ನಟಿ ಸಾಯಿ ಪಲ್ಲವಿ ಎಂದರೆ ತಕ್ಷಣ ನೆನಪಾಗುವುದು ಅವರ ನೈಸರ್ಗಿಕ ಸೌಂದರ್ಯ ಮತ್ತು ಉದ್ದನೆಯ ಕೂದಲು. ಆದರೆ ಇದೀಗ ಸಾಯಿ ಪಲ್ಲವಿ ತಮ್ಮ ಅಚ್ಚುಮೆಚ್ಚಿನ ಉದ್ದನೆಯ ಕೂದಲಿಗೇ ಕತ್ತರಿ ಹಾಕಿದ್ದಾರೆ. ಅವರ ಈ ಹೊಸ ಅವತಾರವನ್ನು ಕಂಡ ಪೋಷಕರು ಹೌಹಾರಿದ್ದಾರೆ.
ಉದ್ದನೆಯ ಕೂದಲಿಗೆ ಕತ್ತರಿ, ಮಗಳ ಲುಕ್ ಕಂಡು ಶಾಕ್ ಆದ ತಾಯಿ!
ನಟಿ ಸಾಯಿ ಪಲ್ಲವಿ (Sai Pallavi) ಎಂದರೆ ತಕ್ಷಣ ನೆನಪಾಗುವುದು ಅವರ ನೈಸರ್ಗಿಕ ಸೌಂದರ್ಯ ಮತ್ತು ಉದ್ದನೆಯ ಕೂದಲು. ಆದರೆ ಇದೀಗ ಹೊಸ ಸಿನಿಮಾದಲ್ಲಿನ ವಿಭಿನ್ನ ಪಾತ್ರಕ್ಕಾಗಿ ಸಾಯಿ ಪಲ್ಲವಿ ತಮ್ಮ ಅಚ್ಚುಮೆಚ್ಚಿನ ಉದ್ದನೆಯ ಕೂದಲಿಗೇ ಕತ್ತರಿ ಹಾಕಿದ್ದಾರೆ. ಅವರ ಈ ಹೊಸ ಅವತಾರವನ್ನು ಕಂಡ ತಾಯಿಯೇ ಒಂದು ಕ್ಷಣ ದಂಗಾಗಿದ್ದಾರೆ. ಅಷ್ಟೇ ಅಲ್ಲ, ತಂದೆ ಕೂಡ ಮಗಳ ಲುಕ್ ನೋಡಿ ವಿಗ್ ಹಾಕಿಕೊಂಡಿದ್ದೀಯಾ ಎಂದು ಪ್ರಶ್ನಿಸಿದ್ದರಂತೆ!
25
ಇತ್ತೀಚೆಗೆ ಬಿಡುಗಡೆಯಾದ 'ರಾಮಾಯಣ' ಸಿನಿಮಾದಲ್ಲಿ ಸೀತೆಯಾಗಿ ಪ್ರೇಕ್ಷಕರ ಮನಗೆದ್ದಿರುವ ಸಾಯಿ ಪಲ್ಲವಿ, ಇದೀಗ 'ಓಂ: ಚಾಪ್ಟರ್ 1 – ಉಧಿರಮ್: ದಿ ಬ್ಲಡ್ ವುಡ್' ಚಿತ್ರದ ಮೂಲಕ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಖಡಕ್ ಸಿಬಿಐ ಅಧಿಕಾರಿಯಾಗಿ ನಟಿಸಿದ್ದು, ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲು ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡಿದ್ದಾರೆ.
35
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಅನುಭವವನ್ನು ಹಂಚಿಕೊಂಡಿರುವ ಸಾಯಿ ಪಲ್ಲವಿ, ಚಿತ್ರದ ಕಥೆ ಕೇಳಿದ ಕೂಡಲೇ ಪಾತ್ರಕ್ಕಾಗಿ ಲುಕ್ ಬದಲಿಸಿಕೊಳ್ಳಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಕೂದಲು ಕತ್ತರಿಸಿಕೊಂಡ ಬಳಿಕ ಮೊದಲ ಬಾರಿಗೆ ತಾಯಿಗೆ ವಿಡಿಯೋ ಕರೆ ಮಾಡಿದ್ದರಂತೆ. ಮಗಳ ಹೊಸ ಅವತಾರವನ್ನು ಕಂಡ ತಾಯಿ ಶಾಕ್ ಆಗಿ ತಕ್ಷಣವೇ ಕರೆ ಕಟ್ ಮಾಡಿದ್ದಾರೆ. ಇತ್ತ ತಂದೆ ಫೋನ್ ಮಾಡಿ, 'ಇದು ನಿಜವಾದ ಕೂದಲಾ ಅಥವಾ ವಿಗ್ ಹಾಕಿಕೊಂಡಿದ್ದೀಯಾ?' ಎಂದು ಕೇಳಿದ್ದರಂತೆ. ನಂತರ ಇದು ಸಿನಿಮಾದ ಪಾತ್ರಕ್ಕಾಗಿ ಮಾಡಿಕೊಂಡ ಬದಲಾವಣೆ ಎಂದು ವಿವರಿಸಿದಾಗ ಪೋಷಕರು ಸಮಾಧಾನಗೊಂಡಿದ್ದಾರೆ.
ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಕೂಡ ಸಾಯಿ ಪಲ್ಲವಿ ಅವರ ವೃತ್ತಿಪರ ಬದ್ಧತೆಯನ್ನು ಮೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ನಾಯಕರು ಪಾತ್ರಕ್ಕಾಗಿ ಇಂತಹ ಬದಲಾವಣೆ ಮಾಡಿಕೊಳ್ಳುವುದನ್ನು ನೋಡುತ್ತೇವೆ. ಆದರೆ ಸಾಯಿ ಪಲ್ಲವಿ ಕಥೆಯ ಮೇಲಿನ ಪ್ರೀತಿಯಿಂದ ಸ್ವಯಂಪ್ರೇರಣೆಯಿಂದ ಕೂದಲು ಕತ್ತರಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
55
ಚಿತ್ರದಲ್ಲಿ ನಿತ್ಯಾ ರೆಡ್ಡಿ ಎಂಬ ಐಪಿಎಸ್ ಅಧಿಕಾರಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಆಂಧ್ರಪ್ರದೇಶದಲ್ಲಿ ಎಎಸ್‌ಪಿಯಾಗಿ ಕೆಲಸ ಆರಂಭಿಸುವ ಅವರು ಬಳಿಕ ಸಿಬಿಐ ಸೇರಿ, ಇಂಟರ್‌ಪೋಲ್ ಸಹಯೋಗದೊಂದಿಗೆ 'ಆಪರೇಷನ್ ಮೋಲ್' ಕಾರ್ಯಾಚರಣೆ ಮುನ್ನಡೆಸುತ್ತಾರೆ. ರಕ್ತಚಂದನ ಕಳ್ಳಸಾಗಣೆ ಜಾಲದ ಸುತ್ತ ಸಾಗುವ ಈ ಕಥೆ ಅರಣ್ಯ ಕಾರ್ಮಿಕರ ಶೋಷಣೆಯ ಕರಾಳ ಮುಖವನ್ನೂ ತೆರೆದಿಡಲಿದೆ. ಕಥೆಯ ಕೆಲವು ಅಂಶಗಳು 'ಪುಷ್ಪ' ಸಿನಿಮಾವನ್ನು ನೆನಪಿಸುತ್ತವೆ. ನವೆಂಬರ್ 20ರಂದು ಸಿನಿಮಾ ತೆರೆಗೆ ಬರಲಿದ್ದು, ಸಾಯಿ ಪಲ್ಲವಿಯ ಹೊಸ ಲುಕ್ ಮತ್ತು ಖಡಕ್ ಅಭಿನಯ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.