ಯಶ್ 'ಟಾಕ್ಸಿಕ್' ಸೆಟ್‌ನಲ್ಲಿ ಗೀತು ಮೋಹನ್‌ದಾಸ್ ಖಡಕ್ ಅವತಾರ: ಹುಟ್ಟುಹಬ್ಬಕ್ಕೆ BTS ವಿಡಿಯೋ ರಿಲೀಸ್

Published : Jun 08, 2026, 05:10 PM IST

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಚಿತ್ರತಂಡ ತೆರೆಮರೆಯ ದೃಶ್ಯಗಳ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಗೀತು ಅವರ ಖಡಕ್ ನಿರ್ದೇಶನದ ಶೈಲಿ ಮತ್ತು ಸೃಜನಶೀಲತೆ ಎದ್ದು ಕಾಣುತ್ತಿದೆ.

PREV
15
ಸ್ಪೆಷಲ್ ಸರ್ಪ್ರೈಸ್

'ಟಾಕ್ಸಿಕ್' ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಒಂದು ಸ್ಪೆಷಲ್ ಸರ್ಪ್ರೈಸ್ ನೀಡಿದೆ. ತೆರೆಮರೆಯ ದೃಶ್ಯಗಳ (ಬಿಟಿಎಸ್) ವಿಡಿಯೋವೊಂದನ್ನು ರಿಲೀಸ್ ಮಾಡುವ ಮೂಲಕ ಅವರಿಗೆ ಶುಭ ಕೋರಿದೆ. ಈ ವಿಡಿಯೋದಲ್ಲಿ ಗೀತು ಅವರ ಕ್ರಿಯೇಟಿವಿಟಿ ಮತ್ತು ಸೆಟ್‌ನಲ್ಲಿ ಅವರ ಖಡಕ್ ವ್ಯಕ್ತಿತ್ವದ ಝಲಕ್ ಸಿಗುತ್ತದೆ.

25
ಪ್ರತಿ ಶಾಟ್‌ನಲ್ಲೂ ಹೊಸ ಅನುಭವ

ಶಾಟ್‌ಗಳನ್ನು ನಿಖರವಾಗಿ ನಿರ್ದೇಶಿಸುವುದು, ದೊಡ್ಡ ಮಟ್ಟದ ಆಕ್ಷನ್ ದೃಶ್ಯಗಳನ್ನು ನಿಭಾಯಿಸುವುದು, ನಟರಿಗೆ ಮಾರ್ಗದರ್ಶನ ನೀಡುವುದು ಮತ್ತು ದೊಡ್ಡ ಚಿತ್ರತಂಡವನ್ನು ತುಂಬಾನೇ ಆತ್ಮವಿಶ್ವಾಸದಿಂದ ಮುನ್ನಡೆಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಪ್ರತಿ ಶಾಟ್‌ನಲ್ಲೂ ಹೊಸ ಅನುಭವ, ಡೈಲಾಗ್‌ಗಿಂತ ಹೆಚ್ಚು ಮಾತನಾಡಿದ ಮೌನ... ಎಲ್ಲದರ ಹಿಂದೆ ಅವರಿದ್ದರು! ಹುಟ್ಟುಹಬ್ಬದ ಶುಭಾಶಯಗಳು ಗೀತು ಮೋಹನ್‌ದಾಸ್ ಎಂಬ ಸಂದೇಶದೊಂದಿಗೆ ಚಿತ್ರತಂಡ ಈ ವಿಡಿಯೋವನ್ನು ಹಂಚಿಕೊಂಡಿದೆ.

35
ಪಾತ್ರ ಎಷ್ಟು ಮುಖ್ಯ

ಭಾರತೀಯ ಚಿತ್ರರಂಗದ ಬೃಹತ್ ಚಿತ್ರಗಳಲ್ಲಿ ಒಂದಾದ 'ಟಾಕ್ಸಿಕ್' ಅನ್ನು ತೆರೆಗೆ ತರುವಲ್ಲಿ ನಿರ್ದೇಶಕಿಯಾಗಿ ಅವರ ಪಾತ್ರ ಎಷ್ಟು ಮುಖ್ಯ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಇಷ್ಟೊಂದು ದೊಡ್ಡ ಮಟ್ಟದ, ಜಾಗತಿಕವಾಗಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವನ್ನು ನಿರ್ದೇಶಿಸುತ್ತಿರುವ ಕೆಲವೇ ಕೆಲವು ಮಹಿಳಾ ನಿರ್ದೇಶಕರಲ್ಲಿ ಗೀತು ಕೂಡ ಒಬ್ಬರಾಗಿರುವುದು ವಿಶೇಷ.

45
ಯಶ್ ನಾಯಕ

'ಟಾಕ್ಸಿಕ್' ಚಿತ್ರದಲ್ಲಿ ಯಶ್ ನಾಯಕನಾಗಿ ನಟಿಸುತ್ತಿದ್ದು, ಅವರ ಪಾತ್ರದ ಹೆಸರು 'ರಾಯ' ಎಂದು ಹೇಳಲಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಭಾರಿ ಸದ್ದು ಮಾಡಿತ್ತು. ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

55
ರವಿ ಬಸ್ರೂರ್ ಸಂಗೀತ

ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಅವರು ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜನೆ, ಉಜ್ವಲ್ ಕುಲಕರ್ಣಿ ಸಂಕಲನ ಹಾಗೂ ಟಿ.ಪಿ. ಅಬಿದ್ ಪ್ರೊಡಕ್ಷನ್ ಡಿಸೈನ್ ಮಾಡುತ್ತಿದ್ದಾರೆ. ಹಾಲಿವುಡ್ ಆಕ್ಷನ್ ಡೈರೆಕ್ಟರ್ ಜೆ.ಜೆ. ಪೆರ್ರಿ ಜೊತೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ಅನ್ಬರಿವ್ ಮತ್ತು ಕೇಚ ಖಂಫಾಕ್ಡೀ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories