ಬಾಲಿವುಡ್‌ನ ಖ್ಯಾತ ನಟಿಯರಲ್ಲೊಬ್ಬರು ದೀಪಿಕಾ ಪಡುಕೋಣೆ. ಶಾರೂಕ್, ಅಕ್ಷಯ್ ಕುಮಾರ್, ಹೃತಿಕ್ ರೋಷನ್ ಸೇರಿದಂತೆ ಹಲವು ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಡಿಪ್ಪಿ ತಮ್ಮ ಸ್ಟೈಲಿಶ್ ಲುಕ್ ಹಾಗೂ ಅಟ್ರ್ಯಾಕ್ಟಿವ್ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿ.
ವೆಡ್ಡಿಂಗ್, ಪಾರ್ಟಿ, ಅವಾರ್ಡ್ ಫಂಕ್ಷನ್, ಇಂಟರ್‌ನ್ಯಾಶನಲ್ ಇವೆಂಟ್‌ಗಳಲ್ಲಿ ದೀಪಿಕಾ ಪಡುಕೋಣೆ ಲುಕ್ ಎಲ್ಲರ ಗಮನ ಸೆಳೆಯುತ್ತದೆ. ಸ್ಯಾರಿ, ಮಾಡರ್ನ್ ಡ್ರೆಸ್, ಬಿಕಿನಿಯಲ್ಲೂ ದೀಪಿಕಾ ಪಡುಕೋಣೆ ಸಖತ್ ಕ್ಯೂಟ್ ಆಂಡ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ.
ಕಳೆದ ರಾತ್ರಿ ಲಂಡನ್‌ನಲ್ಲಿ ನಡೆದ 77ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್‌ನಲ್ಲಿ ದೇಸಿ ಹುಡುಗಿ ದೀಪಿಕಾ ಪಡುಕೋಣೆ ಭಾರತವನ್ನು ಪ್ರತಿನಿಧಿಸಿದರು ಸಮಾರಂಭದಲ್ಲಿ ದೀಪಿಕಾ ಪ್ರಶಸ್ತಿಯನ್ನು ಸಹ ನೀಡಿದರು. ಕಾರ್ಯಕ್ರಮದಲ್ಲಿ ಗ್ಲಿಟರಿಂಗ್ ಸ್ಯಾರಿಯಲ್ಲಿ ದೀಪಿಕಾ ಪಡುಕೋಣೆ ಲುಕ್ ಸ್ಟನಿಂಗ್ ಆಗಿತ್ತು.
ಕಳೆದ ರಾತ್ರಿ ಲಂಡನ್‌ನಲ್ಲಿ ನಡೆದ 77ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್‌ನಲ್ಲಿ ದೇಸಿ ಹುಡುಗಿ ದೀಪಿಕಾ ಪಡುಕೋಣೆ ಭಾರತವನ್ನು ಪ್ರತಿನಿಧಿಸಿದರು ಸಮಾರಂಭದಲ್ಲಿ ದೀಪಿಕಾ ಪ್ರಶಸ್ತಿಯನ್ನು ಸಹ ನೀಡಿದರು. ಕಾರ್ಯಕ್ರಮದಲ್ಲಿ ಗ್ಲಿಟರಿಂಗ್ ಸ್ಯಾರಿಯಲ್ಲಿ ದೀಪಿಕಾ ಪಡುಕೋಣೆ ಲುಕ್ ಸ್ಟನಿಂಗ್ ಆಗಿತ್ತು.
'ಸೀರೆಯಿಂದಲೇ ದೀಪಿಕಾ ಪಡುಕೋಣೆ ಅಂದ ಹೆಚ್ಚಿತು' ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೆ ಕೆಲವರು, ಇನ್ನು ಕೆಲವೇ ದಿನಗಳಲ್ಲಿ ಆಲಿಯಾ ಭಟ್ ಈ ಫೋಸ್‌ನ್ನು ಕಾಪಿ ಮಾಡೋದು ಗ್ಯಾರಂಟಿ ಎಂದು ಹೇಳಿದ್ದಾರೆ.
ಸೀರೆಯಲ್ಲಿ ದೀಪಿಕಾ ಪಡುಕೋಣೆ ಆಕೆ ಎಪ್ಪತ್ತರ ದಶಕದಲ್ಲಿ ಅಭಿನಯಿಸಿದ 'ಓಂ ಶಾಂತಿ ಓಂ' ಚಿತ್ರದ ಪಾತ್ರದಂತೆಯೇ ಕಾಣಿಸುತ್ತಾರೆ. ಹೀಗಾಗಿ ಬಹುತೇಕರು, 'ನಮ್ಮ ಮನಸ್ಸಿನಲ್ಲಿ ನೀವು ಯಾವಾಗಲೂ ಶಾಂತಿಪ್ರಿಯ ಆಗಿ ನೆನಪಿನಲ್ಲಿರುತ್ತೀರಿ' ಎಂದಿದ್ದಾರೆ.
ಪ್ರಸ್ತುತ ದೀಪಿಕಾ ಪಡುಕೋಣೆ ಬಾಲಿವುಡ್ ಸೂಪರ್‌ಸ್ಟಾರ್ ಆಗಿದ್ದು, ಅವರು 2007 ರಲ್ಲಿ 'ಓಂ ಶಾಂತಿ ಓಂ' ಶಾರೂಕ್ ಖಾನ್ ಜೊತೆ ಬಾಲಿವುಡ್‌ನಲ್ಲಿ ಅಭಿನಯ ಆರಂಭಿಸಿದಾಗಿನಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಇಂದು ದೀಪಿಕಾ ಪಡುಕೋಣೆ ಬಾಲಿವುಡ್‌ನ ಟಾಪ್ ನಟಿಯಾಗಿ ಹೆಸರು ಮಾಡಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಫೇಮಸ್ ಆಗಿದ್ದಾರೆ. ಸಿನಿಮಾಗಳ ಜೊತೆ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ರಾಯಭಾರಿ ಆಗಿದ್ದಾರೆ.
ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಸಹ ತನ್ನ ಛಾಪು ಮೂಡಿಸಿರುವ ದೀಪಿಕಾ, ಇತ್ತೀಚಿಗೆ ಫೈಟರ್ ಸಿನಿಮಾದಲ್ಲಿ ಹೃತಿಕ್ ರೋಷನ್ ಆಗಿದ್ದರು. ಚಿತ್ರದಲ್ಲಿ ಡಪ್ಪಿ ಬೋಲ್ಡ್ ಸೀನ್ ವಿವಾದಕ್ಕೆ ಕಾರಣವಾಗಿತ್ತು. ಆದರೂ ಚಿತ್ರ ಫ್ಲಾಪ್ ಆಗಿದೆ
ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಇಯರ್, ಪಠಾನ್ ಮತ್ತು ಜವಾನ್ ಸೇರಿದಂತೆ ದೀಪಿಕಾ ಅಭಿನಯಿಸಿದ ಹಲವು ಚಿತ್ರಗಳು ಸೂಪರ್ ಹಿಟ್ ಆಗಿವೆ.
ಹೃತಿಕ್ ರೋಷನ್ ಎದುರು ಫೈಟರ್ ನಲ್ಲಿ ಏರ್ ಫೋರ್ಸ್ ಅಧಿಕಾರಿಯಾಗಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಸೌತ್ ಸ್ಟಾರ್ ಪ್ರಭಾಸ್ ಮುಂದಿನ ಪ್ರಾಜೆಕ್ಟ್ 'ಕಲ್ಕಿ 2898 AD'ಯಲ್ಲಿ ನಟಿಸಲಿದ್ದಾರೆ.
ಕಳೆದೆರಡು ವರ್ಷಗಳಲ್ಲಿ, ದೀಪಿಕಾ ವರ್ಲ್ಡ್ ಫೇಮಸ್ ಆಗಿದ್ದಾರೆ. 2022ರಲ್ಲಿ, ಕೇನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರಾಗಿದ್ದು ಎಲ್ಲರ ಗಮನ ಸೆಳೆದಿದ್ದರು.
ಕಳೆದ ವರ್ಷ ಆಸ್ಕರ್‌ನಲ್ಲಿ ನಿರೂಪಕರಾಗಿದ್ದರು. ಅಲ್ಲಿ ದೀಪಿಕಾ ಸ್ಟೈಲಿಶ್ ಲುಕ್ ಎಲ್ಲರ ಗಮನ ಸೆಳೆದಿತ್ತು.