ಚಹಲ್ ಜೊತೆ ಡಿವೋರ್ಸ್ ಬಳಿಕ ಧನಶ್ರೀ ವರ್ಮಾ ಸೌಥ್ ನಟನೊಂದಿಗೆ ರೊಮ್ಯಾನ್ಸ್ Hey Kannamma

Published : Nov 16, 2026, 11:53 AM IST

ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರಿಂದ ವಿಚ್ಛೇದನ ಪಡೆದ ನಂತರ ಧನಶ್ರೀ ವರ್ಮಾ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಅವರು ದಿಲ್ ರಾಜು ನಿರ್ಮಾಣದ 'ಹೇ ಕಣ್ಣಮ್ಮಾ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

PREV
15
ಧನಶ್ರೀ ವರ್ಮಾ ರೊಮ್ಯಾನ್ಸ್

ಕ್ರಿಕೆಟಿಗ ಯುಜ್ವೇಂದ್ರ ಚಹಲ್ (Yuzvendra Chahal) ಜೊತೆಗಿನ ಡಿವೋರ್ಸ್ ಬಳಿಕ ಧನಶ್ರೀ ವರ್ಮಾ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದ, ಧನಶ್ರೀ ವರ್ಮಾ ಪೂರ್ಣ ಪ್ರಮಾಣದ ನಾಯಕಿಯಾಗಿ ತೆರೆ ಮೇಲೆ ಬರುತ್ತಿದ್ದಾರೆ. ಸೌಥ್ ನಟನೊಂದಿಗೆ ಧನಶ್ರೀ ವರ್ಮಾ ರೊಮ್ಯಾನ್ಸ್ ಮಾಡಲಿದ್ದಾರೆ.

25
ಸೌಥ್ ಸಿನಿ ಅಂಗಳಕ್ಕೆ ಧನಶ್ರೀ ವರ್ಮಾ

ಟಾಲಿವುಡ್ ನಿರ್ಮಾಪಕ ದಿಲ್ ರಾಜು ಅವರ 'ಹೇ ಕಣ್ಣಮ್ಮಾ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೇ ಕಣಮ್ಮಾ ಚಿತ್ರದ ಮೂಲಕ ಧನಶ್ರೀ ವರ್ಮಾ, ಸೌಥ್ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಯಶ್ ಮಾಸ್ಟರ್ ಮತ್ತು ಕಾರ್ತಿಕ್ ಮುರಳೀಧರನ್ ನಟಿಸಿದ್ದು, ಶಶಿ ಕುಮಾರ್ ಮುತ್ತುಲುರಿ ಆಕ್ಷನ್ ಕಟ್ ಹೇಳಿದ್ದಾರೆ.

35
ಹೇ ಕಣ್ಣಮ್ಮಾ ಸಿನಿಮಾದ ಟೀಸರ್

ಹೇ ಕಣ್ಣಮ್ಮಾ ಸಿನಿಮಾದ ಟೀಸರ್ ಕ್ಲಿಪ್‌ನ್ನು ಧನಶ್ರೀ ವರ್ಮಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು, ವಿಶೇಷವಾದ ಹೊಸ ಆರಂಭದ ಒಂದು ಸಣ್ಣ ನೋಟ. ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಪ್ರಯಾಣ ಎಂದು ಬರೆದುಕೊಂಡಿದ್ದಾರೆ.

45
ನವೆಂಬರ್ 27ರಂದು ಬಿಡುಗಡೆಯಾಗಲಿದೆ ಹೇ ಕಣ್ಣಮ್ಮಾ

ಮುಂದುವರಿದು ಇದು ನನ್ನ ಮೊದಲ ತೆಲಗು ಸಿನಿಮಾ ಆಗಿದ್ದು, ಹೇ ಕಣ್ಣಮ್ಮಾ ಚಿತ್ರದ ಅಧಿಕೃತ ಟೀಸರ್ ಇದಾಗಿದೆ. ದಿಲ್ ರಾಜು ಪ್ರೊಡಕ್ಷನ್ ಸಿನಿಮಾದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಒಂದು ಝಲಕ್ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ದೊಡ್ಡಪರದೆ ಮೇಲೆ ನಿಮ್ಮೆಲ್ಲರ ಪ್ರೀತಿಯನ್ನು ನೋಡಲು ನಾನು ಕಾಯುತ್ತಿದ್ದೇನೆ. ಚಿತ್ರ ಇದೇ ನವೆಂಬರ್ 27ರಂದು ಬಿಡುಗಡೆಯಾಗಲಿದೆ ಎಂದು ಧನ್ಯಶ್ರೀ ಮಾಹಿತಿ ನೀಡಿದ್ದಾರೆ.

55
ಮದುವೆ, ಡಿವೋರ್ಸ್

ಯುಜುವೇಂದ್ರ ಚಹಲ್ ಮತ್ತು ನೃತ್ಯಗಾರ್ತಿ ಹಾಗೂ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಡಿಸೆಂಬರ್ 11, 2020 ರಂದು ವಿವಾಹವಾಗಿದ್ದರು. ಮಾರ್ಚ್ 20, 2025 ರಂದು ಇಬ್ಬರು ವಿಚ್ಚೇದನ ಪಡೆದುಕೊಂಡಿದ್ದಾರೆ. ಚಹಲ್ ಮತ್ತು ಧನ್ಯಶ್ರೀ ದಂಪತಿ 2022ರ ಜೂನ್‌ನಿಂದಲೇ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ವರದಿಗಳ ಪ್ರಕಾರ,ಯುಜುವೇಂದ್ರ ಚಹಲ್ ಅವರು ಧನಶ್ರೀ ವರ್ಮಾ ಅವರಿಗೆ ₹4.5 ಕೋಟಿ / ₹4.75 ಕೋಟಿ ಜೀವನಾಂಶ ನೀಡಲು ಒಪ್ಪಂದ ಮಾಡಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories