ಮನೆಯಲ್ಲಿಯೇ ನೈಸರ್ಗಿಕ ಕಾಜಲ್ ತಯಾರಿಸಿ ಕಣ್ಣಿಗೆ ಅಂದ ನೀಡಿ

First Published | May 30, 2021, 12:37 PM IST

ಸೌಂದರ್ಯ ಉತ್ಪನ್ನಗಳ ಬಗ್ಗೆ ಹೇಳಿದರೆ, ಕಾಜಲ್ ಹೆಚ್ಚು ಬಳಸುವ ಉತ್ಪನ್ನ ಎಂದು ಹೇಳಬಹುದು. ಕಣ್ಣುಗಳನ್ನು ಸುಂದರವಾಗಿ ಮತ್ತು ದೊಡ್ಡದಾಗಿ ಮಾಡಲು, ನಮ್ಮ ಅಜ್ಜಿ ಬಾಲ್ಯದಲ್ಲಿ ನಮ್ಮ ಕಣ್ಣಿಗೆ ಕಾಡಿಗೆಯನ್ನು ಬಳಸುತ್ತಿದ್ದರು. ಮಾರುಕಟ್ಟೆಯಲ್ಲಿ ಈಗ ವಿವಿಧ ರೀತಿಯ ಕಾಜಲ್ ಲಭ್ಯವಿದ್ದರೂ, ಮನೆಯಲ್ಲಿ ತಯಾರಿಸಿದ ಕಾಜಲ್ ಮುಂದೆ ಎಲ್ಲವೂ ವಿಫಲವಾಗಿದೆ. ಮನೆಯಲ್ಲಿ ತಯಾರಿಸಿದ ಕಾಜಲ್ ಅನ್ನು ಭಾರತದ ಶ್ರೀಮಂತ ನಾಗರಿಕತೆಯಲ್ಲಿ ದೀರ್ಘಕಾಲ ಬಳಸಲಾಗುತ್ತಿದೆ. ಈ ಲೇಖನದಲ್ಲಿ ಮನೆಯಲ್ಲಿ ಕಾಜಲ್ ನ ಪ್ರಯೋಜನಗಳನ್ನು ತಿಳಿಯೋಣ.

ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು:ಮನೆಯಲ್ಲಿ ಮಾಡಿದ ಬಾದಾಮಿ ಕಾಡಿಗೆ ಅಥವಾ ಹರ್ಬಲ್ ಕಾಡಿಗೆ ಬಳಸಿದರೆ, ಅದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಈ ಕಾಡಿಗೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಕಣ್ಣುಗಳನ್ನು ಸೋಂಕಿನಿಂದ ರಕ್ಷಿಸುತ್ತದೆ ಮತ್ತು ಕಣ್ಣುಗಳ ಸ್ನಾಯುಗಳನ್ನು ಬಲಪಡಿಸುತ್ತದೆ.
Tap to resize

ಕಣ್ಣಿನ ಶುಚಿಗೊಳಿಸುವಿಕೆ:ಮನೆಯಲ್ಲಿ ತಯಾರಿಸಿದ ಕಾಜಲ್ನಲ್ಲಿ ತುಪ್ಪ ಮತ್ತು ಕರ್ಪೂರವನ್ನು ಬಳಸಲಾಗುತ್ತದೆ. ಈ ಎರಡೂ ವಸ್ತುಗಳು ಕಣ್ಣುಗಳ ಕೊಳೆಯನ್ನು ತೆಗೆದುಹಾಕುವ ಮೂಲಕ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದು ಕಣ್ಣುಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿಗೆ ಕೂಡ ಒಳ್ಳೆಯದು.
ವಿಟಮಿನ್ ಇ :ಮನೆಯಲ್ಲಿ ತಯಾರಿಸಿದ ಕಾಡಿಗೆಯಲ್ಲಿ ನೈಸರ್ಗಿಕ ಸಾರಭೂತ ತೈಲಗಳು ಇರುತ್ತವೆ. ಈ ಸಾರಭೂತ ತೈಲಗಳು ಕಣ್ಣುಗಳಿಗೆ ಪ್ರಯೋಜನಕಾರಿ.
ಈ ಕಾಡಿಗೆಯಲ್ಲಿ ಬಳಸುವ ಆಲಿವ್ ಎಣ್ಣೆ, ಕ್ಯಾಸ್ಟರ್ ಆಯಿಲ್ ಮತ್ತು ಬಾದಾಮಿ ಎಣ್ಣೆಯಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಇ ಇರುತ್ತದೆ. ಇದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಆರಾಮ ನೀಡುತ್ತದೆ.
ಶುದ್ಧ ಮತ್ತು ನೈಸರ್ಗಿಕ:ಮನೆಯಲ್ಲಿ ತಯಾರಿಸಿದ ಕಾಡಿಗೆ ಶುದ್ಧ ಮತ್ತು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಆ ಕಾರಣದಿಂದ ಅವು ಯಾವುದೇ ರೀತಿಯ ರಾಸಾಯನಿಕಗಳನ್ನು ಹೊಂದಿರುವುದಿಲ್ಲ.
ಈ ಕಾರಣದಿಂದಾಗಿ, ಮಾರುಕಟ್ಟೆಯಲ್ಲಿ ಸಿಗುವ ಕಾಡಿಗೆಗೆ ಹೋಲಿಸಿದರೆ ಕಣ್ಣಿಗೆ ಹೆಚ್ಚಿನ ಸಮಸ್ಯೆ ಇಲ್ಲ ಮತ್ತು ಊತ ಮತ್ತು ಕಿರಿಕಿರಿಯಂತಹ ಯಾವುದೇ ತೊಂದರೆ ಇಲ್ಲ.

Latest Videos

click me!