ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅಗಸ್ತ್ಯ ನಂದಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಮಗಳ ಹೊಟ್ಟೆ ಕಾಣದಂತೆ ಶಾರುಖ್ ಬಟ್ಟೆ ಸರಿಪಡಿಸಿದ ವಿಡಿಯೋ ವೈರಲ್ ಆಗಿದ್ದು, ಇದು ಅಭಿಮಾನಿಗಳ ಮೆಚ್ಚುಗೆ ಹಾಗೂ ಟ್ರೋಲಿಗರ ಕುಹಕಕ್ಕೆ ಕಾರಣವಾಗಿದೆ.
ನಟ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ಗೆ ಈಗ 25 ವರ್ಷ ವಯಸ್ಸು. ಸ್ಟಾರ್ ಕಿಡ್ ಆಗಿರುವ ಕಾರಣ ಸಹಜವಾಗಿ ಈಕೆಯ ಮೇಲೆ ಸಾರ್ವಜನಿಕರ ಕಣ್ಣು ನೆಟ್ಟಿರುತ್ತದೆ. ಇದಾಗಲೇ ಸಿನಿಮಾಗಿಂತಲೂ ಹೆಚ್ಚಾಗಿ ಸುಹಾನಾ ಡೇಟಿಂಗ್, ರೊಮಾನ್ಸ್ ವಿಷ್ಯದಲ್ಲಿಯೇ ಭಾರಿ ಸದ್ದು ಮಾಡುತ್ತಿದ್ದಾರೆ.
26
ಅಮಿತಾಭ್ ಮೊಮ್ಮಗನ ಜೊತೆ...
ಇದಾಗಲೇ ಬಿಕಿನಿ ಡ್ರೆಸ್ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್ ಮತ್ತು ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಸುದ್ದಿ ಹಳೆಯದ್ದಾಗಿದೆ. ಅಗಸ್ತ್ಯ ಕೂಡ ಸುಹಾನಾ ವಯಸ್ಸಿನವರೇ. ಹಾಗೆ ನೋಡಿದರೆ ಸುಹಾನಾ ಅಗಸ್ತ್ಯನಿಂದ ಆರು ತಿಂಗಳು ದೊಡ್ಡವರು. ಸುಹಾನಾ 2000ನೇ ಸಾಲಿನ ಮೇ ತಿಂಗಳಿನಲ್ಲಿ ಹುಟ್ಟಿದ್ದರೆ, ಅಗಸ್ತ್ಯ ಹುಟ್ಟಿರುವುದು ಅದೇ ಸಾಲಿನ ನವೆಂಬರ್ನಲ್ಲಿ.
36
ಮಗಳ ಮರ್ಯಾದೆ ಕಾಪಾಡಿದ ಕಿಂಗ್ ಖಾನ್
ಆದರೆ ಇದೀಗ ವೈರಲ್ ವಿಡಿಯೋ ಒಂದು ಶಾರುಖ್ ಖಾನ್ ಅಭಿಮಾನಿಗಳನ್ನು ಹೃದಯ ತುಂಬುವಂತೆ ಮಾಡಿದೆ. ಇದರಲ್ಲಿ ಶಾರುಖ್ ಖಾನ್ ಪುತ್ರ ಮತ್ತು ಮಗಳು ಸುಹಾನಾ ಜೊತೆ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅಪರೂಪಕ್ಕೆ ಸುಹಾನಾ ಖಾನ್ ಮೈಮುಚ್ಚುವಂಥ ಬಟ್ಟೆ ಹಾಕಿಕೊಂಡಿದ್ದಾರೆ. ಆದರೆ ಅವರ ಹೊಟ್ಟೆ ಅರ್ಥಾತ್ ಹೊಕ್ಕಳು ಕಾಣಿಸುತ್ತಿತ್ತು. ಆಗ ಕ್ಯಾಮೆರಾ ಕಣ್ಣು ತಮ್ಮ ಮೇಲೆ ಇದೆ ಎನ್ನುವ ಕಾರಣಕ್ಕೆ ಮಗಳ ಮಾನವನ್ನು ಮುಚ್ಚಲು ಅಪ್ಪ ಶಾರುಖ್ ಹೊಟ್ಟೆಯ ಮೇಲೆ ಇದ್ದ ಬಟ್ಟೆಯನ್ನು ಸ್ವಲ್ಪ ಕೆಳಕ್ಕೆ ಸಿಕ್ಕಿಸಿ ಮಗಳ ಮಾನ ಕಾಪಾಡಿದ್ದಾರೆ.
ಇದು ಶಾರುಖ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಇದ್ದರೆ ಇಂಥ ಅಪ್ಪ ಇರಬೇಕು, ಅದಕ್ಕಾಗಿಯೇ ಇವರನ್ನು ಕಿಂಗ್ ಖಾನ್ ಎನ್ನುವುದು, ಉಳಿದ ಸೆಲೆಬ್ರಿಟಿಗಳು ಇವರನ್ನು ನೋಡಿ ಕಲಿಯಬೇಕು, ಎಲ್ಲ ಅಪ್ಪಂದಿರಿಗೂ ಇವರು ಮಾದರಿಯಾಗಬೇಕು ಎಂದೆಲ್ಲಾ ಕಮೆಂಟ್ಸ್ಗಳಿಂದ ತುಂಬಿಸಿದ್ದಾರೆ.
56
ಟ್ರೋಲಿಗರೂ ಸುಮ್ಮನಿಲ್ಲ
ಆದರೆ ಟ್ರೋಲಿಗರು ಬಿಡ್ತಾರೆಯೆ, ಅವರು ಕೂಡ ಕಮೆಂಟ್ಸ್ನಲ್ಲಿ ಹಿಂದೆ ಬಿದ್ದಿಲ್ಲ. ಸುಹಾನಾ ಖಾನ್ ಅವರ ಬಿಕಿನಿ ಫೋಟೋಗಳನ್ನೆಲ್ಲಾ ಹೆಕ್ಕಿ ಹೆಕ್ಕಿ ಕಮೆಂಟ್ ಬಾಕ್ಸ್ ತುಂಬಿಸಿದ್ದಾರೆ. ಹೌದಪ್ಪಾ ಹೌದು ಇಂಥ ಅಪ್ಪ ಇರಬೇಕು, ಖಾನ್ ಸಾಹೇಬ್ರು ಅಂದ್ರೆ ಸುಮ್ಮನೇನಾ, ಮಗಳ ಮರ್ಯಾದೆ ಕಾಪಾಡುವಲ್ಲಿ ನಂಬರ್ 1 ಎಂದು ಕುಹಕ ಆಡಿದ್ದಾರೆ.
66
ದೇಹದ ಭಾಗಗಳಿಗೆ ಕತ್ತರಿ
ಅಂದಹಾಗೆ, ಸುಹಾನಾ ಖಾನ್ ದೇಹಕ್ಕೆ ಸಿಕ್ಕಾಪಟ್ಟೆ ಕತ್ತರಿ ಬಿದ್ದಿವೆ. ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಬಿಳಿ ಬಣ್ಣದ ತ್ವಚೆಗಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಮೈಬಣ್ಣ ಅಂದಗೊಳಿಸಿಕೊಳ್ಳಲು ಕೆಲವೊಂದು ಚಿಕಿತ್ಸೆ ಮೊರೆ ಹೋಗಿದ್ದಾರೆ. ಬೋಟೊಕ್ಸ್ ಮತ್ತು ಫಿಲ್ಲರ್ಸ್ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದಾರೆ. ಬಳಕುವ ಬಳ್ಳಿಯಂತಿರುವ ಸುಹಾನಾ ದೇಹದ ಮೇಲೂ ಹಲವರ ಕಣ್ಣು ಹೋಗಿದ್ದು ಇದೆ. ಆ ಭಾಗಕ್ಕೂ ಈಕೆ ಚಿಕಿತ್ಸೆ ಮಾಡಿಸಿಕೊಂಡಿರಲು ಸಾಕು ಎಂದು ಹೇಳುವುದು ಉಂಟು. ಆದರೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಟ್ಟಿನಲ್ಲಿ ಈ ದಂತದ ಬೊಂಬೆಯ ಹಿಂದಿರುವುದು ಪ್ಲಾಸ್ಟಿಕ್ ಸರ್ಜರಿ ಕಮಾಲ್ ಎನ್ನುವುದು ಅಂತೂ ದಿಟ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.