ಬಿಗ್ಬಾಸ್ನ 12ನೇ ಸೀಸನ್ ಇನ್ನೇನು ಶುರುವಾಗಲಿದೆ. ಹಲವರಿಗೆ ಈ ಷೋನಲ್ಲಿ ಭಾಗವಹಿಸಬೇಕು ಎನ್ನುವ ಹಂಬಲ ಇರುತ್ತದೆ. ಆದರೆ ಬಹುತೇಕರಿಗೆ ಇದು ಕನಸಿನ ಮಾತೇ. ಇದೀಗ ತುಕಾಲಿ ಮಾನಸಾ ಅವರು ಏನಂದಿದ್ದಾರೆ ಕೇಳಿ...
Colors Kannadaದ 'ಬಿಗ್ ಬಾಸ್' (Bigg Boss) ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ತುಕಾಲಿ ಸಂತೋಷ್ ಸಾಕಷ್ಟು ಫೇಮಸ್ ಆಗಿದ್ರು, ಜೊತೆಗೆ ಒಂದಿಷ್ಟು ಒಳ್ಳೆಯ ಹೆಸರುಗಳನ್ನೂ ಗಳಿಸಿದ್ದಾರೆ. ಫೈನಲ್ ತನಕ ಹೋಗಿದ್ದರು.
28
ಐದನೇ ವಾರದಲ್ಲಿ ಎಲಿಮಿನೇಟ್
ಆದರೆ ಅವರ ಪತ್ನಿ ಮಾನಸಾ (Tukali Manasa) ಐದೇ ವಾರದಲ್ಲಿ ವಾಪಸ್ ಆಗಿದ್ದರು. ಮಾನಸಾ ಅವರು ಪತಿ ಸಂತೋಷ್ ರೀತಿಯಲ್ಲಿಯೇ ಅಂತಿಮ ಕ್ಷಣದವರೆಗೂ ಇರುತ್ತಾರೆ ಎಂದೇ ಅವರ ಅಭಿಮಾನಿಗಳು ಆರಂಭದಲ್ಲಿ ಅಂದುಕೊಂಡದ್ದು ಇದೆ. ಆದರೆ ಅವರು ಎಲಿಮಿನೇಟ್ ಆಗಿ ಬಂದರು.
38
ಮಾತುಗಳೇ ಮುಳುವಾಯ್ತು
ಅವರ ಮಾತುಗಳೇ ಅವರಿಗೆ ಮುಳುವಾಗಿದ್ದವು. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿಯೂ ಮಾನಸ ಅವರು ಆದಷ್ಟು ಟ್ರೋಲ್ ಇನ್ಯಾರೂ ಆಗಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಬಿಗ್ಬಾಸ್ ಮನೆಯೊಳಕ್ಕೆ ಕಾಲಿಟ್ಟು ಹೊರಕ್ಕೆ ಬಂದರು ಎಂದರೆ ಅವರಿಗೆ ಸಿಗುವಷ್ಟು ರಾಜಮರ್ಯಾದೆಯೇ ಬೇರೆ. ಬಿಗ್ಬಾಸ್ಗೆ ಹೋಗುವ ಮೊದಲೇ ಟಿವಿ ಷೋಗಳಿಂದಾಗಿ ತುಕಾಲಿ ಸಂತೋಷ್ ಫೇಮಸ್ ಆಗಿದ್ದರು, ಈಗ ಅವರ ಪತ್ನಿ ಮಾನಸ ಅವರೂ ಈಗ ಜೊತೆಯಾಗಿದ್ದಾರೆ.
ಇದೀಗ ಅವರಿಗೆ ನ್ಯೂಸ್ಬೀಟ್ ಕನ್ನಡ ಚಾನೆಲ್ನವರು ಬಿಗ್ಬಾಸ್ಗೆ ಹೋಗುವ ಪ್ರೊಸೆಸ್ ಬಗ್ಗೆ ಕೇಳಿದ್ದಾರೆ. ಆದರೆ ಆ ಬಗ್ಗೆ ತಮಗೆ ಸರಿಯಾಗಿ ಏನೂ ಗೊತ್ತಿಲ್ಲ. ಅದೂ ಇದೂ ಇರುತ್ತೆ. ಆಮೇಲೆ 3-4 ಮೀಟಿಂಗ್ ಇರುತ್ತದೆ. ನನಗೆ ಒಂದೇ ಮೀಟಿಂಗ್ ಇತ್ತು. ಅದಕ್ಕೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಸಂತುಗೆ ಕೇಳಿದ್ರೆ ಸರಿಯಾಗಿ ಗೊತ್ತಾಗತ್ತೆ ಎಂದಿದ್ದಾರೆ.
58
ಪೇಮೆಂಟ್ ಕಾರಣ
ಕೆಲವು ಮೀಟಿಂಗ್ ಆದ ಬಳಿಕವೂ ಕ್ಯಾನ್ಸಲ್ ಆಗತ್ತಲ್ಲ, ಯಾಕೆ ಎಂದು ಪ್ರಶ್ನಿಸಿದಾಗ, ಅದಕ್ಕೆ ಏನೇನೋ ಕಾರಣಗಳು ಇರುತ್ತವೆ, ಪೇಮೆಂಟ್ ಕೂಡ ಕಾರಣ ಆಗಬಹುದು ಎಂದಿದ್ದಾರೆ.
68
ಹೇಳಿಮಾಡಿಸಿದ ಜೋಡಿ
ಅಷ್ಟಕ್ಕೂ ಇವರ ಜೋಡಿ ಹೇಳಿಮಾಡಿಸಿದ್ದು ಎಂದೇ ಫೇಮಸ್ಸು. ಈ ಹಿಂದೆ ಸಂದರ್ಶನವೊಂದರಲ್ಲಿ ತುಕಾಲಿ ಸಂತೋಷ್ ಅವರು ಪತ್ನಿ ಬಗ್ಗೆ ಮಾತನಾಡುತ್ತಾ, ಇಎಂಐ ತೀರಿಸಲು ಬಿಗ್ಬಾಸ್ಗೆ ಹೋಗಿದ್ಲು, ಆದರೆ ಐದೇ ವಾರಕ್ಕೆ ವಾಪಸ್ ಬಂದಳು. ಮುಂದೆ ಸಮಸ್ಯೆ ಇದದ್ದೇ ಅಲ್ವಾ ಎಂದರು ಸಂತೋಷ್.
78
ಸಜೆಷನ್ ತೆಗೆದುಕೊಂಡಿರಲಿಲ್ಲ
ಇದೇ ವೇಳೆ ತಾವು ಬಿಗ್ಬಾಸ್ ಒಳಗೆ ಹೋಗುವಾಗ ಸಂತೋಷ್ (Tukali Santosh) ಅವರ ಸಜೆಷನ್ ತೆಗೆದುಕೊಂಡಿರಲಿಲ್ಲ. ಅದೇ ಮಾಡಿದ ತಪ್ಪು ಎನ್ನಿಸತ್ತೆ. ಅವರ ಹಾಗೆ ನಾನು ಆಗುವುದು ಬೇಡ, ನನ್ನ ಸ್ಟೈಲ್ನಲ್ಲಿಯೇ ನಾನು ಇರೋಣ ಅಂದುಕೊಂಡೆ. ಸಂತು ಕೂಡ ಹಾಗೇ ಹೇಳಿದ್ರು. ಆದ್ರೆ ಸಜೆಷನ್ ತಗೋಬಿಕಿತ್ತೇನೋ ಎಂದರು.
88
ಬೇರೆಯವರಿಗೆ ಗೌರವ ಕೊಡಬೇಕು
ಇದೇ ವೇಳೆ, ಬಿಗ್ಬಾಸ್ನಿಂದ ಬೇರೆಯವರಿಗೆ ಗೌರವ ಕೊಡಬೇಕು, ಮಾತಿನ ಮೇಲೆ ನಿಗಾ ಇಡಬೇಕು ಎನ್ನುವುದನ್ನು ಕಲಿತೆ. ಯೋಚನೆ ಮಾಡಿ ಮಾತನಾಡಬೇಕು ಎನ್ನುವುದನ್ನು ಬಿಗ್ಬಾಸ್ ಕಲಿಸಿತು ಎಂದರು.