Rukmini Vasanth: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರುಕ್ಮಿಣಿ ವಸಂತ್ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಒಂದಷ್ಟು ವಿಡೀಯೋ ಮತ್ತು ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ನಲ್ಲಿ ತಾವು ಜೂನ್ ತಿಂಗಳಲ್ಲಿ ನೋಡಿದ ಸಿನಿಮಾ, ಪ್ರವಾಸಿ ತಾಣಗಳು, ತಿಂದ ತಿನಿಸುಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರುಕ್ಮಿಣಿ ವಸಂತ್ ತಮ್ಮ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಜೂನ್ ತಿಂಗಳ ಸಿಹಿ ನೆನಪುಗಳನ್ನು ಒಟ್ಟಿಗೆ ಸೇರಿಸಿ ಹಂಚಿಕೊಂಡಿರುವ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
27
ಟಾಕ್ಸಿಕ್ ಬ್ಯೂಟಿಯ ಹೊಸ ಪೋಸ್ಟ್ ವೈರಲ್
ಈ ಪೋಸ್ಟ್‌ನಲ್ಲಿ ರುಕ್ಮಿಣಿ ವಸಂತ್ ತಾವು ಜೂನ್ ತಿಂಗಳಲ್ಲಿ ಏನೆಲ್ಲಾ ಮಾಡಿದ್ದಾರೋ, ಅವುಗಳ ಹಲವು ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿಯ ಟ್ರಾವೆಲ್ ಡೈರಿ, ನೋಡಿದಂತಹ ಸಿನಿಮಾಗಳು, ತಿಂದಂತಹ ಫೇವರಿಟ್ ತಿನಿಸುಗಳು, ಎಳನೀರು, ಮುದ್ದಾದ ಪೋಸ್ ಎಲ್ಲವೂ ಸೇರಿದೆ.
37
ಜೂನ್ ಫೋಟೊ ಡಂಪ್
"June looked a little something like this…" ಎಂದು ಕ್ಯಾಪ್ಷನ್ ನೀಡಿ, ಜೂನ್ ತಿಂಗಳಲ್ಲಿ ತಮ್ಮ ಜೀವನದ ಸಣ್ಣ-ಸಣ್ಣ ಸಂತಸದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ನಟಿ ಹಂಚಿಕೊಂಡಿರುವ ಫನ್ನಿ ಫೇಸ್ ಫಿಲ್ಟರ್ ಬಳಸಿರುವ ವಿಡಿಯೋ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದೆ.
ಅಷ್ಟೇ ಅಲ್ಲದೆ, ರುಕ್ಮಿಣಿ ವಸಂತ್ "Worth every minute", "Dal Baati Churma, you have my heart", "For the love of cinema" ಹಾಗೂ "Left the theatre carrying everyone's feelings" ‘Puliyogré life’ ಎಂಬ ಸಾಲುಗಳ ಮೂಲಕ ಆಹಾರ ಪ್ರೀತಿ, ಸಿನಿಮಾ ಮೇಲಿನ ಅಭಿಮಾನ ಮತ್ತು ಜೀವನದ ಸುಂದರ ಅನುಭವಗಳ ಬಗ್ಗೆ ರುಕ್ಮಿಣಿ ಬರೆದುಕೊಂಡಿದ್ದಾರೆ.
57
ರುಕ್ಮಿಣಿ ವಸಂತ್’ಗೆ ಹೃದಯದ ಸುರಿಮಳೆ
ರುಕ್ಮಿಣಿ ಅವರ ಈ ಪೋಸ್ಟ್‌ಗೆ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೈಕ್ಸ್ ಬಂದಿದ್ದು, ಸಾವಿರಾರು ಅಭಿಮಾನಿಗಳು ಹಾರ್ಟ್ ಹಾಗೂ ಫೈರ್ ಇಮೋಜಿಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಸೂಪರ್, ಕ್ಯೂಟ್ ಎಂದಿದ್ದಾರೆ, ಅಷ್ಟೇ ಅಲ್ಲದೇ ನಾನು ನಿನ್ನ ಕೈಯಲ್ಲಿರುವ ಎಳನೀರಾಗಲು ಬಯಸುತ್ತೇನೆ ಎಂದು ಸಹ ಕಾಮೆಂಟ್ ಮಾಡಿದ್ದಾರೆ.
67
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ಸಿನಿಮಾಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರುವ ರುಕ್ಮಿಣಿ ವಸಂತ್, ಆಗಾಗ ತಮ್ಮ ಓದು, ಟ್ರಾವೆಲ್, ಫೋಟೋಶೂಟ್ ಹಾಗೂ ಸಿನಿಮಾ ಅಪ್‌ಡೇಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಹೊಸ ಪೋಸ್ಟ್ ಕೂಡ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
77
ರುಕ್ಮಿಣಿ ವಸಂತ್ ನಟಿಸುತ್ತಿರುವ ಸಿನಿಮಾಗಳು
ರುಕ್ಮಿಣಿ ವಸಂತ್ ಸದ್ಯ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿದ್ದಾರೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆ ನಟಿಸಿರುವ ರುಕ್ಮಿಣಿ, ಎನ್ ಟಿ ಆರ್ ಜೊತೆ ಡ್ರಾಗನ್, ಧನುಷ್ ಮುಂದಿನ ಸಿನಿಮಾದಲ್ಲೂ ರುಕ್ಮಿಣಿ ನಾಯಕಿ, ಇದಲ್ಲದೇ ಕೆವಿಎನ್ ಪ್ರೊಡಕ್ಷನ್ ನ ಮುಂದಿನ ಬಿಗ್ ಬಜೆಟ್ ಕನ್ನಡ ಸಿನಿಮಾದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.