Sonu Gowda: ಆದಾಯಕ್ಕೆ ಸೋಷಿಯಲ್​ ಮೀಡಿಯಾ ನಂಬ್ಕೊಂಡು ಕೂತಿಲ್ಲ: ಇನ್​ಕಮ್​ ಗುಟ್ಟು ರಟ್ಟು ಮಾಡಿದ ಸೋನು ಗೌಡ

Published : Jul 10, 2026, 03:49 PM IST

ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ ಗೌಡ 'ಕೇಕೆ' ಸಿನಿಮಾದ ಐಟಂ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ತಮ್ಮ ದುಬಾರಿ ಕಾರು ಮತ್ತು ಮನೆಯ ಖರೀದಿಯ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ, ಆದಾಯದ  ಮೂಲ ಎಂದು ಸ್ಪಷ್ಟಪಡಿಸಿದ್ದಾರೆ.

PREV
16
ಸೋಷಿಯಲ್ ಮೀಡಿಯಾ ಸ್ಟಾರ್​ ಸೋನು ಗೌಡ

ಸೋಷಿಯಲ್​ ಮೀಡಿಯಾದಲ್ಲಿ ಹಸಿಬಿಸಿ ದೃಶ್ಯಗಳಿಂದ ಕಾಣಿಸಿಕೊಳ್ತಿರೋ ನಟಿ ಸೋನು ಶ್ರೀನಿವಾಸ ಗೌಡ (Sonu Gowda ) ಅವರು ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಾಗಿದೆ. ಇಲ್ಲಿಯೂ ಹಾಟ್​ ಆಗಿ ಐಟಂ ಸಾಂಗ್​ಗೆ ಹೆಜ್ಜೆ ಹಾಕಿ ಸ್ಯಾಂಡಲ್​ವುಡ್​ ನಟಿ ಎನ್ನುವ ಬಿರುದು ಪಡೆದುಕೊಂಡಿದ್ದಾರೆ.

26
ಮಾದಕ ಡಾನ್ಸ್​ನಿಂದ ಫೇಮಸ್​

ಮೊದಲ ಸಿನಿಮಾದಲ್ಲಿಯೇ ಮೈಚಳಿ ಬಿಟ್ಟು ಮಾದಕ ಡಾನ್ಸ್​ ಮಾಡುವ ಮೂಲಕ ಮತ್ತಷ್ಟು ಸದ್ದು ಮಾಡುತ್ತಿದ್ದಾರೆ ನಟಿ ಸೋನು ಗೌಡ (Sonu Srinivas Gowda). ಸದ್ದಿಲ್ಲದೆ ಸೆಟ್ಟೇರಿ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ‘ಕೇಕೆ’ಯಲ್ಲಿ ಸೋನು, ವಿಶೇಷ ಐಟಂ ಹಾಡಿಗೆ ಡಾನ್ಸ್​ ಮಾಡಿದ್ದು, ಪಡ್ಡೆಗಳ ಹೃದಯದಲ್ಲಿ ಕಚಗುಳಿ ಇಟ್ಟಿದ್ದಾರೆ.

36
ದುಬಾರಿ ಕಾರು, ಮನೆ

ಅಷ್ಟಕ್ಕೂ ಸೋನುಗೌಡ ಇದಾಗಲೇ ದುಬಾರಿ ಕಾರು, ಮನೆ ಎಲ್ಲಾ ಖರೀದಿ ಮಾಡಿದ್ದಾರೆ. ಸಾಮಾನ್ಯವಾಗಿ ಇಂಥ ಯುವತಿಯರು ಮನೆ, ಕಾರು ಖರೀದಿ ಮಾಡಿದಾಗ ಬರುವ ಮಾತುಗಳೇ ಬೇರೆ. ಇಂಥ ಕೊಂಕು ಮಾತುಗಳು ಕಿರುತೆರೆಯ ಖ್ಯಾತ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಹಲವಾರು ಸೆಲೆಬ್ರಿಟಿಗಳು ಈ ಬಗ್ಗೆ ನೋವು ತೋಡಿಕೊಂಡದ್ದು ಇದೆ.

46
ಚೆನ್ನಾಗಿ ದುಡ್ಡು ಸಂಪಾದನೆ

ಅದೇ ರೀತಿ ಸೋನು ಗೌಡ ಅವರು ಚೆನ್ನಾಗಿ ದುಡ್ಡು ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಇವರ ಬಗ್ಗೆಯೂ ಇಲ್ಲಸಲ್ಲದ ಕೆಟ್ಟ ಕಮೆಂಟ್ಸ್​ಗಳೇ ಬಂದಿವೆ. ಆದರೆ ಅದ್ಯಾವುದಕ್ಕೂ ಜಗ್ಗದ ಸೋನು ಗೌಡ ಅವರು ಕ್ಯಾರೇ ಮಾಡದೇ ತಮ್ಮ ಪಾಲಿಗೆ ತಾವು ಕೆಲಸ ಮಾಡಿಕೊಂಡು ನಡೆಯುತ್ತಿದ್ದಾರೆ..

56
ಸೋಷಿಯಲ್​ ಮೀಡಿಯಾ ನಂಬಿ ಕೂತಿಲ್ಲ

ಇದೀಗ ಅವರ ಐಟಂ ಸಾಂಗ್​ ರಿಲೀಸ್​ ಆಗುತ್ತಲೇ ಮಾಧ್ಯಮಗಳಲ್ಲಿಯೂ ಹೈಲೈಟ್​ ಆಗುತ್ತಿದ್ದಾರೆ ಸೋನು ಗೌಡ. ಅವರಿಗೆ ನೀವು ಇಷ್ಟೆಲ್ಲಾ ಹಣ ಸಂಪಾದನೆ ಮಾಡ್ತಿರೋ ಮೂಲ ಯಾವುದು ಎನ್ನುವ ಪ್ರಶ್ನೆಗೆ ಸೋನು ಗೌಡ ಅವರು, ನಾನು ಎಂದಿಗೂ ಸೋಷಿಯಲ್​ ಮೀಡಿಯಾ ನಂಬಿಕೊಂಡು ಕೂತುಕೊಂಡಿಲ್ಲ ಎಂದು ನೇರಾನೇರ ಮಾತನಾಡಿದ್ದಾರೆ.

66
ದುಡ್ಡು ಹೇಗೆ ಬರುತ್ತೆ?

ಸೋಷಿಯಲ್​ ಮೀಡಿಯಾದಲ್ಲಿ ಹಗಲಿನಿಂದ ರಾತ್ರಿಯವರೆಗೂ ದುಡಿಯುತ್ತೇನೆ. ಅದರಿಂದಲೂ ದುಡ್ಡು ಬರತ್ತೆ, ಇಲ್ಲ ಎಂದಲ್ಲ. ಆದರೆ ಇನ್​ಕಮ್​ಗಾಗಿ ಅದನ್ನೊಂದೇ ನಂಬಿಕೊಂಡು ಕೂತಿಲ್ಲ. ನಾನು ಕೆಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದೇನೆ. ಅವುಗಳಿಂದ ನನಗೆ ತುಂಬಾ ಹಣ ಬರುತ್ತದೆ. ಅದರಿಂದಲೇ ಇದನ್ನೆಲ್ಲಾ ಖರೀದಿ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories