Bhagyalakshmi Serial: ಭಾಗ್ಯ-ಆದಿ ಲವ್​ಸ್ಟೋರಿಗೆ ತಾಂಡವನ ಸಾಥ್​! ಕಥೆ ಅಂದ್ರೆ ಇದು ಎಂದ ಸೀರಿಯಲ್​ ಪ್ರಿಯರು....

Published : Jul 26, 2025, 09:21 PM IST

ಭಾಗ್ಯಲಕ್ಷ್ಮಿಯ ಭಾಗ್ಯ ಮತ್ತು ಆದಿಯ ಲವ್​ ಸ್ಟೋರಿ ಇನ್ನೇನು ಶುರುವಾಗುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಆದಿಗೆ ತಾಂಡವ್​ನ ಸಾಥ್​ ಸಿಕ್ತಿದೆ. ಇದೇನಿದು ಸೀರಿಯಲ್​ ಟ್ವಿಸ್ಟ್​? 

PREV
17
ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?

ಜೀವನದಲ್ಲಿ ಎಂದಿಗೂ ಯಾರ ಮುಂದೆಯೂ ತಲೆತಗ್ಗಿಸಿಲ್ಲ. ಲೈಫ್​ನಲ್ಲಿ ಇದೇ ಮೊದಲ ಬಾರಿಗೆ ಮಂಡಿಯೂರಿ ಕ್ಷಮೆ ಕೋರುತ್ತಿದ್ದೇನೆ ಎನ್ನುತ್ತಲೇ ಭಾಗ್ಯಳ ಮುಂದೆ ಆದಿ ಮಂಡಿಯೂರಿ ಕ್ಷಮೆ ಕೋರಿಯಾಗಿದೆ. ಆಸ್ತಿಗಾಗಿ ಈ ಮದುವೆಯಾಗುತ್ತಿದೆ ಎಂದು ಭಾಗ್ಯಾಳನ್ನು ಚುಚ್ಚಿದ್ದ ಆತನ ಮಾತಿಗೆ ನೊಂದು ಭಾಗ್ಯ ತಂಗಿ ಪೂಜಾ ಮತ್ತು ಕಿಶನ್​ ಮದುವೆ ಆಗದಂತೆ ತಡೆಯೊಡ್ಡಿದ್ದಳು. ತಂಗಿಯ ಮದುವೆಗಾಗಿ ಎಷ್ಟೆಲ್ಲಾ ಕಷ್ಟಪಟ್ಟಿದ್ದ ಭಾಗ್ಯ, ಹಸೆಮಣೆಯಿಂದಲೇ ತಂಗಿಯನ್ನು ಕರೆದುಕೊಂಡು ಬಂದು ಮದುವೆಯನ್ನು ರದ್ದು ಮಾಡಲು ಮುಂದಾಗಿದ್ದಳು.

27
ಭಾಗ್ಯಳ ಕ್ಷಮೆ ಕೋರಿದ್ದ ಆದಿ

ಆದರೆ ಆದಿಗೆ ತನ್ನಿಂದ ತಪ್ಪಾಗಿರುವುದು ತಿಳಿದಿದೆ. ಭಾಗ್ಯ ಎಂಥ ಸ್ವಾಭಿಮಾನಿ ಹೆಣ್ಣು, ಆಕೆ ಹೇಗೆಲ್ಲಾ ಬದುಕಿದ್ದಾಳೆ ಎನ್ನುವ ಸತ್ಯದ ಅರಿವು ಆಗುತ್ತಿದ್ದಂತೆಯೇ ನೊಂದುಕೊಂಡಿದ್ದ. ಭಾಗ್ಯಳಿಗೆ ಇಲ್ಲಸಲ್ಲದ ಮಾತುಗಳನ್ನಾಗಿ ನೋಯಿಸಿದ್ದ ಆತನಿಗೆ ನೋವಾಗಿತ್ತು. ಮಂಡಿಯೂರುತ್ತಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಭಾಗ್ಯಳ ಬಳಿ ಕ್ಷಮೆ ಕೋರಿದ್ದ.

37
ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?

ಆಗಲೇ ಭಾಗ್ಯ ಮತ್ತು ಆದಿ ನಡುವೆ ಲವ್ ಹುಟ್ಟುತ್ತೆ, ಇಬ್ಬರೂ ಮದ್ವೆಯಾಗುತ್ತಾರೆ ಎಂದೇ ನೆಟ್ಟಿಗರು ಹೇಳ್ತಿದ್ದರು. ನಿಜ ಜೀವನದಲ್ಲಿ ಈ ರೀತಿ ಮಧ್ಯವಯಸ್ಸಿನ ಹೆಣ್ಣು ಮದ್ವೆಯಾಗೋದನ್ನು ಒಪ್ಪುತ್ತಾರೋ, ಬಿಡುತ್ತಾರೋ, ಆದರೆ ಸೀರಿಯಲ್​ನಲ್ಲಿ ಮಾತ್ರ ಆದಿ ಮತ್ತು ಭಾಗ್ಯ ಮದ್ವೆಯಾಗಬೇಕು, ತಾಂಡವ್​ಗೆ ತಕ್ಕ ಶಾಸ್ತಿ ಕಲಿಸಬೇಕು ಎಂದು ಹಲವರು ವೀಕ್ಷಕರು ಹೇಳುತ್ತಿದ್ದಾರೆ. ಆದರೆ ಇದೀಗ ಸೀರಿಯಲ್​ಗೆ ಭಾರಿ ಟ್ವಿಸ್ಟ್​ ಸಿಕ್ಕಿದೆ. ಆದಿ ಮತ್ತು ಭಾಗ್ಯಳ ಲವ್​ಸ್ಟೋರಿಗೆ ತಾಂಡವ್​ನಿಂದಲೇ ಗ್ರೀನ್​ ಸಿಗ್ನಲ್​ ಸಿಗುವಂತಿದೆ.

47
ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?

ಇದಕ್ಕೆ ಕಾರಣ, ಒಂದು ಹಂತದಲ್ಲಿ ಆದಿ ಮತ್ತು ತಾಂಡವ್​ ಸ್ನೇಹಿತರಾಗಿದ್ದಾರೆ. ಆದರೆ ಇಬ್ಬರಿಗೂ ಅವರ ಇತಿಹಾಸ ಗೊತ್ತಿಲ್ಲ. ಪೂಜಾಳ ಮದುವೆಯಾಗಿರುವುದು ಆದಿಯ ತಮ್ಮನಿಗೆ ಎನ್ನುವ ಸತ್ಯ ತಾಂಡವ್​ಗೆ ತಿಳಿದಿಲ್ಲ, ಅದೇ ರೀತಿ, ತಾಂಡವ್​ ಭಾಗ್ಯಳ ಪತಿ ಎನ್ನುವುದೂ ಆದಿಗೆ ಗೊತ್ತಿಲ್ಲ. ಆದರೆ ಆದಿ ಮತ್ತು ಆತನ ತಮ್ಮ ಮದುವೆಯಾಗ್ತಿರೋ ಮನೆಯವರಿಗೆ ಗಲಾಟೆ ಆಗಿರುವ ವಿಷಯ ತಾಂಡವ್​ಗೆ ತಿಳಿದಿದೆ.

57
ತಾಂಡವ್​ಗೆ ಭಾಗ್ಯಳ ಕುರಿತು ತಿಳಿಸಿದ ಆದಿ

ಇದೇ ಕಾರಣಕ್ಕೆ ಮದುವೆ ಏನಾಯ್ತು ಎಂದು ಫೋನ್​ನಲ್ಲಿ ತಾಂಡವ್​ ಆದಿಗೆ ಕೇಳಿದ್ದು, ತಾನು ಭಾಗ್ಯಳ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದು, ಆಕೆ ತುಂಬಾ ಒಳ್ಳೆಯವಳು ಎಂದು ಆದಿ ತಾಂಡವ್​ಗೆ ಹೇಳಿದ್ದಾನೆ.

67
ಭಾಗ್ಯ-ಆದಿ ಒಂದಾಗಲಿ ಅಂತಿರೋ ವೀಕ್ಷಕರು

ಆದರೆ, ಭಾಗ್ಯಳ ಹೆಸರು ಹೇಳಲಿಲ್ಲ. ಆ ಲೇಡಿ ಎಂದು ಹೇಳಿರೋ ಕಾರಣ, ತಾಂಡವ್​ಗೆ ಆದಿ ಮಾತನಾಡ್ತಿರೋದು ಭಾಗ್ಯಳ ವಿಷಯ ಎಂದು ತಿಳಿದಿಲ್ಲ. ಒಳ್ಳೆಯದಾಯಿತು, ಕೊನೆಗೂ ತಪ್ಪಿನ ಅರಿವಾಗಿದ್ದು ಒಳ್ಳೆಯದು ಎಂದಿದ್ದಾನೆ. ಅಲ್ಲಿಗೆ ಆದಿ ಮತ್ತು ಭಾಗ್ಯಳ ಲವ್​ ಸ್ಟೋರಿಗೆ ಒಂದು ರೀತಿಯಲ್ಲಿ ಅವನೇ ಗ್ರೀನ್​ ಸಿಗ್ನಲ್​ ಕೊಟ್ಟಂತಾಗಿದೆ.

77
Bhagyalakshmಭಾಗ್ಯ-ಆದಿ ಒಂದಾಗಲಿ ಅಂತಿರೋ ವೀಕ್ಷಕರುi

ಅದೇ ಇನ್ನೊಂದೆಡೆ, ಪೂಜಾಳಿಗೆ ಯಾವುದೇ ಆಪತ್ತು ಬರದಂತೆ ಕಾಯುವ ಜವಾಬ್ದಾರಿ ನನ್ನದು ಎಂದು ಮಾತು ಕೊಟ್ಟಿದ್ದಾನೆ ಆದಿ. ಅಲ್ಲಿಗೆ ಪೂಜಾ ವಿವಾಹ ಸಂಪನ್ನವಾಗುತ್ತದೆ. ಪೂಜಾಳ ಮದುವೆಗೆ ಇದ್ದ ಎಲ್ಲಾ ಅಡ್ಡಿ ಆತಂಕಕಗಳೂ ಸದ್ಯ ನಿವಾರಣೆಯಾಗಿದೆ. ಅಷ್ಟಕ್ಕೂ ಕನ್ನಿಕಾ ಅಣ್ಣನಾಗಿ ಆದಿ ಅರ್ಥಾತ್​ ನಟ ಹರೀಶ್​ ಎಂಟ್ರಿಯಾದಾಗಲೇ ಭಾಗ್ಯಳಿಗೆ ಈತ ಜೋಡಿ ಎಂದಿದ್ದರು ನೆಟ್ಟಿಗರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories