ಖಾಕಿ ಬಿಟ್ಟು ಮಹಾರಾಣಿಯಂತೆ ಕಂಗೊಳಿಸಿದ ರೂಪಾ ಮೌದ್ಗಿಲ್‌: ಕಿತ್ತೂರು ರಾಣಿ ಚೆನ್ನಮ್ಮನ ಪ್ರತೀಕವೆಂದ ನೆಟ್ಟಿಗರು

First Published | Oct 24, 2023, 1:32 PM IST

ಬೆಂಗಳೂರು: ರಾಜ್ಯದ ಉನ್ನತ ಹುದ್ದೆಗಳಲ್ಲಿ ಒಂದಾದ ಆಂತರಿಕ ಭದ್ರತಾ ವಿಭಾಗದ ಐಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಅವರು ನವರಾತ್ರಿ ಅಂಗವಾಗಿ ವಿಶೇಷ ಫೋಟೋ ಶೂಟ್‌ ಮಾಡಿಸಿದ್ದಾರೆ. ಈ ವೇಳೆ ಖಾಕಿ ಬಿಟ್ಟು ಮಹಾರಾಣಿಯಂತೆ ಕಂಗೊಳಿಸಿದ್ದಾರೆ.

ದಸರಾ ಹಾಗೂ ನವರಾತ್ರಿ ಅಂಗವಾಗಿ ವಿಶೇಷ ಫೋಟೋ ಶೂಟ್‌ ಮಾಡಿಸಿದ ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ಡಿ. ರೂಪಾ ಮೌದ್ಗಿಲ್‌ ಅವರು ಥೇಟ್ ಮಹಾರಾಣಿಯಂತೆ ಕಂಗೊಳಿಸಿದ್ದಾರೆ.

ರಾಜ್ಯದಲ್ಲಿ ವೈಯಕ್ತಿಕ ಆರೋಪ-ಪ್ರತ್ಯಾರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಸಿದ್ದ ಐಪಿಎಸ್‌ ಅಧಿಕಾರಿ ಡಿ. ರೂಪಾ ಈಗ ಖಡ್ಗವನ್ನು ಹಿಡಿದು ರಾಣಿಯಂತೆ ಪೋಸ್‌ ನೀಡಿದ್ದಾರೆ.

Latest Videos


ಫೋಟೋ ಶೂಟ್‌ ಮಾಡಿಸಿಕೊಂಡ ಬಗ್ಗೆ ಪೋಸ್ಟ್‌ ಮಾಡಿಕೊಂಡಿರುವ ಫ್ಯಾಷನ್‌ ಡಿಸೈನರ್‌ ಭಾರ್ಗವಿ ಅವರು, ರೂಪಾ ಮೌದ್ಗಿಲ್‌ ಅವರು ಶಕ್ತಿ, ಅನುಗ್ರಹ ಮತ್ತು ಸಬಲೀಕರಣದ ಸಾಕಾರ ಎಂದು ಹೇಳಿದ್ದಾರೆ. 
 

ರೂಪಾ ಮೌದ್ಗಿಲ್‌ ಅವರು ಪೋಸ್ಟ್‌ ಮಾಡಿದ ಪೋಟೋಗಳನ್ನು ನೋಡಿದರೆ ಶಿವಾಜಿ ಮಹಾರಾಜರ ತಾಇ  ಜೀಜಾಭಾಯಿ ನೆನಪಾಗ್ತಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ನಮ್ಮ ನಡೆ ನುಡಿ ಸತ್ಯವಾಗಿದ್ದಾಗ ಯಾವುದೇ ಕ್ಷೇತ್ರವನ್ನು ವಶಪಡಿಸಿಕೊಳ್ಳಬಹುದು. ನಮ್ಮ ನೈಜ ಜಗತ್ತಾಗಿರುವ ಆತ್ಮವನ್ನೂ ಗೆಲ್ಲಬಹುದು ಎಂದು ಭಾರ್ಗವಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌ ಅವರ ಫೋಟೋಗಳನ್ನು ನೋಡಿದ ನೆಟ್ಟಿಗರು ವಾಹ್... ಡಾಮಿನೇಟಿಂಗ್ ಬ್ಯೂಟಿ ಎಂದು ಕಮೆಂಟ್‌ ಮಾಡಿದ್ದಾರೆ.

ಒಬ್ಬ ಐಪಿಎಸ್ ಅಧಿಕಾರಿಯಾಗಿ ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವ ಮೂಲಕ ಸಮಾಜದಲ್ಲಿ ಕೆಲಸ ಮಾಡುವ ಎಲ್ಲ ಮಹಿಳೆಯರಿಗೂ ಮಾದರಿಯಾಗಿದ್ದಾರೆ ಎಂದು ಭಾರ್ಗವಿ ಬರೆದುಕೊಂಡಿದ್ದಾರೆ.

ಇದು ವಿಡಿಯೋ ಹಾಗೂ ಫೋಟೋ ಶೂಟ್‌ ಕೇವಲ ಫ್ಯಾಷನ್ ಬಗ್ಗೆ ಅಲ್ಲ. ಇದು ಸಬಲೀಕರಣ, ಸ್ಥಿತಿಸ್ಥಾಪಕತ್ವ ಮತ್ತು ಮಹಿಳೆಯರ ಅಚಲ ಮನೋಭಾವದ ತಿಳಿಸಿಕೊಡುವ ಪ್ರತೀಕವಾಗಿದೆ ಎಂದಿದ್ದಾರೆ.

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದ ರೂಪಾ ಮೌದ್ಗಿಲ್‌ ಅವರು, ಸುಮಾರು ಆರು ತಿಂಗಳ ಕಾಲ ಯಾವುದೇ ಹುದ್ದೆಯಿಲ್ಲದೇ ಮನೆಯಲ್ಲಿ ಕುಳಿತಿದ್ದರು. ಕಳೆದ ತಿಂಗಳು ಪೋಸ್ಟಿಂಗ್‌ ಕೊಡಲಾಗಿದೆ.

click me!