ಒಬ್ಬ ಕಾಸ್ಟಿಂಗ್ ಡೈರೆಕ್ಟರ್ 'ನಿನ್ನ ನಗು ಚೆನ್ನಾಗಿಲ್ಲ' ಅಂದಿದ್ದಕ್ಕೆ ನಟಿ ನೇಹಾ ಧೂಪಿಯಾ ಸುಮಾರು 10 ವರ್ಷ ನಗೋದನ್ನೇ ಬಿಟ್ಟಿದ್ರಂತೆ. ಮಿಸ್ ಇಂಡಿಯಾ ಕಿರೀಟ ಗೆದ್ದಾಗಲೂ ಫೋಟೋಗಳಲ್ಲಿ ನಗಲೇ ಇಲ್ಲ ಅಂತ ತಮ್ಮ ನೋವಿನ ದಿನಗಳನ್ನ ನೆನಪಿಸಿಕೊಂಡಿದ್ದಾರೆ.
ಬಾಲಿವುಡ್ ನಟಿ ನೇಹಾ ಧೂಪಿಯಾ ಅಂದ್ರೆ ಎಲ್ಲರಿಗೂ ಗೊತ್ತು. 2002ರಲ್ಲಿ 'ಮಿಸ್ ಇಂಡಿಯಾ' ಪಟ್ಟ ಗೆದ್ದು, ಅದೇ ವರ್ಷ 'ಮಿಸ್ ಯೂನಿವರ್ಸ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ತೆಲುಗು ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ನೇಹಾ, ನಂತರ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದರು.
24
ನಿನ್ನ ನಗು ಅಸಹ್ಯವಾಗಿದೆ
ಆದರೆ, ಇತ್ತೀಚೆಗೆ ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಬಾಡಿ ಶೇಮಿಂಗ್ ಬಗ್ಗೆ ನೇಹಾ ಮನಬಿಚ್ಚಿ ಮಾತನಾಡಿದ್ದಾರೆ. ಈ ಘಟನೆ ತಮ್ಮ ಜೀವನವನ್ನೇ ಹೇಗೆ ಬದಲಾಯಿಸಿತು ಅನ್ನೋದನ್ನು ಹೇಳಿಕೊಂಡಿದ್ದಾರೆ. ಒಂದು ಟಿವಿ ಶೋ ಆಡಿಷನ್‌ಗೆ ಹೋದಾಗ, ಕಾಸ್ಟಿಂಗ್ ಡೈರೆಕ್ಟರ್ ಒಬ್ಬರು 'ನಿನ್ನ ನಗು ಅಸಹ್ಯವಾಗಿದೆ' ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿದ್ರಂತೆ. ಇದ್ರಿಂದಾಗಿ, ಮಿಸ್ ಇಂಡಿಯಾ ಆದಾಗಲೂ ತನಗೆ ನಗಲು ಸಾಧ್ಯವಾಗಲಿಲ್ಲ. ಈ ಒಂದು ಮಾತು ಸುಮಾರು 10 ವರ್ಷಗಳ ಕಾಲ ತನ್ನನ್ನು ಕಾಡುತ್ತಿತ್ತು ಅಂತ ನೇಹಾ 'ಡಬಲ್ ಡೇಟ್' ಅನ್ನೋ ಟಿವಿ ಶೋನಲ್ಲಿ ಹೇಳಿದ್ದಾರೆ.
34
ನೇಹಾ ಧೂಪಿಯಾ ಹೇಳಿದ್ದೇನು?
ಅದು ನನ್ನ ಕೆರಿಯರ್‌ನ ಆರಂಭದ ದಿನಗಳು. ಇಂಡಸ್ಟ್ರಿಗೆ ನಾನು ತುಂಬಾನೇ ಹೊಸಬಳು. ಒಂದು ಟಿವಿ ಶೋ ಆಡಿಷನ್‌ಗೆ ಹೋಗಿದ್ದೆ. ಕಾಸ್ಟಿಂಗ್ ಡೈರೆಕ್ಟರ್ ಜೊತೆ ಕಾರಲ್ಲಿ ಕೂತಿದ್ದೆ. ಅವರು ನನ್ನನ್ನು ನೋಡಿದಾಗ ನಾನು ನಕ್ಕೆ. ಅದಕ್ಕೆ ಅವರು, 'ನೀನು ನಗಬೇಡ, ನಿನ್ನ ನಗು ನೋಡೋಕೆ ಚೆನ್ನಾಗಿಲ್ಲ. ನೀನು ನಗದಿದ್ದಾಗ ನಿನ್ನ ಮುಖದಲ್ಲಿ ಹೆಚ್ಚು ಗಟ್ಟಿತನ ಕಾಣುತ್ತೆ' ಅಂದರು.
ಆಮೇಲೆ ನಾನು ಮಿಸ್ ಇಂಡಿಯಾ ಆದ ಮೇಲೂ ನಗಲೇ ಇಲ್ಲ. ಆ ಸಮಯದ ಫೋಟೋಗಳನ್ನು ನೋಡಿದರೆ ನಿಮಗೆ ಗೊತ್ತಾಗುತ್ತೆ, ನಾನು ನಗುತ್ತಲೇ ಇಲ್ಲ. ಸುಮಾರು 8-10 ವರ್ಷಗಳ ಕಾಲ ಈ ವಿಷಯ ನನ್ನನ್ನು ಕಾಡಿತು. ನನ್ನ ನಗು ಚೆನ್ನಾಗಿಲ್ಲ ಅಂತ ಅವರು ಹೇಳಿದ್ದೇ ಇದಕ್ಕೆಲ್ಲಾ ಕಾರಣ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.