Zeenat Aman: ಮದುವೆಗೆ ಮುನ್ನ ಲಿವ್-ಇನ್ ಸಂಬಂಧದಲ್ಲಿರಿ ಎಂದ ಸ್ಟಾರ್ ನಟಿ

Published : Jul 01, 2026, 10:51 AM IST

Couples Should Live Together Before Marriage Zeenat Aman ಮದುವೆಗೂ ಮುನ್ನ ಲಿವ್-ಇನ್‌ನಲ್ಲಿ ಇದ್ದರೆ ಸಂಬಂಧದ ನಿಜಸ್ವರೂಪ ತಿಳಿಯುತ್ತದೆ; 15 ವರ್ಷ ದುಃಖದಲ್ಲಿ ಬದುಕುವುದಕ್ಕಿಂತ 5 ವರ್ಷ ಸಂತೋಷವಾಗಿ ಬದುಕುವುದು ಉತ್ತಮ ಎಂದು ಜೀನತ್ ಅಮಾನ್ ಹೇಳಿದ್ದಾರೆ.

PREV
14
ಜೀನತ್ ಅಮಾನ್

ಬಾಲಿವುಡ್‌ನ ಹಿರಿಯ ನಟಿ Zeenat Aman ಮತ್ತೊಮ್ಮೆ ತಮ್ಮ ಬೋಲ್ಡ್ ಹೇಳಿಕೆಯಿಂದ ಚರ್ಚೆಗೆ ಕಾರಣವಾಗಿದ್ದಾರೆ. 74ನೇ ವಯಸ್ಸಿನಲ್ಲೂ ಗಂಡ- ಹೆಂಡತಿ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ಮದುವೆಗೂ ಮುನ್ನ ಲಿವ್-ಇನ್‌ ಸಂಬಂಧದಲ್ಲಿ ಬದುಕುವುದು ಉತ್ತಮ ಎಂದು ಹೇಳಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ಜೀನತ್ ಅಮಾನ್, "ಕಾನೂನಾತ್ಮಕವಾಗಿ ಮದುವೆಯಾಗುವ ಮೊದಲು ಇಬ್ಬರ ನಡುವೆ ಮಾನಸಿಕ, ಭಾವನಾತ್ಮಕ ಹಾಗೂ ಜೀವನಶೈಲಿಯ ಹೊಂದಾಣಿಕೆ ಇದೆಯೇ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ" ಎಂದು ಹೇಳಿದ್ದಾರೆ.

24
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ

ಹಾಗೇ ಹೊಂದಾಣಿಕೆ ಇಲ್ಲದೆ 15 ವರ್ಷ ದುಃಖದ ಜೀವನ ನಡೆಸುವುದಕ್ಕಿಂತ, 5 ವರ್ಷ ಸಂತೋಷದಿಂದ ಬದುಕುವುದು ಉತ್ತಮ ಅಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ಹೊಂದಾಣಿಕೆ ಇಲ್ಲದ ಸಂಬಂಧವನ್ನು ಮುಂದುವರಿಸುವುದಕ್ಕಿಂತ, ಸಂತೋಷದ ಜೀವನವೇ ಮುಖ್ಯ ಎಂಬುದು ಅವರ ಅಭಿಪ್ರಾಯ.ಈ ವಿಚಾರವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಜೀನತ್ ಅಮಾನ್ ಅವರ ಪ್ರಕಾರ, ಪ್ರೀತಿ ಮಾತ್ರ ಸಂಬಂಧವನ್ನು ಗಟ್ಟಿಯಾಗಿಡುವುದಿಲ್ಲ. ಪರಸ್ಪರ ಸಂಬಂಧದಲ್ಲಿ ಗೌರವ, ಹೊಂದಾಣಿಕೆ, ತಾಳ್ಮೆ ಮತ್ತು ರಾಜಿ ಅತ್ಯಂತ ಅವಶ್ಯಕ. ಮದುವೆಯ ನಂತರವೂ ಸಂಬಂಧವನ್ನು ಉಳಿಸಿಕೊಳ್ಳಲು ಇಬ್ಬರೂ ನಿರಂತರ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

34
ನಿಲುವನ್ನು ಬದಲಿಸದ ಜೀನತ್ ಅಮಾನ್

ವಿಷಯ ಎನೆಂದರೆ ಈ ಅಭಿಪ್ರಾಯವನ್ನು ಅವರು ಈ ಹಿಂದೆ 2024ರಲ್ಲಿಯೇ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ "ರಿಲೇಷನ್‌ಶಿಪ್‌ನಲ್ಲಿದ್ದರೆ ಮದುವೆಗೂ ಮುನ್ನ ಒಟ್ಟಿಗೆ ವಾಸಿಸಿ" ಎಂದು ಬರೆದು ಚರ್ಚೆಗೆ ಕಾರಣರಾಗಿದ್ದರು. ಇದೇ ಸಲಹೆಯನ್ನು ತಮ್ಮ ಇಬ್ಬರು ಪುತ್ರರಿಗೂ ನೀಡಿದ್ದಾಗಿ ಅವರು ಆಗ ಹೇಳಿಕೊಂಡಿದ್ದರು. ದಿನದಲ್ಲಿ ಕೆಲ ಗಂಟೆಗಳ ಕಾಲ ಒಬ್ಬರ ಉತ್ತಮ ವ್ಯಕ್ತಿತ್ವ ಕಾಣುವುದು ಸುಲಭ. ಆದರೆ ಒಂದೇ ಮನೆಯಲ್ಲಿದ್ದು, ಜವಾಬ್ದಾರಿಗಳು, ಅಭ್ಯಾಸಗಳು ಮತ್ತು ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಸಾಧ್ಯವೇ ಎಂಬುದನ್ನು ಲಿವ್-ಇನ್ ಮೂಲಕ ತಿಳಿಯಬಹುದು ಎಂದು ಅವರು ವಿವರಿಸಿದ್ದರು.

ಆಗ ಹಿರಿಯ ನಟಿ Saira Banu ಸೇರಿದಂತೆ ಕೆಲವರು ಅವರ ಹೇಳಿಕೆಯನ್ನು ಟೀಕಿಸಿದ್ದರು. ಆದರೆ ಈ ಬಾರಿ ಕೂಡ ಜೀನತ್ ಅಮಾನ್ ತಮ್ಮ ನಿಲುವನ್ನು ಬದಲಿಸಿಲ್ಲ.

44
ಪರ-ವಿರೋಧ ಚರ್ಚೆ

ಸದ್ಯ ಜೀನತ್ ಅಮಾನ್ ಅವರ ಈ ಹೇಳಿಕೆ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ಆಧುನಿಕ ಮತ್ತು ಪ್ರಾಯೋಗಿಕ ಸಲಹೆ ಎಂದು ಬೆಂಬಲಿಸುತ್ತಿದ್ದರೆ, ಇನ್ನೂ ಕೆಲವರು ಭಾರತೀಯ ಕುಟುಂಬ ವ್ಯವಸ್ಥೆಗೆ ವಿರುದ್ಧವಾದ ಅಭಿಪ್ರಾಯ ಎಂದು ಟೀಕಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories