ಇದು ಈ ಫ್ರಾಂಚೈಸಿಯ ಕೊನೆ ಚಿತ್ರ: ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು 15 ದಿನಗಳಲ್ಲಿ 3140 ಕೋಟಿ ಗಳಿಸಿದೆ.
ಇತ್ತೀಚೆಗಷ್ಟೇ ಹಾಲಿವುಡ್‌ನ ದಿ ಕಂಜ್ಯೂರಿಂಗ್ ಸಿರೀಸ್ ಸಿನಿಮಾ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಸೆಪ್ಟೆಂಬರ್ 5ರಂದು ಬಿಡುಗಡೆಯಾದ "ದಿ ಕಂಜ್ಯೂರಿಂಗ್: ಲಾಸ್ಟ್ ರೈಟ್ಸ್" ಕೇವಲ 15 ದಿನಗಳಲ್ಲಿ ಹಲವು ದಾಖಲೆಗಳನ್ನು ಬರೆದಿದೆ.
25
ಫ್ರಾಂಚೈಸಿಯ ಕೊನೆ ಸಿನಿಮಾ
ಇದು ದಿ ಕಂಜ್ಯೂರಿಂಗ್ ಫ್ರಾಂಚೈಸಿಯ ಕೊನೆ ಸಿನಿಮಾ ಆಗಿರೋದರಿಂದ ಜನರು ದುಡ್ಡು ಖರ್ಚು ಮಾಡಿಕೊಂಡು ಭಯಪಡಲು ಥಿಯೇಟರ್‌ಗೆ ಹೋಗುತ್ತಿದ್ದಾರೆ. ವರದಿಗಳ ಪ್ರಕಾರ, ಬಿಡುಗಡೆಯಾದ 15 ದಿನದಲ್ಲಿ ವಿಶ್ವದಾದ್ಯಂತ ಸುಮಾರು 3140 ಕೋಟಿ ರೂಪಾಯಿ ( $355 ಮಿಲಿಯನ್ ) ಗಳಿಸಿದೆ.
35
₹55 ಮಿಲಿಯನ್ ಬಜೆಟ್
3 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ದಿ ಕಂಜ್ಯೂರಿಂಗ್: ಲಾಸ್ಟ್ ರೈಟ್ಸ್ 484 ಕೋಟಿ ರೂಪಾಯಿ (₹55 ಮಿಲಿಯನ್) ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಚಿತ್ರದ ಒಟ್ಟು ಕಲೆಕ್ಷನ್ 500 ಮಿಲಿಯನ್ ಡಾಲರ್‌ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಪ್ಯಾಟ್ರಿಕ್ ವಿಲ್ಸನ್, ವೆರಾ ಫಾರ್ಮಿಗಾ, ಮಿಯಾ ಟಾಮ್ಲಿನ್ಸನ್ ಮತ್ತು ಬೆನ್ ಹಾರ್ಡಿ ಅದ್ಭುತ ಅಭಿನಯದಿಂದ ಚಿತ್ರದಲ್ಲಿ ಪಾತ್ರಗಳಿಗೆ ಜೀವ ತುಂಬಿಸಿದ್ದಾರೆ.
135 ನಿಮಿಷಗಳ ದಿ ಕಂಜ್ಯೂರಿಂಗ್: ಲಾಸ್ಟ್ ರೈಟ್ಸ್ ಸಿನಿಮಾ ಜನರನ್ನು ಹೆದರಿಸುತ್ತಲೇ ಬಾಕ್ಸ್ ಆಫಿಸ್‌ನಲ್ಲಿ ಹಣ ತುಂಬಿಸಿಕೊಳ್ಳುತ್ತಿದೆ. ಹಾರರ್ ಅಭಿಮಾನಿಗಳನ್ನು ಸೆಳೆಯುವಲ್ಲಿ ದಿ ಕಂಜ್ಯೂರಿಂಗ್ ಮತ್ತೊಮ್ಮೆ ಯಶಸ್ವಿಯಾಗಿದೆ. ಈ ದೆವ್ವದ ಸಿನಿಮಾ ನೋಡಿದ ವೀಕ್ಷಕರು ಹೇಳಿದ್ದೇನು ಅಂತ ನೋಡೋಣ ಬನ್ನಿ.
ಈ ಹಿಂದಿನ ಸಿರೀಸ್‌ಗಳಿಂತ ಇದು ಅಷ್ಟೊಂದು ಮಜವಾಗಿಲ್ಲ. ಮಧ್ಯೆ ತುಂಬಾ ಬೇಸರವೆನಿಸುವ ದೃಶ್ಯಗಳು ಕಂಡು ಬರುತ್ತವೆ. ದಿ ಕಂಜ್ಯೂರಿಂಗ್: ಲಾಸ್ಟ್ ರೈಟ್ಸ್ ದೃಶ್ಯಗಳು ಈ ಹಿಂದಿನ ಸಿನಿಮಾಗಳನ್ನು ನೆನಪುಂಟು ಮಾಡುತ್ತದೆ. ಕಂಜ್ಯೂರಿಂಗ್ ಫ್ರಾಂಚೈಸಿಯಲ್ಲಿಯೇ ಇದು ಅತ್ಯಂತ ಬೇಸರದ ಸಿರೀಸ್ ಎಂದು ಹೇಳಿದ್ದಾರೆ.