'ರಾಮಾಯಣ' ಶೂರ್ಪನಖಿ ಬಗ್ಗೆ ನೀವು ಕೇಳಿರದ ಕಥೆ: ರಕುಲ್ ಆಯ್ಕೆ ಹಿಂದಿನ ಇಂಟ್ರೆಸ್ಟಿಂಗ್ ಕಾರಣಗಳಿವು!

Published : Aug 03, 2026, 06:07 PM IST

ರಾಮಾಯಣ ಸಿನಿಮಾದಲ್ಲಿ ಶೂರ್ಪನಖಿ ಪಾತ್ರಕ್ಕೆ ರಕುಲ್ ಪ್ರೀತ್ ಸಿಂಗ್ ಆಯ್ಕೆ ಆಗಿರೋದು ಯಾಕೆ ಸರಿ ಅನ್ನಿಸ್ತಿದೆ? ಶೂರ್ಪನಖಿ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ. ಮುಂದೆ ಓದಿ.

PREV
15
ಅವಮಾನ, ತಿರಸ್ಕಾರದ ಕಥೆ

ನೂರಾರು ವರ್ಷಗಳಿಂದ ನಾವು ಕೇಳಿಕೊಂಡು ಬಂದಿರುವ ರಾಮಾಯಣದ ಕಥೆಗಳಲ್ಲಿ ಶೂರ್ಪನಖಿಯನ್ನೇ ವಿಲನ್ ರೀತಿ ಬಿಂಬಿಸಲಾಗಿದೆ. ರಾಮಾಯಣದ ಮಹಾಯುದ್ಧಕ್ಕೆ ಆಕೆಯ ದುರಾಸೆಯೇ ಕಾರಣ ಅಂತ ಹೇಳಲಾಗಿದೆ. ಆದರೆ, ಪುರಾತನ ಗ್ರಂಥಗಳು ಮತ್ತು ಹಲವು ವಿದ್ವಾಂಸರ ವಿಶ್ಲೇಷಣೆಗಳು ಬೇರೆಯದ್ದೇ ಕಥೆ ಹೇಳುತ್ತವೆ. ಶೂರ್ಪನಖಿ ಪಾತ್ರಕ್ಕೆ ಹಲವು ಆಯಾಮಗಳಿವೆ. ಆಕೆಯ ಭಾವನೆಗಳು, ಅವಳಿಗಾದ ಅವಮಾನ, ತಿರಸ್ಕಾರದ ಕಥೆಯನ್ನು ಯಾರೂ ಹೆಚ್ಚಾಗಿ ಹೇಳಿಲ್ಲ.

25
ರಾಮಾಯಣದ ಶೂರ್ಪನಖಿ!

ಶೂರ್ಪನಖಿಯ ಕಥೆ ಕೇವಲ ಅವಳ ರೂಪಕ್ಕೆ ಸೀಮಿತವಾಗಿಲ್ಲ. ಅದರಲ್ಲಿ ಭಾವನೆ, ತಿರಸ್ಕಾರ, ಅವಮಾನ ಎಲ್ಲವೂ ಸೇರಿದೆ. ಇದೇ ಘಟನೆಗಳು ರಾಮಾಯಣದ ಕಥೆಗೆ ದೊಡ್ಡ ತಿರುವು ನೀಡಿದವು. ಹಲವು ಸಾಂಪ್ರದಾಯಿಕ ವ್ಯಾಖ್ಯಾನಗಳು ಆಕೆಯನ್ನು ಅಸಾಧಾರಣ ಸೌಂದರ್ಯವಂತೆ ಅಂತ ವರ್ಣಿಸಿವೆ. ನಂತರದ ಹಲವು ಕಥೆಗಳಲ್ಲಿ ಆಕೆಯನ್ನು ಭಾರತೀಯ ಪುರಾಣದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬಳು ಎಂದು ಪರಿಗಣಿಸಲಾಗಿತ್ತು. ಆದರೆ, ರಾಮಾಯಣದ ದೊಡ್ಡ ಸಂಘರ್ಷದಲ್ಲಿ ಆಕೆಯ ಕಥೆ ಹಿಂದೆ ಸರಿಯಿತು. ಈಗಿನ ಕಾಲದ ವಿದ್ವಾಂಸರು ಮತ್ತು ಓದುಗರು ಶೂರ್ಪನಖಿಯನ್ನು ಕೇವಲ ವಿಲನ್ ಆಗಿ ನೋಡದೆ, ಪುರಾಣದ ಅತ್ಯಂತ ಸಂಕೀರ್ಣ ಮಹಿಳಾ ಪಾತ್ರಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ.

35
ಯಾರು ಈ ಶೂರ್ಪನಖಿ?

ಶೂರ್ಪನಖಿ ಒಬ್ಬ ರಾಕ್ಷಸಿ. ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಬರುವ ಲಂಕಾಧಿಪತಿ ರಾವಣನ ತಂಗಿ. 'ಶೂರ್ಪನಖಿ' ಅಂದರೆ 'ಮೊರದಂತಹ ಉಗುರುಗಳುಳ್ಳವಳು' ಅಂತ ಅರ್ಥ. ಆಕೆಯ ತಂದೆ-ತಾಯಿ ಋಷಿ ವಿಶ್ರವ ಮತ್ತು ರಾಕ್ಷಸಿ ಕೈಕಸಿ. ರಾವಣ, ಕುಂಭಕರ್ಣ ಮತ್ತು ವಿಭೀಷಣ ಅವಳ ಸಹೋದರರು.

45
ಪರ್ಫೆಕ್ಟ್ ಆಯ್ಕೆ

ಪ್ರೇಕ್ಷಕರು 'ರಾಮಾಯಣ' ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ, ಟ್ರೇಲರ್‌ನಲ್ಲಿ ಶೂರ್ಪನಖಿಯಾಗಿ ಕಾಣಿಸಿಕೊಂಡಿರುವ ರಕುಲ್ ಪ್ರೀತ್ ಸಿಂಗ್ ಅವರ ಲುಕ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪಾತ್ರಕ್ಕೆ ಅವರೇ ಪರ್ಫೆಕ್ಟ್ ಆಯ್ಕೆ ಅಂತ ಹಲವರು ಹೇಳುತ್ತಿದ್ದಾರೆ. ತಮ್ಮ ಸೌಂದರ್ಯ, ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್‌ನಿಂದ ರಕುಲ್ ಗಮನ ಸೆಳೆದಿದ್ದಾರೆ. ಜನಪ್ರಿಯ ಕಥೆಗಳು ಶೂರ್ಪನಖಿಯನ್ನು ಕುರೂಪಿಯಾಗಿ ಬಿಂಬಿಸಿದರೂ, ವಾಲ್ಮೀಕಿ ರಾಮಾಯಣದಂತಹ ಹಲವು ವ್ಯಾಖ್ಯಾನಗಳು ಆಕೆಯನ್ನು ಸುಂದರ ರಾಜಕುಮಾರಿಯಂತೆ ವರ್ಣಿಸಿವೆ. ಈ ಹಳೆಯ ಗ್ರಹಿಕೆಗೆ ರಕುಲ್ ಅವರ ಆಯ್ಕೆ ಸವಾಲೆಸೆದಿದೆ.

55
ಪರ್ಫೆಕ್ಟ್ ಕಾಸ್ಟಿಂಗ್‌ಗಿಂತ ಹೆಚ್ಚು!

ಈ ಹಿನ್ನೆಲೆಯಲ್ಲಿ, ರಕುಲ್ ಪ್ರೀತ್ ಸಿಂಗ್ ಅವರ ಆಯ್ಕೆ ತುಂಬಾನೇ ಸೂಕ್ತವಾಗಿದೆ. ಅವರ ಸೌಂದರ್ಯ, ಭಾವನಾತ್ಮಕವಾಗಿ ನಟಿಸುವ ಸಾಮರ್ಥ್ಯ ಈ ಸಂಕೀರ್ಣ ಪಾತ್ರಕ್ಕೆ ನ್ಯಾಯ ಒದಗಿಸಲಿದೆ. 'ರಾಮಾಯಣ' ಟ್ರೇಲರ್ ರಿಲೀಸ್ ಆದಾಗಿನಿಂದ, ರಕುಲ್ ಅವರ ಸಣ್ಣ ಝಲಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. "ಶೂರ್ಪನಖಿ ಪಾತ್ರ ಮಾಡಲು ಅತೀ ಸುಂದರ ನಟಿಯನ್ನು ಆಯ್ಕೆ ಮಾಡಿದ್ದಾರೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಜನ ಕಮೆಂಟ್ ಮಾಡುತ್ತಿದ್ದಾರೆ. ಟ್ರೇಲರ್ ನೋಡಿದರೆ, ಸಿನಿಮಾದಲ್ಲಿ ರಕುಲ್ ಅವರ ನಟನೆ ಬಹುನಿರೀಕ್ಷಿತ ಪ್ರದರ್ಶನಗಳಲ್ಲಿ ಒಂದಾಗಲಿದೆ ಅನ್ನೋದು ಸ್ಪಷ್ಟ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories