ತೆಲುಗು ಸೀರಿಯಲ್ ಮೂಲಕ ಮತ್ತೆ ಮಿಂಚಲು ಹೊರಟಿದ್ದಾರೆ ಕಮಲಿ ಖ್ಯಾತಿಯ ಅಮೂಲ್ಯ

Published : Sep 27, 2023, 04:48 PM IST

ಕಮಲಿ ಪಾತ್ರದ ಮೂಲಕ ಮನೆಮಗಳಾಗಿ ಜನಪ್ರಿಯತೆ ಪಡೆದ ಅಮೂಲ್ಯ ಗೌಡ ಇದೀಗ ತೆಲುಗು ಸೀರಿಯಲ್ ಮೂಲಕ ಮತ್ತೆ ರಂಜಿಸೋಕೆ ಬರ್ತಿದ್ದಾರೆ.   

PREV
18
ತೆಲುಗು ಸೀರಿಯಲ್ ಮೂಲಕ ಮತ್ತೆ ಮಿಂಚಲು ಹೊರಟಿದ್ದಾರೆ ಕಮಲಿ ಖ್ಯಾತಿಯ ಅಮೂಲ್ಯ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಯಲ್ಲಿ ಅಮೂಲ್ಯ ಕಮಾಲ್ ಮಾಡಿದ್ದರು. ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿದ್ದ ಈ ಸೀರಿಯಲ್‌‍ನಲ್ಲಿ ಮತ್ತದೇ ಹಳ್ಳಿ ಹುಡುಗಿಯ ಕಥೆ. 

28

ತೆಲುಗಿನ ಸ್ಟಾರ್ ಮಾ ಚಾನೆಲ್ ನಲ್ಲಿ ಇನ್ನೇನು ಆರಂಭವಾಗಲಿರುವ ಗುಂಡೇನಿಂದ ಗುಡಿ ಗಂಟಲು ಸೀರಿಯಲ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸೀರಿಯಲ್ ನಲ್ಲೂ ಸಹ ಅಮೂಲ್ಯ ಮಧ್ಯಮ ಕುಟುಂಬದ ಸಿಂಪಲ್ ಗೃಹಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 
 

38

ಸೀರಿಯಲ್ ನ ಪ್ರೋಮೋ ವನ್ನು ಅಮೂಲ್ಯ  ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದು, ಇದರಲ್ಲಿ ಮೊದಲಿಗೆ ಹೂವು ಮಾರುವ ಹುಡುಗಿಯಾಗಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. ದೇವಸ್ಥಾನದಲ್ಲಿ ನದೆಯುತ್ತಿದ್ದ ಮದುವೆಯೊಂದನ್ನು ನಿಲ್ಲಿಸಲು ಬಂದ ಕುಡುಕನಿಗೆ ಚೆನ್ನಾಗಿ ಬುದ್ದಿ ಮಾತುಹೇಳುವ ಖಡಕ್ ಹುಡುಗಿಯಾಗಿ ಕಾಣಿಸಿದ್ದಾಳೆ. 
 

48

ಆ ಕುಡುಕ ಅಯ್ಯೋ ನಿನ್ನಂಥ ಹುಡುಗೀನಾ ಯಾರು ಮದ್ವೆ ಆಗುತ್ತಾರೆ, ಅವರು ಸರ್ವನಾಶ ಆಗಿ ಹೋಗ್ತಾರೆ ಅನ್ನೋವಾಗ ಸೀನ್ ಬದಲಾಗಿದ್ದು, ಅಮೂಲ್ಯ ಮತ್ತು ಆ ಕುಡುಕ ಹುಡುಗ ಮದುವೆಯಾಗಿ ಒಂದೇ ಮನೆಯಲ್ಲಿರೋದನ್ನು ತೋರಿಸಲಾಗಿದೆ. ಆತನನ್ನು ಈಕೆ ಹೇಗೆ ಬದಲಾಯಿಸುತ್ತಾಳೆ ಅನ್ನೋದೆ ಕಥೆಯಾಗಿದೆ. 
 

58

ಕಮಲಿ ಸೀರಿಯಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಆ ಸೀರಿಯಲ್ ಬಳಿಕ ಅಮೂಲ್ಯ ಬೇರೆ ಯಾವ ಸೀರಿಯಲ್ ನಲ್ಲೂ ಕಾಣಿಸಲಿಲ್ಲ. ಇದಾದ ನಂತರ ಬಿಗ್ ಬಾಸ್ ಸೀಸನ್ 9 ರಲ್ಲಿ (Bigg Boss season 9) ಸ್ಪರ್ಧಿಸಿ, ಅಪಾರ ಅಭಿಮಾನಿ ಬಳಗವನ್ನು ಪಡೆದಿದ್ದರು. 
 

68

ಇದೀಗ ವರ್ಷಗಳ ಬಳಿಕ ತೆಲುಗು ಸೀರಿಯಲ್ ಮೂಲಕ ತೆರೆ ಮೇಲೆ ಬರುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆಯೂ ಅಮೂಲ್ಯ ತೆಲುಗು ಸೀರಿಯಲ್ ನಲ್ಲಿ ನಟಿಸಿದ್ದರು. ನೆಚ್ಚಿನ ನಟಿಯನ್ನು ಮತ್ತೆ ತೆರೆ ಮೇಲೆ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. 
 

78

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಅಮೂಲ್ಯ ಹೆಚ್ಚಾಗಿ ತಮ್ಮ ಟ್ರಾವೆಲ್ ವಿಡಿಯೋ, ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸೀರಿಯಲ್ ನಲ್ಲಿ ಗ್ರಾಮದ ಹುಡುಗಿಯಾಗಿ ಹೆಚ್ಚಾಗಿ ಅಭಿನಯಿಸುವ ಇವರು, ನಿಜಜೀವನದಲ್ಲಿ ಸಕ್ಕತ್ ಸ್ಟೈಲಿಶ್ ಆಗಿದ್ದಾರೆ. 

88

ಇನ್ನು ಬಿಗ್ ಬಾಸ್ ಬಳಿಕ, ತಮ್ಮ ಬಿಗ್ ಬಾಸ್ ಗೆಳೆಯರ ಜೊತೆ ಪಾರ್ಟಿ, ಎಂಜಾಯ್ ಮಾಡುತ್ತಾ ಹೆಚ್ಚಾಗಿ ಸಮಯ ಕಳೆಯುತ್ತಾರೆ. ಅದರಲ್ಲೂ ಬಿಗ್ ಬಾಸ್ ನಲ್ಲಿ ಜೊತೆಯಾಗಿ ರಾಕೇಶ್ ಜೊತೆ ಉತ್ತಮ ಗೆಳೆತನ ಹೊಂದಿದ್ದು, ಇಬ್ಬರು ಮೀಟ್ ಆಗಿರುವ ಫೋಟೊ ವಿಡಿಯೋವನ್ನು ಸಹ ಶೇರ್ ಮಾಡ್ತಿರುತ್ತಾರೆ. 
 

Read more Photos on
click me!

Recommended Stories