11:33ಕ್ಕೆ ಲಾಂಚ್ ಆಯ್ತು Yash Toxic ಟೀಸರ್‌ : ಏನಿದು 'ಏಂಜಲ್ಸ್' ಮತ್ತು 'ಲೇಡಿಸ್' ಕನೆಕ್ಷನ್? ಇಲ್ಲಿದೆ ಫುಲ್ ಡಿಟೇಲ್ಸ್!"

Published : Jul 01, 2026, 02:26 PM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ  Toxic: A Fairytale for Grown-Ups' ಚಿತ್ರದ 'Ladies & Ladies' ಟೀಸರ್ ಇಂದು (ಜುಲೈ 1, ಬುಧವಾರ) 11:33 AMಕ್ಕೆ ಬಿಡುಗಡೆಯಾಗಿದ್ದು, ಈ ಸಮಯದ ಆಯ್ಕೆಯೇ ಈಗ ಅಭಿಮಾನಿಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. 

PREV
15
Toxic: A Fairytale for Grown-Ups ಚಿತ್ರದ 'Ladies & Ladies'

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'Toxic: A Fairytale for Grown-Ups' ಚಿತ್ರದ 'Ladies & Ladies' ಟೀಸರ್ ಇಂದು (ಜುಲೈ 1, ಬುಧವಾರ) 11:33 AMಕ್ಕೆ ಬಿಡುಗಡೆಯಾಗಿದ್ದು, ಈ ಸಮಯದ ಆಯ್ಕೆಯೇ ಈಗ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಚಿತ್ರತಂಡ ಇದಕ್ಕೆ ಯಾವುದೇ ಅಧಿಕೃತ ಕಾರಣ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ '11:33 Angel Number' ಬಗ್ಗೆ ಕುತೂಹಲ ಹೆಚ್ಚಾಗಿದೆ.

ಅಂತರರಾಷ್ಟ್ರೀಯ ಲೈಫ್‌ಸ್ಟೈಲ್ ಮ್ಯಾಗಜಿನ್ Cosmopolitan ಪ್ರಕಟಿಸಿರುವ ಮಾಹಿತಿಯ ಪ್ರಕಾರ, 11:33 Angel Number ಅನ್ನು ಹೊಸ ಆರಂಭ, ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಜೀವನದಲ್ಲಿ ದೊಡ್ಡ ಬದಲಾವಣೆಗಳ ಸಂಕೇತ ಎಂದು ಕೆಲವರು ನಂಬುತ್ತಾರೆ. ಇದು ಸಂಖ್ಯಾಶಾಸ್ತ್ರ (Numerology) ಆಧಾರಿತ ಆಧ್ಯಾತ್ಮಿಕ ನಂಬಿಕೆಯಾಗಿದೆ.

25
11:33 Angel Number

11 ಸಂಖ್ಯೆಯನ್ನು ಹೊಸ ಅವಕಾಶ ಮತ್ತು ಆತ್ಮಜಾಗೃತಿಯ ಸಂಕೇತವಾಗಿ, 33 ಸಂಖ್ಯೆಯನ್ನು ನಾಯಕತ್ವ, ಪ್ರೇರಣೆ ಹಾಗೂ ಉನ್ನತ ಗುರಿಗಳೊಂದಿಗೆ ಸಂಪರ್ಕಿಸಲಾಗುತ್ತದೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಎರಡೂ ಸೇರಿ 11:33 ಅನ್ನು "ಹೊಸ ಅಧ್ಯಾಯ ಆರಂಭವಾಗುವ ಸಮಯ" ಎಂದು ಕೆಲವರು ವ್ಯಾಖ್ಯಾನಿಸುತ್ತಾರೆ.

35
11:33 Angel Number... ಐವರು 'Angels'ಗಳ ಎಂಟ್ರಿಯಾ?

Toxic ಟೀಸರ್‌ನಲ್ಲಿ Nayanthara, Kiara Advani, Huma Qureshi, Tara Sutaria ಮತ್ತು Rukmini Vasanth ಅವರನ್ನು ಒಂದೇ ವೇಳೆ ಪರಿಚಯಿಸಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. Angel Number 1133 ಹೊಸ ಅಧ್ಯಾಯ ಮತ್ತು ಶಕ್ತಿಶಾಲಿ ಮಹಿಳೆ ಎನರ್ಜಿ ಸಂಕೇತ ಎಂದು ಕೆಲವರು ನಂಬುತ್ತಾರೆ, "ಇದೇ ಕಾರಣಕ್ಕೆ 11:33 AM ಸಮಯ ಆಯ್ಕೆಯಾಯಿತೇ?" ಎಂಬ ಚರ್ಚೆ ಜೋರಾಗಿದೆ. ಆದರೆ ಇದು ಅಭಿಮಾನಿಗಳ ಊಹೆ ಮಾತ್ರ; ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

45
oxic ಚಿತ್ರದ ಮಹಿಳಾ ಪಾತ್ರಗಳ ಪರಿಚಯ

ಇದೇ ಕಾರಣಕ್ಕೆ, ಯಶ್ ಅವರ Toxic ಚಿತ್ರದ ಮಹಿಳಾ ಪಾತ್ರಗಳ ಪರಿಚಯವನ್ನು 11:33 AMಕ್ಕೆ ಬಿಡುಗಡೆ ಮಾಡಿರುವುದು ಅಭಿಮಾನಿಗಳಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ಚಿತ್ರತಂಡವು 11:33 ಸಮಯವನ್ನು ಏಂಜಲ್ ನಂಬರ್ ಅಥವಾ ಸಂಖ್ಯಾಶಾಸ್ತ್ರದ ಕಾರಣಕ್ಕೇ ಆಯ್ಕೆ ಮಾಡಿದೆ ಎಂದು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದ್ದರಿಂದ ಈ ಕನೆಕ್ಷನ್ ಅಭಿಮಾನಿಗಳ ಊಹೆ ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆಯಷ್ಟೇ.

55
Ladies & Ladies' ಟೀಸರ್‌

ಇನ್ನೊಂದೆಡೆ, ಇಂದು ಬಿಡುಗಡೆಯಾದ 'Ladies & Ladies' ಟೀಸರ್‌ನಲ್ಲಿ Nayanthara, Kiara Advani, Huma Qureshi ಹಾಗೂ Rukmini Vasanth ಅವರ ಪಾತ್ರಗಳನ್ನು ಅನಾವರಣಗೊಳಿಸಲಾಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories