ರೆಡ್‌ ಸ್ಯಾರಿಯಲ್ಲಿ ನಿವೇದಿತಾ ಗೌಡ; ಎಷ್ಟು ಚೆಂದ ಕಾಣ್ತೀರಿ, ಚಡ್ಡಿ, ಸ್ಕರ್ಟ್ ಬಿಟ್ಬಿಟ್ಟು ಸೀರೆನೆ ಉಟ್ಕೊಳ್ಳಿ ಎಂದ ನೆಟ್ಟಿಗರು!

First Published | Oct 23, 2023, 5:02 PM IST

ಎಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಜನರು ಖುಷಿಯಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ನಟ-ನಟಿಯರು ಸಹ ಹಬ್ಬಕ್ಕೆ ಚೆನ್ನಾಗಿ ರೆಡಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಸದ್ಯ ನಿವೇದಿತಾ ಗೌಡ ಸಹ ಕೆಂಪು ಸೀರೆಯುಟ್ಟು ಟ್ರೆಡಿಶನಲ್ ಲುಕ್‌ನಲ್ಲಿ ಮಿಂಚಿದ್ದಾರೆ.

ಎಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಜನರು ಖುಷಿಯಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ನಟ-ನಟಿಯರು ಸಹ ಹಬ್ಬಕ್ಕೆ ಚೆನ್ನಾಗಿ ರೆಡಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಸದ್ಯ ನಿವೇದಿತಾ ಗೌಡ ಸಹ ಕೆಂಪು ಸೀರೆಯುಟ್ಟು ಟ್ರೆಡಿಶನಲ್ ಲುಕ್‌ನಲ್ಲಿ ಮಿಂಚಿದ್ದಾರೆ.

ನಿವೇದಿತಾ ಗೌಡ ರೆಡ್ ಸ್ಯಾರಿ ಮತ್ತು ಯೆಲ್ಲೋ ಕಲರ್ ಬ್ಲೌಸ್ ತೊಟ್ಟು, ಜುಮ್ಕಾ ಹಾಕಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ. ಯಾವಾಗ್ಲೂ ಚಡ್ಡಿ, ಸ್ಕರ್ಟ್‌ನಲ್ಲಿ ರೀಲ್ಸ್ ಮಾಡೋ ನಿವೇದಿತಾ ಟ್ರೆಡಿಶನಲ್‌ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. 

Latest Videos


ನಿವೇದಿತಾ ಗೌಡ ಸ್ಯಾರಿ ಲುಕ್‌ಗೆ ಫ್ಯಾನ್ಸ್‌ಗಳ ಲೈಕ್ಸ್, ಹಾರ್ಟ್‌ ಎಮೋಜಿಗಳ ರಾಶಿನೇ ಬಂದಿದೆ. ಅಭಿಮಾನಿಗಳು ಬ್ಯೂಟಿಫುಲ್‌, ಕ್ಯೂಟ್ ಡಾಲ್‌, ಗಾರ್ಜಿಯಸ್‌, ಸೂಪರ್‌ ಗೊಂಬೆ, ಪ್ರೆಟ್ಟೀ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸಣ್ಣ ಚಡ್ಡಿ, ಸ್ಕರ್ಟ್‌, ಟ್ರಾನ್ಸ್‌ಪರೆಂಟ್‌ ಡ್ರೆಸ್‌ನಲ್ಲಿ ವೀಡಿಯೋ ಮಾಡಿ ಆಗಾಗ ಟ್ರೋಲಾಗುತ್ತಾರೆ. 

ಚಂದನ್​ ಶೆಟ್ಟಿ ಜೊತೆಯಾಗಿ ಕ್ಯೂಟ್​ ವಿಡಿಯೋ ಸಹ ಶೇರ್ ಮಾಡುತ್ತಾರೆ.
ಈ ಬಾರಿ ನಿವೇದಿತಾ ಗೌಡ, ಟ್ರೆಡಿಶನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.

 ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. 2020ರ ಫೆಬ್ರವರಿಯಲ್ಲಿ ಇಬ್ಬರು ಹಸೆಮಣೆ ಏರಿದ್ದರು

ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1,777 ಪೋಸ್ಟ್​ಗಳನ್ನು ಮಾಡಿದ್ದಾರೆ. ನಿವೇದಿತಾ ಗೌಡಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ.  ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸಿದ್ದರು.ಸೀಸನ್ 1ರಲ್ಲಿ ಸ್ಪರ್ಧಿಸಿ ಫಸ್ಟ್‌ ರನ್ನರ್ ಟ್ರೋಫಿ ಕೂಡ ಪಡೆದುಕೊಂಡಿದ್ದರು

click me!