ತಮಿಳು ನಟ ಜೈ ಅವರು ದೇವಾಲಯದಲ್ಲಿ ತಮಗಾದ ಅವಮಾನದಿಂದ ಬೇಸತ್ತು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಮಸೀದಿಯಲ್ಲಿ ತಮಗೆ ಸಿಕ್ಕ ಸಮಾನತೆ ಮತ್ತು ಶಾಂತಿಯ ಅನುಭವವನ್ನು ಹಂಚಿಕೊಂಡ ಅವರು, 2019ರಿಂದ ಇಸ್ಲಾಂ ಪಾಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ತಾವು ದೇವಾಲಯದಲ್ಲಿ ಅವಮಾನಕ್ಕೊಳಗಾದ ನಂತ್ರ ಇಸ್ಲಾಂಗೆ ಮತಾಂತರಗೊಂಡಿರೋದಾಗಿ ತಮಿಳು ನಟ ಜೈ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದೇ ಸಂದರ್ಶನದಲ್ಲಿ 2019ರಿಂದ ಇಸ್ಲಾಂ ಪಾಲನೆ ಮಾಡುತ್ತಿರೋದಾಗಿ ಹೇಳಿಕೊಂಡಿರುವ ನಟ, ಹೆಸರು ಬದಲಿಸಿಕೊಂಡಿಲ್ಲ. ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ನಟ ಜೈ ಮಾತನಾಡಿದ್ದಾರೆ.
25
ಪದೇ ಪದೇ ಅವಮಾನ
ನಾನು ಮಾಲೆ ಧರಿಸಿ ಶಬರಿಮಲೆಗೂ ಹೋಗಿ ಬಂದಿದ್ದೇನೆ. ನಂತರ ಯೇಸು ಜಪಮಾಲೆ ಹಾಕಿಕೊಂಡು ಒಂದು ವರ್ಷ ಉಪವಾಸ ವ್ರತ ಆಚರಣೆ ಮಾಡಿದ್ದೇನೆ. ಆದ್ರೆ ದೇವಸ್ಥಾನದಲ್ಲಿ ನಾನು ಪದೇ ಪದೇ ಅವಮಾನ ಅನುಭವಿಸಿದೆ. ಈ ರೀತಿಯ ನನಗೆ ಅತಿಯಾದ ನೋವುಂಟು ಮಾಡಿದವು. ಹೀಗೆ ಒಂದು ದಿನ ಮಸೀದಿಗೆ ಹೋದಾಗ ಏನಾಯ್ತು ಎಂಬುದನ್ನು ಸಹ ಜೈ ಹೇಳಿದ್ದಾರೆ.
35
ಯಾರೂ ನನ್ನೊಂದಿಗೆ ಮಾತನಾಡಲಿಲ್ಲ
ಮಸೀದಿಯೊಳಗೆ ಹೋದಾಗ ಎಲ್ಲರೂ ಸಾಲಿನಲ್ಲಿ ನಮಾಜ್ ಮಾಡುತ್ತಿದ್ದರು. ಅಲ್ಲಿದ್ದ ಎಲ್ಲರಿಗೂ ನಾನೋರ್ವ ನಟ ಎಂಬ ವಿಷಯ ಗೊತ್ತಿತ್ತು. ಆದ್ರೆ ನಮಾಜ್ ವೇಳೆ ಯಾರೂ ಸಹ ನನ್ನೊಂದಿಗೆ ಮಾತನಾಡಲಿಲ್ಲ. ನಂತರ ಮಸೀದಿಯಿಂದ ಹೊರಗೆ ಬರುವಾಗ ಕೆಲವು ಜನರು ನನ್ನೊಂದಿಗೆ ಸೌಜನ್ಯದಿಂದ ಮಾತನಾಡಿದ್ರೆ ಹೊರತು ಫೋಟೋ ಕೇಳಲಿಲ್ಲ. ಆಗ ನನಗೆ ಮಸೀದಿಯಲ್ಲಿ ಎಲ್ಲರೂ ಸಮಾನರು ಎಂದು ಅನ್ನಿಸಿತ್ತು.
ಒಮ್ಮೆ ಮಸೀದಿಯೊಳಗೆ ಹೋದರೆ, ಅಲ್ಲಿ ಅಲ್ಲಾಹನು ಮಾತ್ರ ಸರ್ವೋಚ್ಚ. ವ್ಯಕ್ತಿ ಎಷ್ಟೇ ಪ್ರಮುಖನಾಗಿದ್ದರೂ, ಅವರನ್ನು ಸಮಾನವಾಗಿ ನಡೆಸಿಕೊಳ್ಳಲಾಗುತ್ತದೆ. ಮಸೀದಿಯಲ್ಲಿ ಪ್ರಾರ್ಥನೆ ಮಾಡುವಾಗ, ಅಲ್ಲಿ ತಳ್ಳಾಟ ನೂಕಾಟವೂ ಇರಲ್ಲ. ಯಾರನ್ನೂ ಸಹ ಮಸೀದಿಯಿಂದ ಹೊರಗೆ ಹೋಗುವಂತೆ ಹೇಳಲ್ಲ. ನೀವು ಇಷ್ಟಪಡುವಷ್ಟು ಹೊತ್ತು ಕುಳಿತು ಮಸೀದಿಯಲ್ಲಿ ಪ್ರಾರ್ಥಿಸಬಹುದು ಎಂದು ನಟ ಜೈ ಹೇಳಿದ್ದಾರೆ.
55
ಇಸ್ಲಾಂಗೆ ಮತಾಂತರ
ನಾನು ಇಸ್ಲಾಂಗೆ ಮತಾಂತರಗೊಂಡಾಗಿನಿಂದ ನನ್ನ ವ್ಯಕ್ತಿತ್ವದಲ್ಲಿ ಗಮನಾರ್ಹವಾಗಿ ಬದಲಾವಣೆಯಾಗಿದೆ. ನಾನು 2019 ರಲ್ಲಿ ಮತಾಂತರಗೊಂಡಿದ್ದೇನೆ. ನನಗೆ ಇಸ್ಲಾಂನಲ್ಲಿ ನಂಬಿಕೆ ಇದೆ. ಯಾವುದೇ ದೇವರನ್ನು ಪೂಜಿಸದ ಹುಡುಗ ಈಗ ಧಾರ್ಮಿಕನಾಗಿರುವುದರಿಂದ ಮನೆಯಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ. ಮತಾಂತರಗೊಂಡ ನಂತರ ಹೆಸರು ಬದಲಿಸಿಕೊಂಡಿಲ್ಲ. ಹೆಸರನ್ನು 'ಅಜೀಜ್ ಜೈ' ಎಂದು ಬದಲಾಯಿಸುವ ಬಗ್ಗೆ ಯೋಚಿಸುತ್ತಿರೋದಾಗಿ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.