'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟ ಚಂದನ್ ಕುಮಾರ್ 'ಫ್ಲರ್ಟ್' ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕಾಗಿ ಕಿಚ್ಚ ಸುದೀಪ್ 'ನೀ ನನ್ನ ಜೀವ' ಎಂದು ಹಾಡಿದ್ದು, ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯ ನಡುವೆಯೂ ಚಿತ್ರವನ್ನು ಮತ್ತಷ್ಟು ಸುಧಾರಿಸಿ ರೀ-ರಿಲೀಸ್ ಮಾಡಲು ಚಂದನ್ ನಿರ್ಧರಿಸಿದ್ದಾರೆ.
'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನಿಂದ ಫೇಮಸ್ ಆಗಿ, ಆನಂತರ 'ಬಿಗ್ ಬಾಸ್' ಮೂಲಕವೂ ಜನಪ್ರಿಯರಾದ ನಟ ಚಂದನ್ ಕುಮಾರ್ ಇದೀಗ ಮೊದಲದ ಬಾರಿಗೆ ನಿರ್ದೇಶಕರಾಗಿ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಫ್ಲರ್ಟ್' ಸಿನಿಮಾದಲ್ಲಿ ಅವರು ನಿರ್ದೇಶಕರಾಗಿದ್ದು, ಕೆಲ ತಿಂಗಳ ಹಿಂದೆ ಚಿತ್ರದ ಟ್ರೈಲರ್ ನಟ ಕಿಚ್ಚ ಸುದೀಪ್ ಅವರು ರಿಲೀಸ್ ಮಾಡಿದ್ದರು.
26
'ನೀ ನನ್ನ ಜೀವ' ಎಂದ ಸುದೀಪ್
ಇದೀಗ ಇದೇ ಸಿನಿಮಾದ 'ನೀ ನನ್ನ ಜೀವ' ಹಾಡಿನ ವಿಡಿಯೋ ಬಿಡುಗಡೆಯಾಗಿದ್ದು, ಈ ಹಾಡಿಗೆ ಸುದೀಪ್ ಅವರೇ ದನಿ ನೀಡಿರುವುದು ವಿಶೇಷ. ಸ್ನೇಹದ ಭಾವನೆಗಳಿಗೆ ಸುದೀಪ್ ಅವರ ಧ್ವನಿ ಅತ್ಯಂತ ಸೂಕ್ತ ಎಂದು ಚಂದನ್ ತಿಳಿಸಿದ್ದು, ಹಾಡಿಗೆ ಅವರದ್ದೇ ಧ್ವನಿ ಬಳಸಿಕೊಂಡಿರುವುದಾಗಿ ಹೇಳಿದ್ದಾರೆ.
36
ಏನಿದು ಸಿನಿಮಾ ಸ್ಟೋರಿ?
ಚಿತ್ರದ ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ತರ್ಲೆ-ತಮಾಷೆಯ ಸಿನಿಮಾ ಅಂದುಕೊಂಡರೆ ನಿಮ್ಮ ಊಹೆ ತಪ್ಪು! ಚಂದನ್ ಕುಮಾರ್ ಅವರ ಪ್ರಕಾರ, "ಫ್ಲರ್ಟ್ ಎಂದರೆ ಕೇವಲ ಹುಡುಗಿಯರನ್ನು ಚುಡಾಯಿಸುವುದಲ್ಲ, ಅದರ ಹಿಂದೆ ಗಾಢವಾದ ಪ್ರೀತಿಯೂ ಅಡಗಿರುತ್ತದೆ. ಪ್ರತಿ 'ಡವ್' ಹಿಂದೆ ಒಂದು ಸತ್ಯವಾದ ಲವ್ ಇರುತ್ತದೆ." ಇದೊಂದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆದರೂ, ಇದರಲ್ಲಿ ಸೈಕೋ ಕ್ಯಾರೆಕ್ಟರ್‌ಗಳ ಟ್ವಿಸ್ಟ್ ಹಾಗೂ ಎಮೋಷನಲ್ ಜರ್ನಿ ಕೂಡ ಇದೆ ಎನ್ನುತ್ತಾರೆ ಚಂದನ್
ಅಂದಹಾಗೆ ಈ ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿತ್ತು, ಮತ್ತು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಹಾಗೂ ವಿಮರ್ಶಕರಿಂದ ಉತ್ತಮ ರೇಟಿಂಗ್ ಪಡೆದುಕೊಂಡಿತ್ತು. ಆದರೆ ಚಂದನ್ ಕುಮಾರ್ ಅವರು ಈ ಸಂದರ್ಭದಲ್ಲಿಯೇ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದು, ಇದು ಕೇವಲ ಒಂದು ಚಿತ್ರಮಂದಿರಕ್ಕೆ ಸೀಮಿತವಾಗಬಾರದು ಎಂಬ ದೊಡ್ಡ ಉದ್ದೇಶದಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಓಡುತ್ತಿದ್ದರೂ, ಅದನ್ನು ಹಿಂಪಡೆದರು. ಪ್ರೇಕ್ಷಕರಿಗೆ ಮತ್ತಷ್ಟು 'ಶಾರ್ಪ್' ಮತ್ತು 'ಎಂಟರ್ಟೈನಿಂಗ್' ಅನುಭವ ನೀಡಲು ಚಿತ್ರವನ್ನು ಟ್ರಿಮ್ ಮಾಡಿ, ಹೊಸ ಕಳೆ ನೀಡಿ ಈಗ ರೀ-ರಿಲೀಸ್‌ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
56
ಸುದೀಪ್ ಸಾಥ್
ಇದಕ್ಕೆ ಸುದೀಪ್ ಸಾಥ್ ನೀಡಿದ್ದಾರೆ. ಚಂದನ್ ಅವರನ್ನು 'ನಮ್ಮನೆ ಹುಡುಗ' ಎಂದೇ ಪ್ರೀತಿಸುವ ಸುದೀಪ್, ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಲ್ಲದೆ, ಫ್ರೆಂಡ್‌ಶಿಪ್ ಕುರಿತಾದ ‘ನೀ ನನ್ನ ಜೀವ...’ ಎಂಬ ಅದ್ಭುತ ಹಾಡನ್ನು ಹಾಡಿದ್ದಾರೆ.
66
ಸೋಷಿಯಲ್ ಮೀಡಿಯಾದಲ್ಲಿ ಹವಾ
ಈ ಹಾಡು ಈಗಾಗಲೆ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಲಿಸ್ಟ್ ಸೇರಿದೆ. ಕಿಚ್ಚನ ಕಂಠಸಿರಿ ಮತ್ತು ಚಂದನ್ ಅವರ ಮೇಕಿಂಗ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಜೊತೆಗೆ, ಈ ಚಿತ್ರದ ಹಾಡುಗಳನ್ನು ಕೇಳಿದ ಲಹರಿ ವೇಲು ಅವರು ತುಂಬಾ ಇಷ್ಟಪಟ್ಟು ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.