ಕನ್ನಡದ ನಟಿ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿಯೇ ಜನಪ್ರಿಯರಾಗಿರುವ ನಿತ್ಯಾ ಮೆನನ್ ವಿಚಾರವಾಗಿ ಕೆಲ ದಿನಗಳ ಹಿಂದೆ ಸುದ್ದಿಯೊಂದು ಹರಿದಾಡಿತ್ತು. ತಮಿಳು ನಟನಿಂದ ಶೂಟಿಂಗ್ ಸೆಟ್‌ನಲ್ಲಿ ನಿತ್ಯಾ ಮೇಲೆ ದೌರ್ಜನ್ಯ ನಡೆಸಲಾಗಿದೆ ಎನ್ನುವುದು ಆ ವರದಿ. ಈ ಬಗ್ಗೆ ಸ್ವತಃ ನಿತ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾ ತಾರೆಯರ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಇತ್ತೀಚಿನ ದಿನಗಳಲ್ಲಿ ಹೊಸದೇನಲ್ಲ. ಒಂದು ಕಾಲದಲ್ಲಿ ಸಾವಿನ ಸುದ್ದಿ ಹೀಗೇ ಬಿತ್ತರವಾಗುತ್ತಿತ್ತು ಆದರೆ ಈಗ ಸಂದರ್ಶನಗಳಲ್ಲಿ ನೀಡದ ಹೇಳಿಕೆಗಳು ಸ್ಟಾರ್‌ಗಳು ಹೇಳಿರುವ ಮಾತಿನ ರೀತಿಯಲ್ಲಿ ಸುದ್ದಿಯಾಗಿ ಕಾಣಿಸಿಕೊಳ್ಳುತ್ತಿವೆ.
216
ಈಗ ನಟಿ ನಿತ್ಯಾ ಮೆನನ್ ವ್ಯಾಪಕವಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಕುರಿತಾಗಿ ಬರುತ್ತಿರುವ ಸುದ್ದಿಗೆ ಸ್ವತಃ ನಿತ್ಯಾ ಮೆನನ್ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರ.ೆ
316
ಸುಳ್ಳು ನ್ಯೂಸ್ ಅಪಪ್ರಚಾರಕ್ಕೆ ಇತ್ತೀಚೆಗೆ ಬಲಿಯಾದವರು ನಟಿ ನಿತ್ಯಾ ಮೆನನ್. ತಮಿಳು ನಟನೊಬ್ಬ ಶೂಟಿಂಗ್ ಸೆಟ್‌ನಲ್ಲಿ ತನಗೆ ಕಿರುಕುಳ ನೀಡಿದ್ದಾನೆ ಮತ್ತು ತಮಿಳು ಚಿತ್ರರಂಗದಲ್ಲಿ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದು ನಿತ್ಯಾ ಹೇಳಿದ್ದಾಳೆ ಎಂದು ಸುದ್ದಿಯಾಗಿತ್ತು.
416
ಹಾಗಂತ ಈ ಸುದ್ದಿ ಮೊದಲು ಬಿತ್ತರ ಮಾಡಿದ್ದು ಸಣ್ಣಪುಟ್ಟ ವ್ಯಕ್ತಿಯಲ್ಲ. ಪ್ರಮುಖ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಹ್ಯಾಂಡಲ್ ಈ ಸುದ್ದಿಯನ್ನು ಪ್ರಕಟ ಮಾಡಿತ್ತು.
516
ಗ್ರಾಫಿಕ್‌ನಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಇದು ವ್ಯಾಪಕವಾಗಿ ಪ್ರಚಾರವಾಗಿ ಬಿಟ್ಟಿತು. ಹೆಚ್ಚಿನವರು ಇದನ್ನು ಶೇರ್ ಮಾಡಿಕೊಳ್ಳಲು ಆರಂಭಿಸಿದ್ದರು.
616
ನಂತರ ಬಂದ ಮತ್ತೊಂದು ಗ್ರಾಫಿಕ್ ನ್ಯೂಸ್‌ನಲ್ಲಿ ನಿತ್ಯಾ ಮೆನನ್‌ಗೆ ಕಿರುಕುಳವಾಗಿದ್ದು ತಮಿಳು ನಟನಿಂದ ಅಲ್ಲ. ತಮಿಳು ನಟನಿಂದ ಎನ್ನುವ ಸುದ್ದಿ ಬಿತ್ತರವಾಯಿತು.
716
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿತ್ಯಾ ಮೆನನ್, ನಾನು ಇತ್ತೀಚೆಗೆ ಯಾವುದೇ ಸಂದರ್ಶನವನ್ನು ನೀಡಿರುವುದಿಲ್ಲ. ಇಲ್ಲಿ ಹೇಳಿರುವ ಮಾತುಗಳು ಸುಳ್ಳು ಎಂದಿದ್ದಾರೆ.
816
'ಪತ್ರಕರ್ತರ ಒಂದು ವಿಭಾಗ ಈ ಮಟ್ಟಕ್ಕೆ ತಲುಪಿರುವುದು ಅತ್ಯಂತ ವಿಷಾದನೀಯ. ಇದಕ್ಕಿಂತ ಉತ್ತಮವಾದದ್ದನ್ನು ನಾನು ಕೇಳುತ್ತಿದ್ದೇನೆ. ಇದು ಸುಳ್ಳು ಸುದ್ದಿ. ಸಂಪೂರ್ಣ ಅಸತ್ಯ' ಎಂದು ನಿತ್ಯಾ ಮೆನನ್ ಬರೆದುಕೊಂಡಿದ್ದಾರೆ.
916
ನಾನು ಅಂತಹ ಸಂದರ್ಶನವನ್ನು ನೀಡಿಲ್ಲ. ಈ ಕೆಟ್ಟ ಅಭಿಯಾನವನ್ನು ಯಾರು ಪ್ರಾರಂಭಿಸಿದರು ಎಂದು ಯಾರಿಗಾದರೂ ತಿಳಿದಿದ್ದರೆ, ದಯವಿಟ್ಟು ನನಗೆ ತಿಳಿಸಿ. ಕೇವಲ ಕ್ಲಿಕ್‌ಗಳನ್ನು ಪಡೆಯಲು ನಕಲಿ ಸುದ್ದಿಗಳನ್ನು ಸೃಷ್ಟಿಸುವವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ನಿತ್ಯಾ ಮೆನನ್ ಬರೆದಿದ್ದಾರೆ.
1016
ನಾವು ಇಲ್ಲಿ ಸ್ವಲ್ಪ ಸಮಯ ಮಾತ್ರ ಇದ್ದೇವೆ. ನಾವು ಪರಸ್ಪರ ಎಷ್ಟು ತಪ್ಪುಗಳನ್ನು ಮಾಡುತ್ತೇವೆ ಎಂಬುದು ಯಾವಾಗಲೂ ನನಗೆ ಆಶ್ಚರ್ಯವನ್ನುಂಟು ಮಾಡುತ್ತದೆ ಎಂದು ನಿತ್ಯಾ ಹೇಳಿಕೊಂಡಿದ್ದಾರೆ.
1116
ನಾವು ಮಾಡುವ ಕೆಲಸದಲ್ಲಿ ಉತ್ತರದಾಯಿತ್ವವಿದ್ದರೆ ಮಾತ್ರ ಇಂತಹ ಕೆಟ್ಟ ಕೃತ್ಯಗಳು ನಿಲ್ಲಲು ಸಾಧ್ಯ. ನಾವು ಉತ್ತಮ ಜನರು ಎಂದು ನಿತ್ಯಾ ಮೆನನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
1216
ಅದರೊಂದಿಗೆ ಈ ಸುದ್ದಿಗಳನ್ನು ಬಿತ್ತರಿಸಿದ ಸ್ಕ್ರೀನ್ ಶಾಟ್‌ಗಳನ್ನೂ ಕೂಡ ನಿತ್ಯಾ ಮೆನನ್ ಹಂಚಿಕೊಂಡಿದ್ದಾರೆ. ಅಂಥ ಎರಡು ಪೋಸ್ಟ್‌ಗಳನ್ನು ಇನ್ಸ್‌ಟಾಗ್ರಾಮ್‌ನಲ್ಲೂ ಶೇರ್ ಮಾಡಿದ್ದಾರೆ.
1316
ಅದರೊಂದಿಗೆ ಸುಳ್ಳು ಸುದ್ದಿಯನ್ನು ಬಿತ್ತರಿಸಿದ ಬಜ್ ಬಾಸ್ಕೆಟ್ ಎನ್ನುವ ಟ್ವಿಟರ್ ಹ್ಯಾಂಡಲ್‌ಗೆ ಈಗಲಾದರೂ ನೀವು ಉತ್ತಮ ಜನರಾಗಿ ಎಂದು ಅವರು ಸಲಹೆ ನೀಡಿದ್ದಾರೆ.
1416
ಇನ್ನು ಲೆಟ್ಸ್ ಸಿನಿಮಾ ಎನ್ನುವ ಟ್ವಿಟರ್ ಹ್ಯಾಂಡಲ್ ಕೂಡ ಇದೇ ರೀತಿಯ ಸುದ್ದಿಯನ್ನು ಪ್ರಕಟ ಮಾಡಿತ್ತು. ಅವರ ಪೋಸ್ಟ್‌ಅನ್ನೂ ನಿತ್ಯಾ ಹಂಚಿಕೊಂಡಿದ್ದಾರೆ.
1516
ಬೆಂಗಳೂರು ಮೂಲದ ನಿತ್ಯಾ ಮೆನನ್‌ಗೆ ಈಗ 35 ವರ್ಷ. 2006ರಲ್ಲಿ ಕನ್ನಡದ ಸೆವೆನ್ ಓ ಕ್ಲಾಕ್ ಚಿತ್ರದ ಮೂಲಕ ಅವರು ಬೆಳ್ಳಿ ತೆರೆಗೆ ಪ್ರವೇಶಿಸಿದ್ದರು.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಚಿತ್ರಗಳಲ್ಲಿ ನಿತ್ಯಾ ಮೆನನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೊನೆಯ ಬಾರಿಗೆ ಮಲಯಾಳಂನ ಕೊಲಾಂಬಿ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.