Rashmi Gautam
ನಟ-ರಾಜಕಾರಣಿ ಉದಯನಿಧಿ ಸ್ಟಾಲಿನ್ ಅವರು ಸೆಪ್ಟೆಂಬರ್ 2 ರಂದು ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘದಲ್ಲಿ ಸನಾತನ ಧರ್ಮದ ಕುರಿತು ಆಡಿದ ಮಾತುಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಇದು ಸನಾತನ ಹಾಗೂ ಹಿಂದೂ ಧರ್ಮದ ನಂಬಿಕೆ ಇಟ್ಟವರು ಹಾಗೂ ಅವರ ವಿರೋಧಿಗಳ ನಡುವೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಇದೀಗ, ತೆಲುಗು ಟಿವಿ ನಿರೂಪಕಿ-ನಟಿ ರಶ್ಮಿ ಗೌತಮ್ ಕೂಡ ಉದಯನಿಧಿ ಸ್ಟಾಲಿನ್ ಮಾಡಿದ ಹೇಳಿಕೆಗಳ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಟಿ ರಶ್ಮಿ ಗೌತಮ್, ನಟ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್‌ನ ಹಳೆಯ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ, ಅದರಲ್ಲಿ ಅವರು ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದ ವ್ಯಕ್ತಿಗಳಿಂದ ಸನಾತನ ಧರ್ಮವನ್ನು ನಾವೆಲ್ಲರೂ ರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದ್ದರು.
ರಶ್ಮಿ ಗೌತಮ್ ಅವರು ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗಿನಿಂದ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟ್ವಿಟರ್‌ನಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ.
ಆ ಬಳಿಕ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ರಶ್ಮಿ ಗೌತಮ್, ಸನಾತನ ಧರ್ಮದಲ್ಲಿ ನಂಬಿಕೆಯಿಟ್ಟಿದ್ದಕ್ಕಾಗಿ ತನ್ನನ್ನು ಟೀಕಿಸುತ್ತಿರುವ ಎಲ್ಲ ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಭಾರತದಲ್ಲಿ ಆಗುತ್ತಿರುವ ಬೂಟಾಟಿಕೆಯ ಬಗ್ಗೆ ಆಕೆ ಮಾತನಾಡಿದ್ದಾರೆ. ಅದಲ್ಲದೆ, ಯಾರೂ ಕೂಡ ನನ್ನ ದೇವರು ಹಾಗೂ ನನ್ನ ನಂಬಿಕೆಯನ್ನು ನಿಂದಿಸುವ ಅಗತ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ನಾಸ್ತಿಕರಾಗಿರುವುದಕ್ಕೆ ನಾನು ನಿಮ್ಮನ್ನು ಎಂದೂ ಪ್ರಶ್ನೆ ಮಾಡಿಲ್ಲ. ಆಸ್ತಿಕರಾಗಿರುವ ಕಾರಣಕ್ಕೆ ನೀವು ಯಾಕೆ ನನ್ನನ್ನು ಪ್ರಶ್ನೆ ಮಾಡಬೇಕು ಎನ್ನುವ ಅರ್ಥದಲ್ಲಿ ರಶ್ಮಿ ಗೌತಮ್ ಪೋಸ್ಟ್ ಮಾಡಿದ್ದಾರೆ.
Rashmi Gautam
ಇದೇ ವೇಳೆ , ಪರಿಪೂರ್ಣ ಧರ್ಮದ ಅಸ್ತಿತ್ವದ ಬಗ್ಗೆ ಅವರು ಪ್ರಶ್ನೆ ಮಾಡಿದ್ದಾರೆ. ಪ್ರತಿಯೊಂದು ಧರ್ಮದಲ್ಲೂ ಉಗ್ರಗಾಮಿಗಳು ಮತ್ತು ಮೂಲಭೂತವಾದಿಗಳು ಇದ್ದಾರೆ. ಆದ ಮಾತ್ರಕ್ಕೆ ನಾವು ನಮ್ಮ ಧರ್ಮವನ್ನು ಬದಲಾಯಿಸಬೇಕು ಎಂದು ಅರ್ಥವಲ್ಲ ಎಂದು ರಶ್ಮಿ ಗೌತಮ್ ಹೇಳಿದ್ದಾರೆ.
ಪ್ರತಿ ಧರ್ಮದ ತತ್ವವು ಬದುಕುವುದು ಮತ್ತು ಬದುಕಲು ಬಿಡುವುದು ಎಂದು ರಶ್ಮಿ ಗೌತಮ್ ಬರೆದಿದ್ದಾರೆ. "ನನ್ನ ದೇವರು ಮತ್ತು ನನ್ನ ನಂಬಿಕೆಯನ್ನು ಎಂದಿಗೂ ನಿಂದಿಸಬೇಡಿ" ಎಂದು ರಶ್ಮಿ ಗೌತಮ್ ಎಚ್ಚರಿಸಿದ್ದಾರೆ.
Rashmi Gautam
ಈ ಟ್ವೀಟ್ ಅನ್ನು ಪೋಸ್ಟ್ ಮಾಡಿದ ಬಳಿಕ ರಶ್ಮಿ ಗೌತಮ್ ಅವರ ಅಭಿಮಾನಿಗಳು ಅವರನ್ನು ಬೆಂಬಲಿಸಲು ಪ್ರಾರಂಭಿಸಿದರು ಮತ್ತು ಸನಾತನ ಧರ್ಮದ ಕುರಿತಾಗಿ ಟೀಕೆ ಮಾಡಿದ್ದ ವ್ಯಕ್ತಿಗಳ ವಿರುದ್ಧ ನಿಂತಿದ್ದಕ್ಕೆ ನಿಮ್ಮ ಕುರಿತು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಒಬ್ಬರು ರಶ್ಮಿ ಗೌತಮ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, “ಇತರ ದೊಡ್ಡವರು ಮಾಡಲು ಸಾಧ್ಯವಾಗದ ವಿಷಯಕ್ಕಾಗಿ ನೀವು ನಿಂತಿದ್ದೀರಿ. ನಿಮ್ಮ ಬೆಂಬಲಕ್ಕೆ ನಾವು ಹೆಮ್ಮೆ ಪಡಬೇಕು. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ' ಎಂದು ಬರೆದಿದ್ದಾರೆ.
ಹಿಂದುತ್ವವಾದಿಯಾಗಿದ್ದರೆ ಮತ್ತು ಹಿಂದೂ ಧರ್ಮದ ನಿಜವಾದ ಸಿದ್ಧಾಂತವನ್ನು ಬೆಂಬಲಿಸುವುದನ್ನೇ ನೀವು ಸಂಘಿ ಎಂದು ಕರೆದರೆ, ನಾನು ಹೆಮ್ಮೆಯಿಂದ ಸಂಘಿ ಎಂದುಕೊಳ್ಳುತ್ತೇನೆ ಎಂದು ರಶ್ಮಿ ಗೌತಮ್ ಮತ್ತೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಹಿಂದು ಅನ್ನೋದು ವಿದೇಶಿ ಪದ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ ಎಂದು ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಶ್ಮಿ, 'ನೀವು ಅದಕ್ಕೆ ಬದ್ಧರಾಗಿರಿ. ನನ್ನ ನಂಬಿಕೆಯನ್ನು ಪ್ರಶ್ನೆ ಮಾಡುವ ಸಾಹಸಕ್ಕೆ ಬರಬೇಡಿ. ನಿಮ್ಮ ನಂಬಿಕೆಯನ್ನೂ ನಾನು ಪ್ರಶ್ನೆ ಮಾಡೋದಿಲ್ಲ' ಎಂದು ಉತ್ತರಿಸಿದ್ದಾರೆ.
ರಶ್ಮಿ ಗೌತಮ್ ಅವರು ಹಿಂದೂ ಧರ್ಮ ಮತ್ತು ಸನಾತನ ಧರ್ಮಕ್ಕೆ ತಮ್ಮ ಬೆಂಬಲದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶಗಳನ್ನು ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದಾರೆ.
Rashmi Gautam
ಆಕೆಯ ಇತ್ತೀಚಿನ ಹಿಂದೂ ಪರ ಪೋಸ್ಟ್‌ಗಳಿಂದಾಗಿ ಜನರು ಆಕೆಯನ್ನು ಸಂಘಿ ಎಂದು ಕರೆದಿದ್ದಾರೆ. ಇನ್ನೊಂದೆಡೆ ಸ್ವತಃ ರಶ್ಮಿ ಗೌತಮ್ ಅವರು ಸಂಘಿ ಎಂದು ಕರೆಸಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ ಎಂದು ಬರೆದಿದ್ದಾರೆ.
ಅದಲ್ಲದೆ, ತಾವು ಹಿಂದು ಬ್ರಾಹ್ಮಣ ಕುಟುಂಬದಿಂದ ಬಂದ ಮಹಿಳೆ ಎನ್ನುವ ರಶ್ಮೀ ಗೌತಮ್, ನಾನು ಎಲ್ಲಾ ಜಾತಿ ಧರ್ಮವನ್ನೂ ಗೌರವಿಸುತ್ತೇನೆ ಎಂದು ಬರೆದಿದ್ದಾರೆ.