ಮದುವೆ ಸೀಸನ್ (wedding season) ಆರಂಭವಾಗಿದೆ. ಅದಕ್ಕಾಗಿ ಎಲ್ಲಾ ಕಡೆ ಎಲ್ಲಾ ರೀತಿಯ ತಯಾರಿ ಕೂಡ ನಡೆಯುತ್ತಿದೆ. ವಿಶೇಷವಾಗಿ ಮಹಿಳೆಯರು ಮದುವೆಯಲ್ಲಿ ವಿವಿಧ ರೀತಿಯ ಡ್ರೆಸ್, ಸೀರೆ ಧರಿಸುತ್ತಾರೆ. ಅದರಲ್ಲೂ ಸೀರೆ ಉಡೋವಾಗ ಸ್ಟೈಲಿಶ್ ಬ್ಲೌಸ್ ಹಾಕಲು ಇಷ್ಟ ಪಡ್ತಾರೆ. ಇದು ಬ್ಯಾಕ್ ಲೆಸ್ ಟು ಸ್ಲೀವ್ ಲೆಸ್ ಮತ್ತು ಸ್ಟೆಪ್ ಹೊಂದಿರುವ ಬ್ಲೌಸ್ ಗಳನ್ನು ಒಳಗೊಂಡಿದೆ. ಆದರೆ ಚಳಿಗಾಲದಲ್ಲಿ ಇದನ್ನು ಕ್ಯಾರಿ ಮಾಡೋದು ತುಂಬಾ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ, ಚಳಿಗಾಲದಲ್ಲಿ ಮದುವೆ ಸೀಸನ್ ನಲ್ಲಿ ನೀವು ಸ್ಟೈಲಿಶ್ ಮತ್ತು ಆರಾಮದಾಯಕವಾಗಿ ಕಾಣಬೇಕೆಂದು ನೀವು ಬಯಸಿದರೆ, ನೀವು ಸೀರೆಯ ಮೇಲೆ ಬ್ಲೇಜರ್, ಜಾಕೆಟ್ ಅಥವಾ ಶ್ರಗ್ ಹೇಗೆ ಧರಿಸಬಹುದು ಎಂದು ನಾವು ಹೇಳುತ್ತೇವೆ, ಅದು ಸ್ಟೈಲಿಶ್ ಮತ್ತು ಸಾಕಷ್ಟು ಆರಾಮದಾಯಕ ಲುಕ್ ನೀಡುತ್ತೆ.