ಟಿವಿ ಇಂಡಸ್ಟ್ರಿಯಿಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬೆಳೆದು ನಿಂತಿರುವ ಉರ್ಫಿ ಜಾವೇದ್ ಅವರ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಇತ್ತೀಚೆಗೆ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ ಉರ್ಫಿ ಜಾವೇದ್.
ಟಿವಿ ಸೀರಿಯಲ್‌ನ ಸೈಡ್ ಆಕ್ಟರ್‌ನಿಂದ ಇಂಟರ್‌ನೆಟ್ ಸೆನ್ಸೇಷನ್ ಆಗಿ ಉರ್ಫಿ ಜಾವೇದ್ ಬೆಳೆದಿದ್ದು ಹೇಗೆ? ತಂದೆಯ ದೌರ್ಜನ್ಯದಿಂದ ಮನೆ ಬಿಟ್ಟಿದ್ದು ಯಾಕೆ? 40 ಸಾವಿರ ಸಂಬಳದಿಂದ ಲಕ್ಷ ಲಕ್ಷ ಸಂಪಾದನೆವರೆಗಿನ ಅವರ ಜರ್ನಿ ಹೇಗಿತ್ತು? Bigg Boss OTT ಅವರ ಬದುಕನ್ನೇ ಬದಲಿಸಿತಾ? ಉರ್ಫಿ ಅವರ ಹೋರಾಟ, ಫ್ಯಾಷನ್ ಹಾಗೂ ಯಶಸ್ಸಿನ ಕಥೆಯನ್ನು ಅವರೇ ಬಿಚ್ಚಿಟ್ಟಿದ್ದಾರೆ.
27
ಮನೆ ಬಿಟ್ಟು ಓಡಿ ಹೋಗಿದ್ದರಂತೆ
ಟಿವಿ ಇಂಡಸ್ಟ್ರಿಯಿಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬೆಳೆದು ನಿಂತಿರುವ ಉರ್ಫಿ ಜಾವೇದ್ ಅವರ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಇತ್ತೀಚೆಗೆ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಉರ್ಫಿ, ತಮ್ಮ ವೈಯಕ್ತಿಕ ಜೀವನ, ಹೋರಾಟ, ವೃತ್ತಿ ಹಾಗೂ ವೈರಲ್ ಆದ ಬಗ್ಗೆ ಹಲವು ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಂದೆಯ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಓಡಿ ಹೋಗಿದ್ದರಂತೆ. ದೆಹಲಿಯಲ್ಲಿ ಕಾಲ್ ಸೆಂಟರ್ ಕೆಲಸ, ಟ್ಯೂಷನ್ ಹೇಳಿಕೊಟ್ಟು ಬದುಕು ಸಾಗಿಸಿದ ಉರ್ಫಿ, ಮುಂಬೈಗೆ ಬಂದು ಟಿವಿ ಸೀರಿಯಲ್‌ಗಳಲ್ಲಿ ನಟಿಸಲು ಶುರುಮಾಡಿದರು. ಆದರೆ, ಅಲ್ಲಿ ಅವರಿಗೆ ಬೇಕಾದ ಮನ್ನಣೆ ಸಿಗಲಿಲ್ಲ. ನಂತರ Bigg Boss OTT ಮತ್ತು ಸೋಷಿಯಲ್ ಮೀಡಿಯಾ ಅವರ ಬದುಕನ್ನೇ ಬದಲಾಯಿಸಿತು.
37
ಮನೆ ಬಿಟ್ಟು ಮುಂಬೈಗೆ ಬಂದ ಕಥೆ
ತಮ್ಮ ಜೀವನದ ಆರಂಭದ ದಿನಗಳು ತುಂಬಾ ಕಷ್ಟಕರವಾಗಿತ್ತು ಎಂದು ಉರ್ಫಿ ಜಾವೇದ್ ಹೇಳಿಕೊಂಡಿದ್ದಾರೆ. ತಂದೆಯ ಕೆಟ್ಟ ನಡವಳಿಕೆಯಿಂದ ಬೇಸತ್ತು ಮನೆ ಬಿಟ್ಟು ದೆಹಲಿಗೆ ಬಂದಿದ್ದರಂತೆ. ಅಲ್ಲಿ ಒಂದು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡು, ಮಕ್ಕಳಿಗೆ ಟ್ಯೂಷನ್ ಹೇಳಿ ತಮ್ಮ ಖರ್ಚು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಕಷ್ಟಗಳ ಮಧ್ಯೆಯೂ, ಒಂದಲ್ಲ ಒಂದು ದಿನ ಮುಂಬೈನಲ್ಲಿ ದೊಡ್ಡ ಹೆಸರು ಮಾಡುತ್ತೇನೆ ಎಂಬ ನಂಬಿಕೆ ಅವರಿಗಿತ್ತು.
ಬಾಲಿವುಡ್‌ನಲ್ಲಿ ಅವಕಾಶ ಸಿಗಲಿಲ್ಲ, ಟಿವಿ ಕಡೆ ಮುಖ ಮಾಡಿದರು
ಆರಂಭದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಆಡಿಷನ್ ಕೊಟ್ಟಿದ್ದೆ, ಆದರೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಕಾರಣ ಅವಕಾಶ ಸಿಗುವುದು ಕಷ್ಟವಾಗಿತ್ತು ಎಂದು ಉರ್ಫಿ ಬಹಿರಂಗಪಡಿಸಿದ್ದಾರೆ. ನಂತರ ಅವರು ಟಿವಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಶುರುಮಾಡಿದರು. ಆದರೆ, ಅವರಿಗೆ ಸಿಕ್ಕಿದ್ದೆಲ್ಲಾ ಹೆಚ್ಚಾಗಿ ಸೈಡ್ ರೋಲ್‌ಗಳು. "ನೀವು ಸ್ಟಾರ್ ಅಥವಾ ಲೀಡ್ ಆಕ್ಟರ್ ಅಲ್ಲ ಅಂದ್ರೆ, ಯಾರೂ ನಿಮ್ಮನ್ನು ಗೌರವಿಸುವುದಿಲ್ಲ. ಸೈಡ್ ಕ್ಯಾರೆಕ್ಟರ್‌ಗಳಿಗೆ ಒಳ್ಳೆ ಟ್ರೀಟ್‌ಮೆಂಟ್ ಸಿಗಲ್ಲ. ನನಗೆ ಇದರಿಂದ ಖುಷಿ ಇರಲಿಲ್ಲ, ನಾನಿನ್ನೂ ದೊಡ್ಡ ಸಾಧನೆ ಮಾಡೋಕೆ ಹುಟ್ಟಿದ್ದೀನಿ ಅಂತ ಅನಿಸುತ್ತಿತ್ತು," ಎಂದು ಉರ್ಫಿ ಹೇಳಿದ್ದಾರೆ.
57
40 ಸಾವಿರ ಸಂಪಾದನೆಯಿಂದಲೂ ಖುಷಿಯಾಗಿರಲಿಲ್ಲ
ಟಿವಿಯಲ್ಲಿ ನಟಿಸುತ್ತಿದ್ದಾಗ ಉರ್ಫಿ ತಿಂಗಳಿಗೆ ಸುಮಾರು 40 ಸಾವಿರ ರೂಪಾಯಿ ಸಂಪಾದಿಸುತ್ತಿದ್ದರು. ಆದರೆ ಅವರಿಗೆ ಅದರಿಂದ ಸಮಾಧಾನವಿರಲಿಲ್ಲ. "ನನಗೆ ಯಾವಾಗಲೂ ಲೈಮ್‌ಲೈಟ್‌ನಲ್ಲಿ ಇರಬೇಕೆಂಬ ಆಸೆ ಇತ್ತು. ಆದರೆ ಮನೆನೂ ನಡೆಸಬೇಕಿತ್ತು, ಹಾಗಾಗಿ ಆ 40 ಸಾವಿರ ರೂಪಾಯಿ ಅವಶ್ಯಕವಾಗಿತ್ತು. ಆದ್ರೆ ನಾನು ಖುಷಿಯಾಗಿರಲಿಲ್ಲ," ಎಂದು ಅವರು ಹೇಳಿಕೊಂಡಿದ್ದಾರೆ.
67
ಸೋಷಿಯಲ್ ಮೀಡಿಯಾ ಬದಲಾಯಿಸಿತು ಉರ್ಫಿ ಬದುಕು
ಫ್ಯಾಷನ್‌ನಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತಾದರೂ, ಅದನ್ನೇ ಕೆರಿಯರ್ ಮಾಡಿಕೊಳ್ಳುವ ಯೋಚನೆ ಇರಲಿಲ್ಲವಂತೆ. ನಿಧಾನವಾಗಿ ಸೋಷಿಯಲ್ ಮೀಡಿಯಾದಲ್ಲಿ DIY ಫ್ಯಾಷನ್ ಕಂಟೆಂಟ್ ಮಾಡಲು ಶುರುಮಾಡಿದರು. Bigg Boss OTTಗೆ ಬಂದ ನಂತರ ಅವರ ಒಂದು ಡ್ರೆಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನಂತರ, ಏರ್‌ಪೋರ್ಟ್‌ನಲ್ಲಿ ಸ್ಪೋರ್ಟ್ಸ್ ಬ್ರಾ ಮತ್ತು ಜಾಕೆಟ್ ಧರಿಸಿದ್ದ ವಿಡಿಯೋ ವೈರಲ್ ಆಗಿ, ಅವರನ್ನು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಮಾಡಿತು. ಆದರೆ, ವೈರಲ್ ಆಗಬೇಕೆಂದು ತಾನು ಉದ್ದೇಶಪೂರ್ವಕವಾಗಿ ಏನನ್ನೂ ಮಾಡಿಲ್ಲ ಎಂದು ಉರ್ಫಿ ಸ್ಪಷ್ಟಪಡಿಸಿದ್ದಾರೆ. ಅವರ ವಿಶಿಷ್ಟ ಫ್ಯಾಷನ್ ಮತ್ತು ವಿಭಿನ್ನ ಶೈಲಿಯನ್ನು ಜನರೇ ಗುರುತಿಸಲು ಆರಂಭಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದ ನಂತರ, ಬ್ರ್ಯಾಂಡ್ ಡೀಲ್‌ಗಳ ಮೂಲಕ ಅವರ ಆದಾಯ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿಗೆ ಏರಿತು.
77
ಟಿವಿಯಿಂದ ಇಂಟರ್‌ನೆಟ್ ಸ್ಟಾರ್‌ವರೆಗೆ
ಉರ್ಫಿ ಜಾವೇದ್ 2016ರಲ್ಲಿ 'ಬಡೇ ಭೈಯಾ ಕಿ' ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ 'ಚಂದ್ರ ನಂದಿನಿ', 'ಮೇರಿ ದುರ್ಗಾ', 'ಬೇಪನಾ', 'ಜಿಜಿ ಮಾ' ಮತ್ತು 'ಡಾಯನ್' ನಂತಹ ಶೋಗಳಲ್ಲಿ ಕಾಣಿಸಿಕೊಂಡರು. ಆದರೆ, ಅವರಿಗೆ ನಿಜವಾದ ಹೆಸರು ತಂದುಕೊಟ್ಟಿದ್ದು 'Bigg Boss OTT'. ಇತ್ತೀಚೆಗೆ ಅವರು 'ಸ್ಪ್ಲಿಟ್ಸ್‌ವಿಲ್ಲಾ X6' ಶೋವನ್ನು ಹೋಸ್ಟ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.