ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆಗಿನ ಮದುವೆ ವಿಚಾರವಾಗಿ ಸಖತ್ ಸದ್ದು ಮಾಡಿದ್ದರು.
ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆಗಿನ ಮದುವೆ ವಿಚಾರವಾಗಿ ಸಖತ್ ಸದ್ದು ಮಾಡಿದ್ದರು. ಇದೀಗ ತಮ್ಮ ಕೈ ಮೇಲಿರುವ ಒಂದು ಸೀಕ್ರೆಟ್ ಟ್ಯಾಟೂ ಮೂಲಕ ಮತ್ತೆ ವೈರಲ್ ಆಗಿದ್ದಾರೆ. ಹಾಗಾದರೆ ಆ ಟ್ಯಾಟೂ ಹಿಂದಿನ ರಹಸ್ಯವೇನು? ರಶ್ಮಿಕಾ ಮಂದಣ್ಣ ಅವರ ಬಲಗೈ ಮಣಿಕಟ್ಟಿನ ಮೇಲಿರುವ 'ಇರ್ರಿಪ್ಲೇಸಬಲ್' (Irreplaceable) ಎಂಬ ಟ್ಯಾಟೂ ದೊಡ್ಡ ಚರ್ಚೆಗೆ ಕಾರಣವಾಗಿದೆ.
24
ವದಂತಿಗಳಿಗೆ ತೆರೆ
ಈ ಟ್ಯಾಟೂ ಬಗ್ಗೆ ಹಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್‌ಗಳು ಹರಿದಾಡುತ್ತಿವೆ. ಈ ಟ್ಯಾಟೂವನ್ನು ಅವರು ತಮ್ಮ ಪತಿ, ನಟ ವಿಜಯ್ ದೇವರಕೊಂಡ ಅವರಿಗಾಗಿಯೇ ವಿಶೇಷವಾಗಿ ಹಾಕಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಆದರೆ, ಈ ಟ್ಯಾಟೂ ಹಿಂದಿನ ಅಸಲಿ ಕಥೆಯೇ ಬೇರೆ ಇದೆ. ಈ ಬಗ್ಗೆ ರಶ್ಮಿಕಾ ಇತ್ತೀಚೆಗೆ ಮಾತನಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಶ್ಮಿಕಾ, ಈ ಟ್ಯಾಟೂ ಹಿಂದಿನ ಸತ್ಯವನ್ನು ಬಹಿರಂಗಪಡಿಸಿ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
34
ಅಸಲಿ ಕಥೆ ಬಿಚ್ಚಿಟ್ಟ ನ್ಯಾಷನಲ್ ಕ್ರಶ್
"ನನಗೆ ಮೊದಲಿಗೆ ಟ್ಯಾಟೂ ಹಾಕಿಸಿಕೊಳ್ಳುವ ಆಲೋಚನೆಯೇ ಇರಲಿಲ್ಲ. ಕಾಲೇಜು ದಿನಗಳಲ್ಲಿ ನಡೆದ ಒಂದು ಘಟನೆ ನನ್ನ ಆಲೋಚನೆಯನ್ನೇ ಬದಲಾಯಿಸಿತು. ಒಂದು ದಿನ ಕಾಲೇಜಿನಲ್ಲಿ ಹುಡುಗನೊಬ್ಬ, 'ಹುಡುಗಿಯರಿಗೆ ನೋವು ತಡೆಯಲು ಆಗಲ್ಲ, ಅವರಿಗೆ ಸೂಜಿ, ಇಂಜೆಕ್ಷನ್ ಅಂದರೆ ತುಂಬಾ ಭಯ' ಎಂದು ಗೇಲಿ ಮಾಡಿದ. ಆ ಮಾತುಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದವು. ಹೆಣ್ಣುಮಕ್ಕಳು ಎಂತಹ ನೋವನ್ನು ಬೇಕಾದರೂ ಸಹಿಸಬಲ್ಲರು ಎಂದು ಸಾಬೀತುಪಡಿಸಲು ನಾನು ಟ್ಯಾಟೂ ಹಾಕಿಸಿಕೊಳ್ಳಲು ನಿರ್ಧರಿಸಿದೆ" ಎಂದು ರಶ್ಮಿಕಾ ಹೇಳಿದ್ದಾರೆ.
ಟ್ಯಾಟೂ ಹಾಕಿಸಿಕೊಳ್ಳಲು ನಿರ್ಧರಿಸಿದ ಮೇಲೆ, ಯಾವ ಪದವನ್ನು ಬರೆಸಿಕೊಳ್ಳಬೇಕು ಎಂದು ತುಂಬಾ ಯೋಚಿಸಿದೆ. "ನಾನು ನನ್ನ ಜೀವನದಲ್ಲಿ ಯಾವಾಗಲೂ ಸಹಜವಾಗಿ, ಪ್ರಾಮಾಣಿಕವಾಗಿರಲು ಇಷ್ಟಪಡುತ್ತೇನೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ವಿಶೇಷ. ಯಾರ ಸ್ಥಾನವನ್ನೂ ಇನ್ನೊಬ್ಬರು ತುಂಬಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗಿದೆ. ಈ ಆಲೋಚನೆಯನ್ನು ಪ್ರತಿದಿನ ನನಗೆ ನಾನೇ ನೆನಪಿಸಿಕೊಳ್ಳಲು 'ಇರ್ರಿಪ್ಲೇಸಬಲ್' ಎಂಬ ಪದವನ್ನು ಟ್ಯಾಟೂ ಆಗಿ ಆಯ್ಕೆ ಮಾಡಿಕೊಂಡೆ" ಎಂದು ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.