ಜಪಾನ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಟ್‌ಲುಕ್‌, ವರ್ಷಗಳ ಕನಸು ನನಸಾಯ್ತು ಎಂದ ಕಿರಿಕ್ ಬೆಡಗಿ!

Published : Mar 03, 2024, 02:50 PM IST

ಕನ್ನಡದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌, ಕಾಲಿವುಡ್‌ನಲ್ಲಿ ಸಖತ್‌ ಫೇಮಸ್‌..ಹಲವು ಸೂಪರ್‌ಹಿಟ್‌ ಸಿನ್ಮಾಗಳನ್ನು ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಇತ್ತೀಚಿಗೆ ಜಪಾನ್‌ನಲ್ಲಿ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಸಖತ್ ಹಾಟ್ ಆಗಿ ಮಿಂಚಿದ್ದಾರೆ.

PREV
19
ಜಪಾನ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಟ್‌ಲುಕ್‌, ವರ್ಷಗಳ ಕನಸು ನನಸಾಯ್ತು ಎಂದ ಕಿರಿಕ್ ಬೆಡಗಿ!

ಕನ್ನಡದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌, ಕಾಲಿವುಡ್‌ನಲ್ಲಿ ಸಖತ್‌ ಫೇಮಸ್‌..ಹಲವು ಸೂಪರ್‌ಹಿಟ್‌ ಸಿನ್ಮಾಗಳನ್ನು ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಇತ್ತೀಚಿಗೆ ಜಪಾನ್‌ನಲ್ಲಿ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಸಖತ್ ಹಾಟ್ ಆಗಿ ಮಿಂಚಿದ್ದಾರೆ.

29

ತಮ್ಮ ಬಿಝಿ ಶೆಡ್ಯೂಲ್‌ಗಳ ಮಧ್ಯೆಯೂ ರಶ್ಮಿಕಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಮಾಗಳ ಕುರಿತಾದ ಅಪ್‌ಡೇಟ್‌, ಮಾಡರ್ನ್‌, ಟ್ರೆಡಿಶನಲ್‌ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಫ್ಯಾನ್ಸ್ ಸಹ ಇದಕ್ಕೆ ಮಿಸ್ ಮಾಡ್ದೆ ಕಾಮೆಂಟ್ ಮಾಡುತ್ತಾರೆ.

39

ಹಾಗೆಯೇ ಇತ್ತೀಚಿಗೆ ಕಿರಿಕ್ ಬೆಡಗಿ ಜಪಾನ್‌ನಲ್ಲಿ ಸ್ಟೈಲಿಶ್ ಗೌನ್ ಹಾಕ್ಕೊಂಡು ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಸ್ಕ್ವೇರ್ ಡಿಸೈನ್‌ನ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ.

49

ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್‌ ಮಾಡಿಕೊಂಡಿರುವ ರಶ್ಮಿಕಾ, 'ಜಪಾನ್‌ಗೆ ನಾನು ಹಲವು ವರ್ಷಗಳಿಂದ ಹೋಗಬೇಕೆಂದು ಕನಸುಕಂಡಿದ್ದೆ. ಕೊನೆಗೂ ಕಾಲ ಕೂಡಿ ಬಂತು' ಎಂದು ಶೀರ್ಷಿಕೆ ನೀಡಿದ್ದಾರೆ.

59

ಕಿರಿಕ್ ಬೆಡಗಿಯ ಬೋಲ್ಡ್‌ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಲೈಕ್ಸ್, ಹಾರ್ಟ್ ಕಳುಹಿಸಿಕೊಟ್ಟಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್‌, ಗಾರ್ಜಿಯಸ್, ಪ್ರೆಟ್ಟೀ, ಕ್ರಶ್ಮಿಕಾ, ವ್ಹಾವ್‌ ಎಂದೆಲ್ಲಾ ಹೊಗಳಿದ್ದಾರೆ.

69

ಕ್ಯೂಟ್ ಶ್ರೀವಲ್ಲಿ, ನ್ಯಾಷನಲ್ ಕ್ರಶ್‌, ಹಾಟ್‌, ರಸಮಲೈ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, ಡ್ರೆಸ್ ಡಿಸೈನ್ ನೋಡಿ 'ಇದೇನು ಡ್ರೆಸ್ಸಾ ಅಥವಾ ಫ್ಯಾಕ್ಟರಿನಾ' ಅಂತ ಪ್ರಶ್ನಿಸಿದ್ದಾರೆ.

79

ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಎಂಗೇಜ್​ಮೆಂಟ್ ಮಾಡಿಕೊಳ್ತಾರೆ ಎನ್ನುವ ಸಿನಿ ರಂಗದಲ್ಲಿ ರೂಮರ್ಸ್ ಕೇಳಿ ಬರ್ತಿದೆ. ಆದ್ರೆ ಇದರ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. 

89

ಇನ್ನು, ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸಕ್ಸಸ್ ಬೆನ್ನಲ್ಲಿಯೇ ಬಾಲಿವುಡ್, ಟಾಲಿವುಡ್ ಅಂತ ಫುಲ್ ಬಿಝಿಯಾಗಿದ್ದಾರೆ. ಅನಿಮಲ್ ಸಿನಿಮಾದಲ್ಲಿ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

99

ಪುಷ್ಪಾ ಸಿನಿಮಾ ಹಿಟ್‌ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ನಟನೆ ಎಲ್ಲರಿಗೂ ಅರ್ಥವಾಗಿದೆ. ಗ್ಲಾಮರ್‌ ಪಾತ್ರವೇ ಆಗಲಿ, ಡಿ ಗ್ಲಾಮರ್‌ ಪಾತ್ರವೇ ಆಗಲಿ ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುತ್ತಾರೆ. ಸಾಲು ಸಾಲು ಹಿಟ್‌ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಮತ್ತೆ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. 

Read more Photos on
click me!

Recommended Stories