ದೃಷ್ಟಿಬೊಟ್ಟು ಧಾರಾವಾಹಿ ಅಂತ್ಯಗೊಳ್ಳುವ ಸುಳಿವು ಸಿಕ್ಕಿದ್ದು, ತಂಡದ ಫೋಟೋಶೂಟ್ ಮತ್ತು ಮುದ್ದುರಾಜ್ ಅನೂಪ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಈ ವದಂತಿಗೆ ಪುಷ್ಟಿ ನೀಡಿವೆ. ದತ್ತನ ಪಾತ್ರಧಾರಿ ವಿಜಯ್ ಸೂರ್ಯ ಬಿಗ್ ಬಾಸ್‌ಗೆ ಹೋಗುತ್ತಿರುವುದು ಧಾರಾವಾಹಿ ನಿಲ್ಲಲು ಕಾರಣ ಎನ್ನಲಾಗಿದೆ.
ಇದೇ ಸೆಪ್ಟೆಂಬರ್ 28ರಿಂದ Bigg Boss Kannada Seaon 12 ಷೋ ಆರಂಭವಾಗಲಿದೆ. ಇದಕ್ಕಾಗಿ ಕೆಲವು ಸೀರಿಯಲ್ಗಳನ್ನೂ ಮುಗಿಸಲಾಗುತ್ತಿದೆ. ಬಿಗ್ಬಾಸ್ನಲ್ಲಿ ಪಾಲ್ಗೊಳ್ಳಲು ದೃಷ್ಟಿಬೊಟ್ಟು (Drishti Bottu) ಸೀರಿಯಲ್ ದತ್ತಾಬಾಯಿ ರೋಲ್ ಮಾಡ್ತಿರೋ ನಟ ವಿಜಯ ಸೂರ್ಯ ಕೂಡ ಹೋಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇದೇ ಕಾರಣಕ್ಕೆ, ವಿಜಯ ಸೂರ್ಯ (Vijay Suriya) ಅವರು ದೃಷ್ಟಿ ಬೊಟ್ಟು ಸೀರಿಯಲ್ನಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸುದ್ದಿಯಾಗುತ್ತಿದೆ.
27
ದತ್ತನ ಸಾವು?
ಅಷ್ಟಕ್ಕೂ ಸೀರಿಯಲ್ನಲ್ಲಿ ಇದಾಗಲೇ ಮಸಿ ಬಳೆದುಕೊಂಡಿದ್ದ ದೃಷ್ಟಿ ತನ್ನ ನಿಜ ರೂಪವನ್ನು ತೋರಿಸಿದ್ದಾಳೆ. ಇವರಿಬ್ಬರ ನಡುವೆ ಬಣ್ಣದ ವಿಷಯವನ್ನೇ ಇಟ್ಟುಕೊಂಡು ಬೆಂಕಿ ಹಚ್ಚುವ ಪ್ಲ್ಯಾನ್ ಮಾಡಿದ್ದ ದತ್ತನ ಅತ್ತಿಗೆ ಶರಾವತಿಗೆ ಸೋಲಾಗಿದೆ. ಇದೇ ಕಾರಣಕ್ಕೆ ಆಕೆ ದತ್ತನನ್ನು ಮುಗಿಸಲು ಸ್ಕೆಚ್ ಹಾಕಿದ್ದಳು. ಈಗ ದತ್ತನ ಸಾವಿನ ಸುದ್ದಿಯೂ ಬಂದಾಗಿದೆ. ಆತನ ಕಾರು ಅಪ್ಪಚ್ಚಿಯಾಗಿದೆ ಎಂದೇ ತೋರಿಸಲಾಗಿದೆ.
37
ದತ್ತನ ರೋಲ್ ಬದಲಾಗುತ್ತಾ?
ಇಷ್ಟು ಹೇಳುತ್ತಿದ್ದಂತೆಯೇ ದತ್ತನ ರೋಲ್ ಬದಲಾಗುತ್ತದೆ. ಆತನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿ ಹೊಸ ನಟನನ್ನು ತರಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಹಳೆಯ ದತ್ತ ವಿಜಯ ಸೂರ್ಯನನ್ನು ಸಾಯಿಸುವುದಿಲ್ಲ, ಬದಲಿಗೆ ಅವರನ್ನೇ ಕೋಮಾದಲ್ಲಿ ಇರಿಸುವಂತೆ ಮಾಡಿ ಬಿಗ್ಬಾಸ್ನಿಂದ ಬಂದ ಮೇಲೆ ಸೀರಿಯಲ್ ಮುಂದುವರೆಸಬಹುದು, ಇಲ್ಲದೇ ಅದಕ್ಕಿಂತಲೂ ಹೆಚ್ಚಾಗಿ ಸೀರಿಯಲ್ಗೆ ಬೇರೆಯ ರೀತಿ ಟ್ವಿಸ್ಟ್ ಕೊಟ್ಟು ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ ಎಂದೇ ವೀಕ್ಷಕರು ಅಂದುಕೊಂಡಿದ್ದರು.
ಆದರೆ, ಇದೀಗ ದೃಷ್ಟಿಯ ತಮ್ಮನ ರೋಲ್ ಮಾಡ್ತಿರೋ ಬಾಲಕ ಮುದ್ದುರಾಜ ಅನೂಪ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಎಲ್ಲರೂ ಏನು ಎತ್ತ ಎಂದು ತಿಳಿಯಲಾಗದೇ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. 'ನಿಮ್ಮೆಲ್ಲರೊಂದಿಗೆ ನನ್ನ ಅತ್ಯುತ್ತಮ ಸ್ಮರಣೀಯ ಸಮಯವನ್ನು ಕಳೆದಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಮತ್ತು ಶೀಘ್ರದಲ್ಲೇ ಮತ್ತೆ ಈ ತಂಡದ ಭಾಗವಾಗಲು ಬಯಸುತ್ತೇನೆ' ಎಂದು ಬಾಲಕ ಬರೆದುಕೊಂಡಿದ್ದಾನೆ.
57
ಅಂತಿಮ ಫೋಟೋಶೂಟ್
ಹಾಗಿದ್ದರೆ ಸೀರಿಯಲ್ ಮುಗಿಯುವುದು ಬಹುತೇಕ ಖಚಿತವಾಗಿದೆ. ಅಷ್ಟೇ ಅಲ್ಲದೇ ಇಡೀ ಟೀಮ್ನವರು ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ವಿಜಯಸೂರ್ಯ ಇಲ್ಲ ಎನ್ನುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಸೀರಿಯಲ್ ಮುಗಿಸುವುದೇ ಹೌದಾದರೆ ದತ್ತನನ್ನು ಸಾಯಿಸುವ ಅವಶ್ಯಕತೆ ಇತ್ತೇ ಎಂದು ಕೆಲವರು ಪ್ರಶ್ನಿಸುತ್ತಿದ್ದರೂ, ಕೊನೆಯಲ್ಲಿ ಸೀರಿಯಲ್ ಟ್ವಿಸ್ಟ್ ಪಡೆದು ಎಲ್ಲರೂ ಒಂದಾಗುವಂತೆ ಮಾಡುವ ಸಾಧ್ಯತೆ ಇದೆ.
67
ನಿರ್ಮಾಪಕರ ಫೋಟೋ
ಆದರೆ, ಇನ್ನೊಂದು ಕುತೂಹಲ ಎಂದರೆ ಬಾಲಕ ಹಾಕಿರುವ ಪೋಸ್ಟ್ನಲ್ಲಿ ನಟ ರಕ್ಷಿತ್ ಗೌಡ (Rakshith Gowda) ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ, ದತ್ತಾಬಾಯಿ ಆಗಿ ರಕ್ಷಿತ್ ಅವರು ಬರುತ್ತಿದ್ದಾರೆಯೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
77
ನಿರ್ಮಾಪಕರ ಜೊತೆ ಟೀಂ
ಆದರೆ, ಅಸಲಿಗೆ ದೃಷ್ಟಿಬೊಟ್ಟು ಸೀರಿಯಲ್ನ ನಿರ್ಮಾಪಕರಲ್ಲಿ ಅವರೂ ಒಬ್ಬರು. ಇನ್ನೊಬ್ಬರು ಅನುಷಾ ಶಿವಪ್ರಸಾದ್. ಇವರಿಬ್ಬರೂ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಅಲ್ಲಿಗೆ ದೃಷ್ಟಿಬೊಟ್ಟು ಸೀರಿಯಲ್ ಅಂತ್ಯ ಕಾಣುವುದು ಖಚಿತವಾಗಿದೆ.