NEET ಬಗ್ಗೆ ದನಿಯೆತ್ತಿದ್ದಕ್ಕೆ‌, ಪಾಕಿಸ್ತಾನಿ ಪತ್ರಕರ್ತೆ ಜೊತೆ ಮಾತನಾಡಿದ್ದಕ್ಕೆ ರಿಯಾಲಿಟಿ ಶೋನಿಂದಲೇ ಜಡ್ಜ್‌ ಔಟ್?

Published : May 25, 2026, 12:06 PM IST

NEET ಪರೀಕ್ಷೆ ಪೇಪರ್‌ ಲೀಕ್‌ ಆಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರೋದು ವ್ಯರ್ಥವಾಗಿದೆ. ಹೀಗಿರುವಾಗ ಸಂಗೀತ ನಿರ್ದೇಶಕ, ಗಾಯಕ ವಿಶಾಲ್ ದದ್ಲಾನಿ ಅವರು ಆನ್‌ಲೈನ್‌ನಲ್ಲಿ ಈ ಬಗ್ಗ ಆಕ್ರೋಶ ಹೊರಹಾಕಿದ್ದರು. ಈಗ ಅವರು ‘ಇಂಡಿಯನ್‌ ಐಡಲ್’‌ ಶೋನಿಂದ ಹೊರಬರುತ್ತಾರಾ?

PREV
13
ಭಯೋತ್ಪಾದನಾ ಕೃತ್ಯವೇ?

ವಿಶಾಲ್ ದದ್ಲಾನಿ ಅವರು ಪಾಕಿಸ್ತಾನಿ ಭಯೋತ್ಪಾದಕರ ಜೊತೆ ಕೈಜೋಡಿಸುವ ಮೂಲಕ ನಮ್ಮ ಸಾರ್ವಭೌಮತ್ವ, ರಾಷ್ಟ್ರವಾಗಿ ಬದುಕುವ ನಮ್ಮ ಹಕ್ಕನ್ನು ಪ್ರಶ್ನಿಸಿದ್ದಾರೆ. ಇದನ್ನು ಕೆಲವರು ಸ್ಪಷ್ಟವಾಗಿ ಭಯೋತ್ಪಾದನಾ ಕೃತ್ಯ ಎಂದು ಹೇಳಿದ್ದಾರೆ. ದಯವಿಟ್ಟು ಅವರ ಮೇಲೆ ಯುಎಪಿಎ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿ ಎಂದು ಕೆಲವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

23
ಪತ್ರಕರ್ತೆ ಜೊತೆ ಮಾತನಾಡಿದ್ರು

ಲಂಡನ್‌ನಲ್ಲಿ ವಿಶಾಲ್ ದದ್ಲಾನಿ ಅವರು ಪಾಕಿಸ್ತಾನಿ ಪತ್ರಕರ್ತೆ ಸಫೀನಾ ಖಾನ್ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ಸಫೀನಾ ಖಾನ್ ಅವರ ಭಾರತ ವಿರೋಧಿ ರಾಜಕೀಯ ದೃಷ್ಟಿಕೋನಗಳಲ್ಲಿ ಮಾತನಾಡುತ್ತಾರೆ. ಹೀಗಾಗಿ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

33
ಅನೌಪಚಾರಿಕ ಮಾತು

ಈ ಸಂವಾದವು ಸಾರ್ವಜನಿಕವಾಗಿ ನಡೆದಿದ್ದು, ಇವರಿಬ್ಬರು ಅನೌಪಚಾರಿಕವಾಗಿ ಮಾತನಾಡಿದ್ದಾರೆ. ಈ ಬಗ್ಗೆ ವಿಶಾಲ್‌ ದದ್ಲಾನಿ ಮಾತನಾಡಿದ್ದಾರೆ. ಇಂಡಿಯನ್‌ ಐಡಲ್‌ ಶೋನಲ್ಲಿ ವಿಶಾಲ್‌ ದದ್ಲಾನಿ ಅವರು ಕೂಡ ಜಡ್ಜ್‌ ಆಗಿದ್ದಾರೆ. ಪಾಕಿಸ್ತಾನಿ ಪತ್ರಕರ್ತೆ ಜೊತೆಗೆ ಮಾತನಾಡಿದರು, NEET ವಿರುದ್ಧ ಮಾತನಾಡಿದರು ಎಂದು ಅವರನ್ನು ಶೋನಿಂದ ಕೈಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories