ಸಿದ್ಧಾರ್ಥ್ ತಮ್ಮ ರಹಸ್ಯವನ್ನು ಸರಿಯಾದ ಸಮಯದಲ್ಲಿ ಬಹಿರಂಗಪಡಿಸಿದ್ದರು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಲ್ಮಾನ್, “ಈಗ ಆ ರಹಸ್ಯ ಮಗುವಾಗಿದೆ” ಎಂಬ ಅರ್ಥದಲ್ಲಿ ತಮಾಷೆಯಾಗಿ ಹೇಳಿದರು. ಜೊತೆಗೆ, ಸಲ್ಲೂ ಅವರು ಕಿಯಾರಾ-ಸಿದ್ಧಾರ್ಥ್ ಜೋಡಿಯ ಹೊಸ ಸೀಕ್ರೆಟ್ ಒಂದನ್ನು ಜಗಜ್ಜಾಹೀರು ಮಾಡಿದ್ರಾ? ನೋಡಿ..
ಸಿದ್ಧಾರ್ಥ್–ಕಿಯಾರಾ ಎರಡನೇ ಮಗುವಿನ ಸುದ್ದಿ? ಸಲ್ಮಾನ್ ಖಾನ್ ಮಾತಿಗೆ ನೆಟ್ಟಿಗರು ಹುಡುಕುತ್ತಿದ್ದಾರೆ ‘ಸುಳಿವು’!
ಬಾಲಿವುಡ್‌ನಲ್ಲಿ ಸಿನಿಮಾ ಪ್ರಚಾರದ ನಡುವೆ ವೈಯಕ್ತಿಕ ಜೀವನದ ಚರ್ಚೆ ಶುರುವಾಗುವುದು ಹೊಸದೇನಲ್ಲ. ಆದರೆ ಈ ಬಾರಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಸಿನಿಮಾ ಪ್ರಚಾರದ ವೇದಿಕೆಯಲ್ಲೇ ಅವರ ಕುಟುಂಬದ ವಿಚಾರವೊಂದು ಸದ್ದು ಮಾಡಿದೆ. ಅದರಲ್ಲೂ ಸಲ್ಮಾನ್ ಖಾನ್ ಮಾಡಿದ ಒಂದೇ ಒಂದು ತಮಾಷೆಯ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
27
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಅಭಿನಯದ ಮುಂಬರುವ ಚಿತ್ರ ‘ದಿ ಒನ್: ಫೋರ್ಸ್ ಆಫ್ ಫಾರೆಸ್ಟ್’ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಚಿತ್ರದ ‘ಛತ್’ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದೆ.
37
ಚಿತ್ರದ ಪ್ರಚಾರದ ಭಾಗವಾಗಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ‘ಬಿಗ್ ಬಾಸ್ 20’ ವೇದಿಕೆಗೆ ಆಗಮಿಸಿದ್ದರು. ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಇಬ್ಬರೂ ತಮ್ಮ ಸಿನಿಮಾದ ಬಗ್ಗೆ ಮಾತನಾಡುವುದರ ಜೊತೆಗೆ ವೈಯಕ್ತಿಕ ಜೀವನದ ಕೆಲವು ವಿಚಾರಗಳನ್ನೂ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಅಡ್ವಾನಿ ಅವರ ಕುಟುಂಬದ ಕುರಿತ ಚರ್ಚೆಯೂ ಅನಿರೀಕ್ಷಿತವಾಗಿ ಮುನ್ನೆಲೆಗೆ ಬಂತು.
ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್, ಸಿದ್ಧಾರ್ಥ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಅವರ ಮದುವೆ ವಿಚಾರದಲ್ಲಿ ತಾನು ಬಹಳ ಹಿಂದಿನಿಂದಲೂ ಆಸಕ್ತಿ ತೋರಿಸುತ್ತಿದ್ದೆ ಎಂಬುದನ್ನು ತಮಾಷೆಯಾಗಿ ನೆನಪಿಸಿಕೊಂಡರು. ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಸಂಬಂಧವನ್ನು ಆರಂಭದಲ್ಲಿ ಏಕೆ ಇಷ್ಟು ರಹಸ್ಯವಾಗಿಟ್ಟಿದ್ದರು ಎಂಬ ಪ್ರಶ್ನೆಯನ್ನೂ ಅವರು ಕೇಳಿದರು.
57
ಇದಕ್ಕೆ ಸಿದ್ಧಾರ್ಥ್ ಕೂಡ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ಸರಿಯಾದ ಸಮಯ ಬಂದಾಗ ತಮ್ಮ ಸಂಬಂಧದ ಬಗ್ಗೆ ಜಗತ್ತಿಗೆ ತಿಳಿಸಿದ್ದಾಗಿ ಅವರು ಹೇಳಿದರು. ಅಷ್ಟರಲ್ಲಿ ಸಲ್ಮಾನ್ ಖಾನ್ ಮಾಡಿದ ಮತ್ತೊಂದು ತಮಾಷೆಯ ಮಾತು ಕಾರ್ಯಕ್ರಮದ ಹೈಲೈಟ್ ಆಗಿಬಿಟ್ಟಿತು.
ಸಿದ್ಧಾರ್ಥ್ ತಮ್ಮ ರಹಸ್ಯವನ್ನು ಸರಿಯಾದ ಸಮಯದಲ್ಲಿ ಬಹಿರಂಗಪಡಿಸಿದ್ದರು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಲ್ಮಾನ್, “ಈಗ ಆ ರಹಸ್ಯ ಮಗುವಾಗಿದೆ” ಎಂಬ ಅರ್ಥದಲ್ಲಿ ತಮಾಷೆಯಾಗಿ ಹೇಳಿದರು. ಇದೇ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
67
ಸಿದ್ಧಾರ್ಥ್ ಮತ್ತು ಕಿಯಾರಾ 2025ರ ಜುಲೈನಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದ್ದರು ಎಂಬ ಮಾಹಿತಿಯ ನಡುವೆ, ಸಿದ್ಧಾರ್ಥ್ ತಂದೆಯಾಗಿರುವ ಅನುಭವದ ಬಗ್ಗೆಯೂ ಮಾತನಾಡಿದರು. ತಂದೆಯಾಗಿರುವುದು ತಮ್ಮ ಜೀವನದ ಅತ್ಯುತ್ತಮ ಪಾತ್ರ ಎಂದು ಅವರು ಸಂತೋಷದಿಂದ ಹೇಳಿಕೊಂಡಿದ್ದಾರೆ. ತಮ್ಮ ಮಗಳು ಇದೀಗ ಹೊಸ ಹೊಸ ಪದಗಳನ್ನು ಕಲಿಯುತ್ತಿದ್ದಾಳೆ ಎಂಬ ವಿಚಾರವನ್ನೂ ಅವರು ಹಂಚಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಸಲ್ಮಾನ್ ಖಾನ್ ಮತ್ತೊಮ್ಮೆ ತಮಾಷೆಯಾಗಿ, ಸಿದ್ಧಾರ್ಥ್ ಶೀಘ್ರದಲ್ಲೇ ಎರಡನೇ ಬಾರಿಗೆ ತಂದೆಯಾಗಲಿ ಎಂದು ಆಶಿಸುತ್ತಿದ್ದೇನೆ' ಎಂದು ತಮ್ಮ ಮನದಾಳದ ಶುಭ ಆಶಯ ವ್ಯಕ್ತಪಡಿಸಿದ ರೀತಿಯಲ್ಲಿ ಮಾತನಾಡಿದ್ದಾರೆ. ಅಷ್ಟೇ ಸಾಕಾಯಿತು! ಸಾಮಾಜಿಕ ಜಾಲತಾಣ ಬಳಕೆದಾರರು ಸಲ್ಮಾನ್ ಅವರ ಈ ಮಾತನ್ನು ಹಿಡಿದುಕೊಂಡು ಹೊಸ ಚರ್ಚೆ ಆರಂಭಿಸಿದ್ದಾರೆ.
77
“ಸಲ್ಮಾನ್ ಖಾನ್ ಸುಮ್ಮನೆ ಹೀಗೆ ಹೇಳಿದ್ದಾರಾ? ಅಥವಾ ಅವರಿಗೆ ಯಾವುದಾದರೂ ಮಾಹಿತಿ ಇದೆಯೇ?” ಎಂಬ ಪ್ರಶ್ನೆಗಳು ಈಗ ನೆಟ್ಟಿಗರ ನಡುವೆ ಹರಿದಾಡುತ್ತಿವೆ. ಕೆಲವರು ಇದನ್ನು ಎರಡನೇ ಮಗುವಿನ ಸುಳಿವು ಎಂದು ವ್ಯಾಖ್ಯಾನಿಸುತ್ತಿದ್ದರೆ, ಇನ್ನೂ ಕೆಲವರು ಇದು ಕೇವಲ ಸಲ್ಮಾನ್ ಅವರ ಎಂದಿನ ಹಾಸ್ಯಭರಿತ ಮಾತು ಎಂದು ಹೇಳುತ್ತಿದ್ದಾರೆ.
ಹೀಗಾಗಿ ಸದ್ಯಕ್ಕೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ಎರಡನೇ ಬಾರಿಗೆ ಪೋಷಕರಾಗಲಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಘೋಷಣೆ ಇಲ್ಲ. ಆದರೆ ಸಲ್ಮಾನ್ ಖಾನ್ ಅವರ ಒಂದೇ ಒಂದು ತಮಾಷೆಯ ಹೇಳಿಕೆ ಮಾತ್ರ ಬಾಲಿವುಡ್ ಗಾಸಿಪ್ ಲೋಕಕ್ಕೆ ಹೊಸ ವಿಷಯವನ್ನಂತೂ ಕೊಟ್ಟಿದೆ!
ಸಿನಿಮಾ ಪ್ರಚಾರಕ್ಕೆ ಬಂದ ಸಿದ್ಧಾರ್ಥ್ ಮತ್ತು ತಮನ್ನಾ, ತಮ್ಮ ಚಿತ್ರದ ಬಗ್ಗೆ ಮಾತನಾಡಿ ಹೋಗಿದ್ದರೂ, ಕೊನೆಯಲ್ಲಿ ಎಲ್ಲರ ಗಮನ ಸೆಳೆದದ್ದು ಮಾತ್ರ ಸಿದ್ಧಾರ್ಥ್–ಕಿಯಾರಾ ಅವರ ವೈಯಕ್ತಿಕ ಜೀವನ. ಈಗ ಈ ಚರ್ಚೆಗೆ ಮುಂದಿನ ಉತ್ತರವನ್ನು ಸಿದ್ಧಾರ್ಥ್ ಅಥವಾ ಕಿಯಾರಾ ಅವರೇ ನೀಡಬೇಕಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.