ಲಂಡನ್‌ ನೆಲದಲ್ಲಿ ಯಶ್-ಸಾಯಿ ಪಲ್ಲವಿ-ರಣಬೀರ್ ರೌಂಡ್; ವಿದೇಶದಿಂದ 5 ಮಿಲಿಯನ್ ಡಾಲರ್ ಬಾಚಿದ ಗ್ರೇಟ್ ಭಾರತೀಯರು!

Published : Nov 03, 2026, 08:02 PM IST

ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣಲಿರುವ ರಾಮಾಯಣ ಚಿತ್ರದ ಪ್ರಚಾರಕ್ಕೆ ಯಶ್, ಸಾಯಿ ಪಲ್ಲವಿ ಮತ್ತು ರಣಬೀರ್ ಕಪೂರ್ ಲಂಡನ್‌ಗೆ ತೆರಳಿ ಸಿನಿಮಾದ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ವಿದೇಶಗಳಿಂದ ಅದೆಷ್ಟು ಕೋಟಿ ಹಣ ಹರಿದುಬಂದಿದೆ ಗೊತ್ತಾ? ನೋಡಿ ಈ ಸ್ಟೋರಿ..

PREV
17

Ramayana Movie News: ಲಂಡನ್‌ನಲ್ಲಿ ‘ರಾಮಾಯಣ’ ಪ್ರಮೋಷನ್‌ನಲ್ಲಿ ಬ್ಯುಸಿಯಾದ ಯಶ್, ಸಾಯಿ ಪಲ್ಲವಿ, ರಣಬೀರ್; ವಿದೇಶಿ ಮುಂಗಡ ಬುಕಿಂಗ್ ಮೂಲಕ ಬಮದ ಹಣವೆಷ್ಟು?

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಭರ್ಜರಿಯಾಗಿ ನಡೆಸುತ್ತಿದೆ. ಇದೀಗ ನಟರಾದ ಯಶ್, ಸಾಯಿ ಪಲ್ಲವಿ ಮತ್ತು ರಣಬೀರ್ ಕಪೂರ್ ಲಂಡನ್‌ಗೆ ತೆರಳಿ ಸಿನಿಮಾದ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಈ ಪ್ರಚಾರ ಕಾರ್ಯಕ್ರಮದಲ್ಲಿ ಸಾಥ್ ನೀಡಿದ್ದಾರೆ.

27

ಈ ಹಿಂದೆ ಲಾಸ್ ಏಂಜಲ್ಸ್‌ನಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆದಿತ್ತು. ಅಲ್ಲದೆ, ಅಮೆರಿಕದ ಹಲವು ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿಯೂ ಚಿತ್ರತಂಡ ಭಾಗವಹಿಸಿತ್ತು. ಇದೀಗ ಲಂಡನ್‌ನಲ್ಲಿ ಪ್ರಚಾರ ಮುಂದುವರಿಸಿರುವ ತಂಡ, ಅಲ್ಲಿ ವಿಶೇಷ ಪ್ರದರ್ಶನ ಆಯೋಜಿಸಿದೆ. ಸಿನಿಮಾ ವೀಕ್ಷಿಸಿದ ಬಳಿಕ ಚಿತ್ರತಂಡ ಅಂತಾರಾಷ್ಟ್ರೀಯ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ, ಸಂದರ್ಶನಗಳಲ್ಲಿಯೂ ಭಾಗಿಯಾಗಿದೆ.

37

ಕಾರ್ಯಕ್ರಮದ ವೇಳೆ ಯಶ್, ಸಾಯಿ ಪಲ್ಲವಿ ಮತ್ತು ರಣಬೀರ್ ಒಟ್ಟಿಗೆ ಫೋಟೋ ಹಾಗೂ ಸೆಲ್ಫಿಗಳಿಗೆ ಪೋಸ್ ನೀಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಪೋಸ್ಟರ್‌ನಲ್ಲಿ ರಣಬೀರ್ ಕಪೂರ್ ಬಿಲ್ಲು ಮತ್ತು ಬಾಣ ಹಿಡಿದು ಕಾಣಿಸಿಕೊಂಡಿರುವ ಜನಪ್ರಿಯ ಪೋಸ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಈ ಕ್ಷಣಗಳ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.

47

ಲಂಡನ್ ಪ್ರವಾಸವು ಚಿತ್ರದ ಪ್ರಚಾರ ಅಭಿಯಾನದ ಕೊನೆಯ ಹಂತ ಎಂದು ವರದಿಯಾಗಿದೆ. ನವೆಂಬರ್ 4ರಂದು ವಿಶೇಷ ಪ್ರದರ್ಶನಗಳು ಮತ್ತು ಆರಂಭಿಕ ಪ್ರೀವ್ಯೂ ಶೋಗಳು ನಡೆಯಲಿದ್ದು, ಮರುದಿನ ಸಿನಿಮಾ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವಿದೇಶಿ ಮುಂಗಡ ಬುಕಿಂಗ್‌ನಲ್ಲಿ 5 ಮಿಲಿಯನ್ ಡಾಲರ್ ಗುರಿ!

57

ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲೂ ‘ರಾಮಾಯಣ’ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಲಭ್ಯವಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಚಿತ್ರದ ವಿದೇಶಿ ಮುಂಗಡ ಟಿಕೆಟ್ ಮಾರಾಟ ಸುಮಾರು 4.71 ಮಿಲಿಯನ್ ಡಾಲರ್ ತಲುಪಿದೆ. ಈ ಮೂಲಕ 5 ಮಿಲಿಯನ್ ಡಾಲರ್ ಗಡಿಯ ಸಮೀಪಕ್ಕೆ ಬಂದಿದೆ.

67

ಉತ್ತರ ಅಮೆರಿಕದಲ್ಲಿ 3.56 ಮಿಲಿಯನ್ ಡಾಲರ್, ಬ್ರಿಟನ್ ಮತ್ತು ಐರ್ಲೆಂಡ್‌ನಲ್ಲಿ 4,45,100 ಡಾಲರ್ ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಸುಮಾರು 4,31,700 ಡಾಲರ್ ಮುಂಗಡ ಬುಕಿಂಗ್ ದಾಖಲಾಗಿದೆ.

77

ವಿದೇಶಿ ಮಾರುಕಟ್ಟೆಯಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ದಾಖಲೆಯನ್ನು ಹಿಂದಿಕ್ಕುವ ಗುರಿಯನ್ನೂ ‘ರಾಮಾಯಣ’ ಹೊಂದಿದೆ ಎನ್ನಲಾಗುತ್ತಿದೆ. ‘ಧುರಂಧರ್ 2’ ಸಾಗರೋತ್ತರ ಮಾರುಕಟ್ಟೆಯಲ್ಲಿ ಸುಮಾರು ₹475.93 ಕೋಟಿ ಗಳಿಸಿತ್ತು. ಇದೀಗ ಯಶ್, ರಣಬೀರ್ ಮತ್ತು ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ ಯಾವ ದಾಖಲೆ ಬರೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories