ಜಿಯೋ-ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವ ಕಡಿಮೆ ರೇಟಿಂಗ್ ಪಡೆದ ಮೂರು ಅತ್ಯುತ್ತಮ ತಮಿಳು ಥ್ರಿಲ್ಲರ್ ಸಿನಿಮಾಗಳನ್ನು ಪರಿಚಯಿಸುತ್ತದೆ. ಮೂರು ಚಿತ್ರಗಳ ವಿಶಿಷ್ಟ ಕಥಾಹಂದರವನ್ನು ವಿವರಿಸಿದ್ದು, ಥ್ರಿಲ್ಲರ್ ಪ್ರಿಯರು ಈ ಸಿನಿಮಾಗಳನ್ನು ಏಕೆ ತಪ್ಪಿಸಿಕೊಳ್ಳಬಾರದು ಎಂಬುದನ್ನು ಒತ್ತಿ ಹೇಳುತ್ತದೆ.
ಥ್ರಿಲ್ಲರ್ ಸಿನಿಮಾಗಳು ಪ್ರತ್ಯೇಕವಾದ ಪ್ರೇಕ್ಷಕರ ವರ್ಗವನ್ನು ಹೊಂದಿರುತ್ತವೆ. ಥ್ರಿಲ್ಲರ್ ಸಿನಿಮಾಗಳಲ್ಲಿ ಮುಂದೇನಾಗುತ್ತೆ ಎಂದು ತಿಳಿದುಕೊಳ್ಳಲು ಪ್ರೇಕ್ಷಕರು ಕುತೂಹಲ ಹೊಂದಿರುತ್ತವೆ. ಕೆಲ ಅದ್ಭುತ ಕಥೆ ಹೊಂದಿರುವ ಸಿನಿಮಾಗಳು ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತವೆ. ಕಡಿಮೆ ರೇಟಿಂಗ್ ಪಡೆದ ಮೂರು ಅತ್ಯುತ್ತಮ ಥ್ರಿಲ್ಲರ್ ಸಿನಿಮಾಗಳು ಇಲ್ಲಿವೆ ನೋಡಿ.
25
ಜಿಯೋ-ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್
ಈ ಮೂರು ಸಿನಿಮಾಗಳು ಜಿಯೋ-ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದ್ದು, ಮೊದಲ ಬಾರಿಗೆ ನೋಡುವವರು ಖಂಡಿತವಾಗಿಯೂ 'ಓಹ್, ಇಷ್ಟು ವರ್ಷಗಳ ಕಾಲ ನಾನು ಇಷ್ಟು ಒಳ್ಳೆಯ ಸಿನಿಮಾವನ್ನು ತಪ್ಪಿಸಿಕೊಂಡೆ' ಎಂದು ಭಾವಿಸುತ್ತಾರೆ. ಈ ತಮಿಳು ಸಿನಿಮಾಗಳ ಗುಣಮಟ್ಟ ಅಷ್ಟು ಉತ್ತಮವಾಗಿದೆ.
35
1.ರಂಗೂನ್
ಚಿನ್ನ ಕಳ್ಳಸಾಗಣೆಯ ಕಥೆಯನ್ನು ಹೊಂದಿರುವ ರಂಗೂನ್ ಸಿನಿಮಾ ಪ್ರೀತಿ, ಸ್ನೇಹ ಮತ್ತು ದ್ರೋಹ ಎಂಬ ಮೂರು ವಿಷಯಳನ್ನು ಒಳಗೊಂಡಿದೆ. ಗೌತಮ್ ಕಾರ್ತಿಕ್ ಅಭಿನಯದ ರಂಗೂನ್ ಸಿನಿಮಾವನ್ನು ಅಂಡರ್‌ರೇಟೆಡ್ ಮಾಡಲಾಗಿತ್ತು. ಆದ್ರೆ ಓಟಿಟಿಯಲ್ಲಿ ನೋಡಿದವರು ವಾವ್ ಅಂತ ಕಮೆಂಟ್ ಮಾಡಿದ್ದಾರೆ.
ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರೇ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ಅವರ ಮೊದಲ ನಿರ್ದೇಶನದ ಚಿತ್ರ ಇದಾಗಿತ್ತು.
ಮೂವರು ಸ್ನೇಹಿತರ ಜೀವನದಲ್ಲಿ ನಡೆಯುವ ವಿಸ್ಮಯಕಾರಿ ಘಟನೆಯನ್ನು ಒಳಗೊಂಡ ಸಿನಿಮಾ ಇದಾಗಿದೆ. ಕಳ್ಳರು ದರೋಡೆಗೂ ಮುನ್ನವೇ ಮನೆ ಮಾಲೀಕರಿಗೆ ವಿಷಯ ಹೇಳುತ್ತಿರುತ್ತಾರೆ. 'ನಾನು ಈ ರೀತಿಯ ದರೋಡೆ ಮಾಡಲಿದ್ದೇನೆ, ಧೈರ್ಯವಿದ್ದರೆ ನನ್ನನ್ನು ನಿಲ್ಲಿಸಿ ಎಂದು ಸವಾಲು ಹಾಕುತ್ತಿರುತ್ತಾರೆ.
ಮೊದಲೇ ಮಾಹಿತಿ ನೀಡಿ ಹೇಗೆ ಕಳ್ಳತನ ಮಾಡ್ತಾನೆ ಅನ್ನೋ ವಿಷಯ ನೋಡುಗರಲ್ಲಿ ಕುತೂಹಲವನ್ನುಂಟು ಮಾಡುತ್ತದೆ. ಜಿಯೋ-ಹಾಟ್‌ಸ್ಟಾರ್‌ನಲ್ಲಿ ರಾಜತಂಧಿರಂ ಸಿನಿಮಾವನ್ನು ನೋಡಬಹುದು.
'ಕಾಕ್ಕ ಮುತ್ತೈ' ಮತ್ತು 'ಕಡೈಸಿ ವಿವಾಸೈ' ನಂತಹ ಚಿತ್ರಗಳನ್ನು ನಿರ್ದೇಶಿಸಿದ ಮಣಿಕಂದನ್ ನಿರ್ದೇಶನದ 'ಕುಟ್ರಮೆ ತಂಡನೈ' ಚಿತ್ರ ಸಹ ಕಡಿಮೆ ರೇಟಿಂಗ್ ಪಡೆದುಕೊಂಡಿತ್ತು. ಆದ್ರೆ ಓಟಿಟಿ ಈ ಸಿನಿಮಾವನ್ನು ನೋಡಿದವರು ಕಥೆಯನ್ನು ಮೆಚ್ಚಿಕೊಂಡಿದ್ದಾರೆ.
ದೃಷ್ಟಿ ನಿಧಾನವಾಗಿ ಕ್ಷೀಣಿಸುತ್ತಿರುವ ನಾಯಕ, ಐಶ್ವರ್ಯಾ ರಾಜೇಶ್ ವಾಸಿಸುವ ಮನೆಯ ಒಂದು ಭಾಗವನ್ನು ಬಾಡಿಗೆಗೆ ಪಡೆಯುತ್ತಾನೆ. ಅನುಮಾನಾಸ್ಪದ ಸಂದರ್ಭಗಳಲ್ಲಿ ನಟಿಯ ಕೊ*ಲೆ ಆಗುತ್ತದೆ. ಮುಂದೆ ಚಿತ್ರ ಈ ಕೊ-ಲೆಯ ಸುತ್ತ ಸಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.