ರಾಮಾಯಣ ಸಿನಿಮಾ ನಂತರ ಬ್ರೇಕ್ ತಗೊಳ್ತೀನಿ: ಯಶ್‌ ನಿರ್ಧಾರಕ್ಕೆ ಕಾರಣವೇನು?

Published : May 04, 2026, 04:24 PM IST

ರಾಮಾಯಣ ಸಿನಿಮಾದ ಬಳಿಕ ಒಂದಿಷ್ಟು ಸ್ವಲ್ಪ ದಿನಗಳ ಕಾಲ ವಿರಾಮ ಪಡೆದು ನಂತರ ಹೊಸ ಸಿನಿಮಾಗಳ ಬಗ್ಗೆ ಚಿಂತಿಸುವೆ ಎಂದಿದ್ದಾರೆ ಯಶ್‌. 2022ರಲ್ಲಿ ಬಿಡುಗಡೆಯಾದ ಕೆಜಿಎಫ್‌ 2 ಸಿನಿಮಾವೇ ಕೊನೆ.

PREV
15
ಸಿನಿಮಾಗಳನ್ನು ನಿರ್ವಹಿಸಿ ಬಳಲಿದ್ದೇನೆ

ರಾಮಾಯಣ ಸಿನಿಮಾದ ಬಳಿಕ ಒಂದಿಷ್ಟು ಕಾಲ ಬ್ರೇಕ್‌ ತೆಗೆದುಕೊಳ್ಳುವುದಾಗಿ ಯಶ್‌ ಹೇಳಿದ್ದಾರೆ. ಸದ್ಯ ಮುಂಬೈಯಲ್ಲಿ ‘ರಾಮಾಯಣ’ ಚಿತ್ರದಲ್ಲಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಅವರು, ‘ಏಕಕಾಲಕ್ಕೆ ಎರಡೆರಡು ದೈತ್ಯ ಸಿನಿಮಾಗಳನ್ನು ನಿರ್ವಹಿಸಿ ಬಳಲಿದ್ದೇನೆ.

25
ಕೆಜಿಎಫ್‌ 2 ಸಿನಿಮಾವೇ ಕೊನೆ

ಹೀಗಾಗಿ ಈ ಚಿತ್ರಗಳ ಬಳಿಕ ಸ್ವಲ್ಪ ದಿನಗಳ ಕಾಲ ವಿರಾಮ ಪಡೆದು ನಂತರ ಹೊಸ ಸಿನಿಮಾಗಳ ಬಗ್ಗೆ ಚಿಂತಿಸುವೆ ಎಂದಿದ್ದಾರೆ. 2022ರಲ್ಲಿ ಬಿಡುಗಡೆಯಾದ ಕೆಜಿಎಫ್‌ 2 ಸಿನಿಮಾವೇ ಕೊನೆ.

35
ಸಿಟ್ಟಿದೆ ಅಂತ ತಿಳಿದಿದೆ

ಆ ಬಳಿಕ ಇಲ್ಲಿಯವರೆಗೆ ನನ್ನ ಯಾವ ಸಿನಿಮಾವೂ ಬಿಡುಗಡೆಯಾಗಿಲ್ಲ. ಇದಕ್ಕೆ ಅಭಿಮಾನಿಗಳಿಗೆ ನನ್ನ ಬಗ್ಗೆ ಸಿಟ್ಟಿದೆ ಅಂತ ತಿಳಿದಿದೆ. ಆದರೆ ಈ ದೈತ್ಯ ಸಿನಿಮಾಗಳಿಗೆ ಅಷ್ಟು ಪರಿಶ್ರಮ ಹಾಗೂ ಸಮಯದ ಅಗತ್ಯವಿತ್ತು.

45
ಬ್ರೇಕ್‌ನ ಬಳಿಕ ಚಿಂತಿಸುವೆ

ಜೊತೆಗೆ ಎರಡೂ ಸಿನಿಮಾಗಳನ್ನೂ ಗ್ಲೋಬಲ್‌ ಲೆವೆಲ್‌ನಲ್ಲಿ ಬಿಡುಗಡೆ ಮಾಡುವ ಸವಾಲಿತ್ತು. ಕೆಜಿಎಫ್‌ 3 ಸಿನಿಮಾ ಮಾಡುವ ಬಗ್ಗೆ ಬ್ರೇಕ್‌ನ ಬಳಿಕ ಚಿಂತಿಸುವೆ. ಸದ್ಯ ಅದರ ಸ್ಕ್ರಿಪ್ಟ್‌ ಅಂತಿಮಗೊಳ್ಳಬೇಕಿದೆ ಎಂದೂ ಯಶ್‌ ಹೇಳಿದ್ದಾರೆ.

55
ದೀಪಾವಳಿಗೆ ಬಿಡುಗಡೆ

ಈ ವರ್ಷ ದೀಪಾವಳಿಗೆ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್‌ ನಟನೆ ಹಾಗೂ ಸಹ ನಿರ್ಮಾಣದ ‘ರಾಮಾಯಣ’ ಸಿನಿಮಾದ ಮೊದಲ ಭಾಗ ಬಿಡುಗಡೆಯಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories