ಸದಾ ಟ್ರೋಲ್‌ಗಳಿಂದಲೇ ಸುದ್ದಿಯಾಗುವ ನಟಿ ಸೋನು ಶ್ರೀನಿವಾಸ್ ಗೌಡ, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 'ನಿಮ್ಮ ವಿಡಿಯೋ ನನ್ನ ಬಳಿ ಇದೆ' ಎಂದು ಕಮೆಂಟ್ ಮಾಡಿದ ನೆಟ್ಟಿಗನೊಬ್ಬನಿಗೆ ಖಡಕ್ ಉತ್ತರ ನೀಡಿದ್ದಾರೆ. 'ಇಟ್ಕೊಂಡು ಪೂಜೆ ಮಾಡು' ಎಂಬ ಸೋನು ಅವರ ಈ ಉತ್ತರ ಇದೀಗ ಸಾಮಾಜಿಕ ವೈರಲ್ ಆಗಿದೆ.
ದೇಶಕ್ಕಾಗಿ ಸೇವೆ ಸಲ್ಲಿಸಿದ, ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ, ವಿವಿಧ ಕ್ಷೇತ್ರಗಳ ಮಹಾನ್ ತಾರೆಯರ ಹೆಸರು ಕೇಳಿಯೂ ಇಲ್ಲದ ಜನ ನಮ್ಮ ನಡುವೆ ಅಸಂಖ್ಯ ಇದ್ದಾರೆ. ಆದರೆ ನಟಿ ಸೋನು ಶ್ರೀನಿವಾಸ ಗೌಡ ಎಂದಾಕ್ಷಣ ಕಣ್ಣರಳಿಸಿ ನೋಡುವ ಸಾಲಿನಲ್ಲಿ ಸೇರಿದವರು ಇವರಲ್ಲಿ ಹಲವರು. ಅವರ ವಿವಿಧ ರೀತಿಯ ಫೋಟೋಗಳು ಕಣ್ಣ ಮುಂದೆ ಹಾದು ಹೋಗುವಷ್ಟು ಫೇಮಸ್ ಆಗಿರುವವರು ಸೋನು ಗೌಡ (Sonu Gowda)
26
ಟ್ರೋಲೇ ಜೀವನ
27 ವರ್ಷದ ಸೋನು ಶ್ರೀನಿವಾಸ್ ಗೌಡ, ಇಂದು ವಿವಾದಗಳು, ಟ್ರೋಲ್‌ಗಳ ಮಧ್ಯೆಯೇ ಜೀವನ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡಿದ್ರೆ ಲೈಕ್ಸ್, ಕಮೆಂಟ್ಸ್, ಟ್ರೋಲ್ಸ್ ಹೆಚ್ಚು ಬಂದು ಹೆಚ್ಚಿಗೆ ಫೇಮಸ್ ಆಗ್ಬೋದು ಎನ್ನುವುದನ್ನು ಅಕ್ಷರಶಃ ಅರಿತವರು ಈ ನಟಿ.
36
ಎಲ್ಲ ಅರಿತಿರುವ ಸೋನು
ತಮ್ಮ ಫೋಟೋ, ವಿಡಿಯೋಗಳಿಂದಲೇ ಯಾವ ರೀತಿಯಲ್ಲಿ ಒಂದು ವರ್ಗದ ಅಭಿಮಾನಿಗಳನ್ನು ಗಳಿಸಿ, ಹಣ ಮಾಡಬಹುದು ಎನ್ನುವುದನ್ನೂ ಅರಿತು ಬಿಂದಾಸ್ ಆಗಿ ಫೋಟೋ, ವಿಡಿಯೋಶೂಟ್ ಮಾಡಿಸಿಕೊಳ್ಳುವ ಕೆಲವು ನಟಿಯರ ಪೈಕಿ ಸೋನು ಗೌಡ ಕೂಡ ಒಬ್ಬರು.
ಟ್ರೋಲ್ ಮಾಡುತ್ತಲೇ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ದೊಡ್ಡ ಸಂಖ್ಯೆ ನೆಟ್ಟಿಗರು ಇದ್ದಾರೆ. ಇಂಥ ನಟಿಯರು ಯಾವಾಗ ಫೋಟೋ ಹಾಕ್ತಾರೆ,, ಯಾವಾಗ ವಿಡಿಯೋ ಹಾಕ್ತಾರೆ ಎಂದು ಕಾದು ಕುಳಿತುಕೊಳ್ಳುತ್ತಾರೆ. ಅದಕ್ಕೆ ಕಾರಣ, ತಮ್ಮ ಡಿಕ್ಷನರಿಯಲ್ಲಿ ಇರುವ, ಇರದ ಎಲ್ಲಾ ಭಾಷೆಗಳ ಪದ ಪ್ರಯೋಗ ಮಾಡಿ ತಮ್ಮ ತೀಟೆಯನ್ನು ತೀರಿಸಿಕೊಳ್ಳುವವರ ಹಂಬಲ ಇವರದ್ದು. ಅದೇ ಕೆಲವು ಸೆಲೆಬ್ರಿಟಿಯರಿಗೆ ಅದರಲ್ಲಿಯೂ ಹೆಚ್ಚಾಗಿ ನಟಿಯರಿಗೆ ಬಂಡವಾಳ.
56
ವಿಡಿಯೋ ನನ್ನ ಹತ್ರ ಇದೆ
ಇದೀಗ ಸೋನು ಗೌಡ ಅವರಿಗೆ ಇದೇ ರೀತಿಯ ಸತೀಶ್ ಜಗ್ಗು ಎನ್ನುವ ಇನ್ಸ್ಟಾ ಪೇಜ್ನ ಅಭಿಮಾನಿಯೊಬ್ಬ ನಿಮ್ಮ ವಿಡಿಯೋ ನನ್ನ 'ಅತ್ರ' ಇದೆ ಎಂದು ಕಮೆಂಟ್ ಮಾಡಿದ್ದಾನೆ. (ಹ ಕಾರ, ಅ ಕಾರ ಬರದಿದ್ದರೂ, ಟ್ರೋಲ್ ಮಾಡುವಲ್ಲಿ ಇಂಥವರೇ ಹೆಚ್ಚಿನವರು ಅನ್ನಿ) ಆದರೂ ಇವರ ಕಮೆಂಟ್ಗೆ ಸೋನು ಗೌಡ ಅವರು ಮಾಡಿರುವ ರಿಪ್ಲೈ ವೈರಲ್ ಆಗುತ್ತಿದೆ.
66
ಸೋನು ಗೌಡ ಹೇಳಿದ್ದೇನು?
ಅಷ್ಟಕ್ಕೂ ಸೋನು ಗೌಡ ಅವರು ಯಾವುದೇ ರೀತಿಯ ಬೇಸರ ಮಾಡಿಕೊಳ್ಳದೇ ಇಟ್ಕೊಂಡು ಪೂಜೆ ಮಾಡು ಎಂದು ರಿಪ್ಲೈ ಮಾಡಿದ್ದು, ಇದಕ್ಕೆ ಹಲವರು ಭೇಷ್ ಭೇಷ್ ಎನ್ನುತ್ತಿದ್ದಾರೆ. ಸರಿಯಾದ ಉತ್ತರ ಕೊಟ್ಟಿರುವೆ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.