಿ ಮಾಡಿ. ಇದರಿಂದ ಎದೆ ಭಾಗದ ಫಿಟಿಂಗ್ ಸ್ವಲ್ಪ ಬಿಗಿಯಾಗಿ, ಕುತ್ತಿಗೆ ಭಾಗವೂ ಸರಿಯಾದ ಸ್ಥಾನದಲ್ಲಿ ಇರುತ್ತದೆ ಮತ್ತು ಶೋಲ್ಡರ್ ಜಾರುವುದಿಲ್ಲ. ಸೇಫ್ಟಿ ಪಿನ್ ಹಾಕುವಾಗ ಅದು ಒಳಭಾಗದಲ್ಲಿದ್ದು ಚರ್ಮಕ್ಕೆ ಚುಚ್ಚದಂತೆ ಎಚ್ಚರಿಕೆ ವಹಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.