Bigg Boss ನಮ್ರತಾ ಗೌಡ ಜೊತೆ ಈಗ ಸಂಬಂಧ ಹೇಗಿದೆ? ಎರಡು ವರ್ಷಗಳ ಬಳಿಕ ಮೌನ ಮುರಿದ ಸ್ನೇಹಿತ್​

Published : Sep 01, 2025, 05:51 PM ISTUpdated : Sep 01, 2025, 08:50 PM IST

ಬಿಗ್​ಬಾಸ್​-10 ರಲ್ಲಿ ನಮ್ರತಾ ಗೌಡ ಮತ್ತು ಸ್ನೇಹಿತ್​ ನಡುವೆ ಏನೋ ನಡೆಯುತ್ತಿದೆ ಎಂದೇ ಸುದ್ದಿಯಾಗಿತ್ತು. ಒಂದು ಹಂತದಲ್ಲಿ ಸ್ನೇಹಿತ್​ ಅಪ್ಪ ಕೂಡ ಇವರನ್ನು ಸೊಸೆ ಎಂದುಬಿಟ್ಟಿದ್ದರು. ಈಗ ಹೇಗಿದೆ ಸಂಬಂಧ? 

PREV
17
ಬಿಗ್​ಬಾಸ್​ 10 ಇಂದಿಗೂ ಚಾಲ್ತಿಯಲ್ಲಿ...

ಬಿಗ್​ಬಾಸ್​ ಸೀಸನ್​ 11 ಕಳೆದ 12ನೇ ಸೀಸನ್​ ಬಂದರೂ, ಸೀಸನ್​ 10 (Bigg Boss) ಮಾತ್ರ ಸಕತ್​ ಸದ್ದು ಮಾಡುತ್ತಲೇ ಇದೆ. ಬಿಗ್​ಬಾಸ್​​ ಎಂದರೆ ಲವ್​ಸ್ಟೋರಿ ಎನ್ನುವಂತಾಗಿದೆ. ಅಶ್ಲೀಲತೆ, ಸೆ*ಕ್ಸ್​, ಲವ್​ ಇವುಗಳು ಇಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಅದು ಸ್ಕ್ರಿಪ್ಟೆಡ್​ ಎನ್ನುವುದು ಹಲವು ಸ್ಪರ್ಧಿಗಳು ಇದಾಗಲೇ ಹೇಳಿದ್ದಾರೆ. ಮತ್ತೆ ಕೆಲವರು ಅದನ್ನು ಒಪ್ಪುವುದಿಲ್ಲ. ಅದೇನೇ ಇರಲಿ. ಒಟ್ಟಿನಲ್ಲಿ ಬಿಗ್​ಬಾಸ್​ ಸೀಸನ್​ 10ನಲ್ಲಿ ಸಕತ್​ ಸೌಂಡ್ ಮಾಡಿದ ಹೆಸರು ನಮ್ರತಾ ಗೌಡ ಮತ್ತು ಸ್ನೇಹಿತ್ ಅವರದ್ದು.

27
ಸ್ನೇಹಿತ್​- ನಮ್ರತಾ ಬಾಂಡಿಂಗ್​

ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಇವರಿಬ್ಬರ ಬಾಂಡಿಂಗ್​ ಚೆನ್ನಾಗಿತ್ತು. ಒಂದು ಹಂತದಲ್ಲಿ, ಸ್ನೇಹಿತ್ ಅವರು ನಮ್ರತಾ ಗೌಡ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರೂ, ನಮ್ರತಾ ಗೌಡ (Namratha Gowda ) ಅದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಮನೆಯೊಳಗೆ ನಿಜವಾದ ಪ್ರೀತಿ ಹುಟ್ಟುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ, ಸ್ನೇಹಿತ್ ಮತ್ತು ನಮತ್ರಾ ಸ್ನೇಹವನ್ನು ಅನೇಕರು ಅಪಾರ್ಥ ಮಾಡಿಕೊಂಡಿದ್ದರು, ಅವರಲ್ಲಿ ಸ್ನೇಹಿತ್ ತಂದೆ ಕೂಡ ಒಬ್ಬರು.

37
ಏನಿತ್ತು ನಮ್ರತಾ-ಸ್ನೇಹಿತ್​ ನಡುವೆ?

ಅದರಂತೆ ಹಲವರು ಇವರಿಬ್ಬರಿಗೆ ಏನೋ ಇದೆ ಎಂದೇ ಹೇಳುತ್ತಿದ್ದರು. ಇಂದಿಗೂ ಕೆಲವರು ಆ ವಿಷಯವನ್ನು ಮಾತನಾಡುವುದು ಇದೆ. ಇದೀಗ ಬಾಸ್​ಟಿವಿಗೆ ಸ್ನೇಹಿತ್​ ಅವರಿಗೆ ಇದೇ ಪ್ರಶ್ನೆ ಎದುರಾಗಿದೆ. ಅದಕ್ಕೆ ಸ್ನೇಹಿತ್​ ಅವರು, ಅವರ ಪಾಡಿಗೆ ಅವರು ಖುಷಿಯಾಗಿದ್ದಾರೆ, ನನ್ನ ಪಾಡಿಗೆ ನಾನು ಖುಷಿಯಾಗಿದ್ದೇನೆ. ಈಗ ಡಿಸ್​ಕಷನ್​ ಮಾಡುವವರೂ ನಿಲ್ಲಿಸಿದ್ದಾರೆ. ನೀವ್ಯಾಕೆ ಅದನ್ನೇ ಹೇಳುತ್ತೀರೋ ಗೊತ್ತಿಲ್ಲ ಎಂದು ಸ್ವಲ್ಪ ಬೇಸರದಿಂದಲೇ ನುಡಿದಿದ್ದಾರೆ.

47
ನಮ್ರತಾ ಗೌಡ ಬಗ್ಗೆ ಸ್ನೇಹಿತ್​

ಇತ್ತೀಚಿಗೆ ನಮ್ರತಾ ಅವರನ್ನು ಭೇಟಿಯಾಗಿಯೂ ಇಲ್ಲ ಎಂದಿದ್ದಾರೆ ಸ್ನೇಹಿತ್​. ಅದೊಮ್ಮೆ, ನಮ್ರತಾ ಅಂದ್ರೆ ಇಷ್ಟ ಎನ್ನುತ್ತಿದ್ದ ಸ್ನೇಹಿತ್‌ನ ನೋಡಿ ನಮ್ರತಾ ನಮ್ಮ ಸೊಸೆ ಎಂದು ಸ್ನೇಹಿತ್​ ತಂದೆ ಹೇಳಿಕೆ ಕೊಟ್ಟಿದ್ದು ನಮ್ರತಾ ಅವರ ಕೋಪಕ್ಕೂ ಗುರಿಯಾಗಿತ್ತು. 'ಸ್ನೇಹಿತ್ ಅವರ ತಂದೆ ನೀಡಿರುವ ಹೇಳಿಕೆಯಿಂದ ನನ್ನ ಅಪ್ಪ-ಅಮ್ಮ ಬೇಸರ ಮಾಡಿಕೊಂಡಿದ್ದಾರೆ. ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ಗೊತ್ತಿರಲಿಲ್ಲ, ಹೊರಗೆ ಬಂದ ಮೇಲೆ ಶಾಕ್ ಆಯ್ತು. ಒಂದು ಹೆಣ್ಣು ಹುಡುಗಿ ಜೀವನದ ಬಗ್ಗೆ ಅವಳ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೀರಾ ಅದರಲ್ಲಿ ನಿಮ್ಮ ಮಗನ ಭವಿಷ್ಯವೂ ಇದೆ ಯೋಚನೆ ಮಾಡಿ ಮಾತನಾಡಬೇಕು ಎಂದು ಹೇಳಿದ್ದರು.

57
ಮದುವೆ ಬಗ್ಗೆ ನಮ್ರತಾ ಗರಂ

ನನ್ನ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅಪ್ಪ ಅಮ್ಮ ಇದ್ದಾರೆ. ಹುಡುಗಿ ಮನೆಯಲ್ಲಿ ಮಾತನಾಡಿ ಕನ್ಫರ್ಮ್ ಮಾಡಿದ್ರೆ ಅಥವಾ ಹುಡುಗಿ ಓಕೆ ಅಂತ ಹೇಳಿದರೆ ಮಾತನಾಡಿ ಪರ್ವಾಗಿಲ್ಲ ಆದರೆ ಯಾರನ್ನು ಸಂಪರ್ಕ ಇಲ್ಲ ಮಾಡದೇ ಹೇಳಿಕೆ ನೀಡುವುದು ತಪ್ಪು. ಕೆಲವರು ನನ್ನ ತಂದೆ ತಾಯಿಗೆ ಕರೆ ಮಾಡಿ ಮದುವೆಗೆ ಒಪ್ಪಿಕೊಂಡಿದ್ದೀರಾ, ಮದುವೆ ಕನ್‌ಫರ್ಮ್ ಆಗಿದ್ಯಾ ಅಂತ ಕೇಳಿದ್ದಾರೆ. ಅವರ ಹೇಳಿಕೆ ಬೇಕಿರಲಿಲ್ಲ. ದೊಡ್ಡವರಾಗಿ ಕುಳಿತು ಮಾತನಾಡಿ ಆನಂತರ ಹೇಳಿಕೆ ಕೊಟ್ಟರೆ ಚೆನ್ನಾಗಿರುತ್ತೆ' ಎಂದು ನಮ್ರತಾ ಗೌಡ ಉತ್ತರ ಕೊಟ್ಟಿದ್ದರು.

67
ಬಿಗ್​ಬಾಸ್​ನಲ್ಲಿ ನಮ್ರತಾ ಬೇಸರ

ಆದರೆ ಬಿಗ್​ಬಾಸ್​ ಹೌಸ್​ನಲ್ಲಿ ಬಿಗ್ ಬಾಸ್ ಕನ್ನಡ 10 ಶೋವನ್ನು ಯಾರು ಗೆಲ್ಲಬೇಕು ಅಂತ ಕೇಳಿದ್ರೆ ನಾನು ವಿನಯ್ ಗೌಡ ಹೆಸರನ್ನು ಹೇಳ್ತೀನಿ. ನಿಮ್ಮನ್ನು ನೀವು ಕಂಡುಕೊಳ್ಳಿ ಅಂತ ನಮ್ರತಾಗೆ ಹೇಳ್ತೀನಿ ಎಂದುಬಿಟ್ಟಿದ್ದರು ಸ್ನೇಹಿತ್​. ಇದರಿಂದ ನಮ್ರತಾರಿಗೆ ಭಾರಿ ಬೇಸರವಾಗಿತ್ತು. "ವಿನಯ್ ಗೆಲ್ಲಬೇಕು ವಿನಯ್ ಗೆಲ್ಲಬೇಕು ಅಂತ ಹೇಳಿದ್ರೆ ನನ್ನ ಜೊತೆ ಇದ್ದ ಫ್ರೆಂಡ್‌ಶಿಪ್ ಅನ್ನು ಏನಂತ ಏನು, ಅದೆಲ್ಲಾ ಡ್ರಾಮಾನಾ ಎಂದು ಪ್ರಶ್ನಿಸಿದ್ದರು. ಇದರಿಂದ ಅವರಿಬ್ಬರ ನಡುವೆ ಸಿಕ್ಕಾಪಟ್ಟೆ ಬಾಂಡಿಂಗ್​ ಇದ್ದು, ಕೊನೆಗೆ ಏನೋ ಆಗಿರಬೇಕು ಎಂದೇ ಸೋಷಿಯಲ್​ ಮೀಡಿಯಾದಲ್ಲಿ ಹೇಳಲಾಗಿತ್ತು.

77
ಸ್ಪರ್ಧಿಗಳು ಕೈಗೊಂಬೆ

ಅಷ್ಟಕ್ಕೂ ಬಿಗ್​ಬಾಸ್​ ಒಂದು ಸ್ಪರ್ಧೆಯಷ್ಟೇ. ಅಲ್ಲಿರುವ ಸ್ಪರ್ಧಿಗಳು ಹಲವು ಬಾರಿ ಕೈಗೊಂಬೆಗಳು ಅಷ್ಟೇ. ಟಿಆರ್​ಪಿಗಾಗಿ ಒಂದಿಷ್ಟು ಏನೇನೋ ಮಾಡಲೇಬೇಕಾದ ಅನಿವಾರ್ಯತೆ ಇದೆ. ಹಾಗೆಂದು ಹೊರಗೆ ಬಂದ ಮೇಲೂ ಅದನ್ನೇ ಮುಂದುವರೆಸುತ್ತಾರೆ, ಅವರ ನಡುವೆ ಲವ್​ ಇದೆ ಎಂದೆಲ್ಲಾ ವೀಕ್ಷಕರು ಅಂದುಕೊಳ್ಳುವುದು ತಪ್ಪೇ ಬಿಡಿ.

Read more Photos on
click me!

Recommended Stories