ನಮ್ಮಿಬ್ಬರ ಸಂಬಂಧ ಪತಿಗೆ ಗೊತ್ತಾ? ಓಪನ್ನಾಗಿಯೇ ಕೇಳಿ ನಟಿಯನ್ನು ಹೀಗೆ ಪೇಚಿಗೆ ಸಿಲುಕಿಸೋದಾ ಶಾರುಖ್​?

Published : Aug 17, 2025, 06:19 PM IST

ನಟಿ ರೇಣುಕಾ ಶಹಾನೆ ಅವರಿಗೆ ಶಾರುಖ್​ ಖಾನ್​ ತಮ್ಮಿಬ್ಬರ ಲವ್​ಸ್ಟೋರಿ ಪತಿಗೆ ಗೊತ್ತಾ? ಅದನ್ನು ಹೇಳಬೇಡಿ ಎಂದು ಓಪನ್​ ಆಗಿಯೇ ಕೇಳಿದ್ದಾರೆ. ಮುಂದೇನಾಯ್ತು? ಇಲ್ಲಿದೆ ಮಾಹಿತಿ 

PREV
18
ಶಾರುಖ್​ಗೆ ಬ್ರೇಕ್​ ಕೊಟ್ಟದ್ದ ಸರ್ಕಸ್​ ಸೀರಿಯಲ್​

1989-90ರ ಸುಮಾರಿಗೆ ದೂರದರ್ಶನ ಚಾನೆಲ್​ನಲ್ಲಿ ಎಲ್ಲರ ಮನ ಗೆದ್ದಿರುವ ಸರ್ಕಸ್​ (Circus) ಧಾರಾವಾಹಿ ನೆನಪಿದೆಯಾ? ಶಾರುಖ್​ ಖಾನ್​ (Shah Rukh Khan) ಅವರಿಗೆ ಬ್ರೇಕ್​ ಕೊಟ್ಟ ಧಾರಾವಾಹಿ ಇದು. ಅಲ್ಲಿಂದಲೇ ಅವರ ಸಿನಿ ಪಯಣ ಶುರುವಾದದ್ದು ಎಂದರೂ ತಪ್ಪಾಗಲಿಕ್ಕಿಲ್ಲ. ಇಂದು ಶಾರುಖ್‌ ಸೂಪರ್‌ ಸ್ಟಾರ್‌ ಆಗಿರಬಹುದು. ಆದರೆ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟದ್ದು ಸರ್ಕಸ್​ ಧಾರಾವಾಹಿ.

28
ಅಜೀಜ್‌ ಮಿಶ್ರಾ ನಿರ್ದೇಶನ

ಆ ಧಾರಾವಾಹಿಗೆ ಅಜೀಜ್‌ ಮಿಶ್ರಾ (Ajeej Mishra) ನಿರ್ದೇಶನ ಮಾಡಿದ್ದರು. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದಾಗ ಮುದ್ದುಮೊಗದ ರೇಣುಕಾ ಶಹಾನೆ. ಈ ಧಾರಾವಾಹಿಯನ್ನು 2020ರ ಲಾಕ್​ಡೌನ್​ ಟೈಂನಲ್ಲಿ ಡಿಡಿಯಲ್ಲಿ ಪುನಃ ಪ್ರಸಾರ ಮಾಡಲಾಗಿತ್ತು.

38
ಶಾರುಖ್​ ಮತ್ತು ರೇಣುಕಾ ಶಹಾನೆ ಜೋಡಿ

ಹಾಗೆ ನೋಡಿದರೆ ಶಾರುಖ್​ ಅವರ ಮೊದಲ ನಾಯಕಿ ರೇಣುಕಾ ಅವರೇ. ಪಠಾಣ್​ ಚಿತ್ರದಲ್ಲಿ ರೇಣುಕಾ ಅವರ ಪತಿ ಅಶುತೋಷ್ ರಾಣಾ ಅವರೂ ನಟಿಸಿದ್ದಾರೆ. ಇದರಲ್ಲಿ ಅವರದ್ದು ಕರ್ನಲ್​ ಲೂಥ್ರಾ ಪಾತ್ರ. ಪಠಾಣ್​ ಚಿತ್ರವನ್ನು ರೇಣುಕಾ ಅವರು ಪತಿಯ ಜೊತೆ ವೀಕ್ಷಿಸಲು ಹೋಗಿದ್ದ ಸಂದರ್ಭದಲ್ಲಿ ಶಾರುಖ್​ ಮತ್ತು ರೇಣುಕಾ ನಡುವೆ ಟ್ವಿಟರ್​ನಲ್ಲಿ ಹಾಸ್ಯಭರಿತ ಮಾತುಕತೆ ನಡೆದಿದ್ದು, ಅದು ಪುನಃ ಈಗ ವೈರಲ್​ ಆಗಿದೆ.

48
ಪತಿ ಅಶುತೋಷ್​ ರಾಣಾ ಜೊತೆ ರೇಣುಕಾ

ತಮ್ಮ ಪತಿ ಅಶುತೋಷ್​ ರಾಣಾ (Ashutosh Rana) ಜೊತೆ ಪಠಾಣ್​ ಚಿತ್ರವನ್ನು ನೋಡಿಬಂದ ಮೇಲೆ ರೇಣುಕಾ ಟ್ವಿಟರ್‌ನಲ್ಲಿ ಸರ್ಕಸ್​ನ ತುಣುಕೊಂದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ನಾಯಕನಾಗಿದ್ದ ಶೇಖರ್​ (ಶಾರುಖ್ ಖಾನ್​),​ ನಾಯಕಿಯಾಗಿದ್ದ ಮಾರಿಯಾ ಅರ್ಥಾತ್​ ರೇಣುಕಾ ಶಹಾನೆ (Renuka Shahane) ಅವರಿಗೆ ನಾವು ಎಷ್ಟೊಂದು ವರ್ಷಗಳ ಬಳಿಕ ಭೇಟಿಯಾಗುತ್ತಿದ್ದೇವೆ ಅಲ್ಲವೆ ಎಂದು ಪ್ರಶ್ನಿಸುತ್ತಾನೆ. ಅದನ್ನೇ ರೇಣುಕಾ ಶೇರ್​ ಮಾಡಿದ್ದಾರೆ.

58
ಶಾರುಖ್​ ಖಾನ್​ ಮೊದಲ ನಾಯಕಿ

ಇದಕ್ಕೆ ಶಾರುಖ್​ ಎಂದಿನಂತೆ ತಮ್ಮ ಮೊದಲ ನಾಯಕಿಗೆ ಹಾಸ್ಯದ ಉತ್ತರ ಕೊಟ್ಟಿದ್ದಾರೆ. ರೇಣುಕಾ ಅವರು, 'ಕರ್ನಲ್ ಲೂತ್ರಾ ಜಿ ಜೊತೆ ಅಂತಿಮವಾಗಿ ಪಠಾಣ್​ (Pathaan) ವೀಕ್ಷಿಸಲಿದ್ದೇನೆ. ಹವಾಮಾನ ಉತ್ತಮವಾಗಿದೆ. ಪತಿಯ ಜೊತೆ ಸೀಟ್ ಬೆಲ್ಟ್‌ಗಳನ್ನು ಜೋಡಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

68
ಮಾಷೆಯ ಪ್ರತಿಕ್ರಿಯೆ ನೀಡಿರುವ ಶಾರುಖ್

ಇದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡಿರುವ ಶಾರುಖ್​, 'ನೀವು ನನ್ನ ಮೊದಲ ನಾಯಕಿ ಎಂದು ಕರ್ನಲ್ ಲೂತ್ರಾ (Curnol Luthra) ಅವರಿಗೆ ಹೇಳಿದ್ದೀರಾ ಅಥವಾ ನಾವು ಅದನ್ನು ರಹಸ್ಯವಾಗಿಡಬೇಕೆ' ಎಂದು ಚಟಾಕಿ ಹಾರಿಸಿದ್ದಾರೆ. ಒಂದು ವೇಳೆ ಅವರಿಗೆ ಈ ರಹಸ್ಯ ಹೇಳಿದರೆ ನನ್ನನ್ನು ಏಜೆನ್ಸಿಯಿಂದ ವಜಾಗೊಳಿಸಬಹುದು ಎಂದಿದ್ದಾರೆ. ಅಸಲಿಗೆ ಪಠಾಣ್​ ಚಿತ್ರದಲ್ಲಿ ದೀಪಿಕಾ ಹಾಗೂ ಶಾರುಖ್​ ಮಧ್ಯೆ ಏನೋ ನಡೆಯುತ್ತಿದೆ ಎನ್ನುವುದು ಕರ್ನಲ್ ಲೂತ್ರಾ ಅವರ ಬಳಿ ಗುಪ್ತವಾಗಿ ಇಡಲಾಗಿತ್ತು. ಏಕೆಂದರೆ ಇದರಲ್ಲಿ ದೀಪಿಕಾ ಐಎಸ್​ಐನ ಏಜೆಂಟ್​ (ISI Agent) ಆಗಿದ್ದರಿಂದ ಇಬ್ಬರ ನಡುವಿನ ಪ್ರೀತಿಯನ್ನು ಯಾರಿಗೂ ಹೇಳಿರಲಿಲ್ಲ. ಅದಕ್ಕೇ ಶಾರುಖ್​ ಖಾನ್​ ಹೀಗೆ ತಮಾಷೆಯಾಗಿ ಹೇಳಿದ್ದಾರೆ.

78
ರೇಣುಕಾ ಶಹಾನೆ ಉತ್ತರ

ಅಲ್ಲಿಗೆ ಸುಮ್ಮನೇ ಇರದ ರೇಣುಕಾ ಅವರು, 'ಹ್ಹಹ್ಹಹ್ಹಾ... ಅವರಿಂದ ಯಾವುದಾದರೂ ವಿಷಯ ಗುಪ್ತವಾಗಿ ಇಡಲು ಸಾಧ್ಯವೆ? ಖಂಡಿತಾ ಇಲ್ಲ. ನೀವೇ ಅವರನ್ನು ಅಂತರ್ಯಾಮಿ ಎಂದು ಹೇಳಿದ್ದೀರಿ. ಏನೇ ಆದರೂ ಅವರು ನಿಮ್ಮನಂತೂ ಫೈರ್​ (Fire) ಮಾಡಲು ಸಾಧ್ಯವಿಲ್ಲ.

88
ವೈರಲ್​ ಆದ ಹಳೆಯ ಪೋಸ್ಟ್​

ಏಕೆಂದರೆ, ನೀವು ಮಾಡುವ ಕೆಲಸ ಅವರಿಂದ ಮಾಡಲು ಆಗುವುದಿಲ್ಲವಲ್ಲ ಎಂದು ಪಠಾಣ್​ ಚಿತ್ರಕ್ಕೆ ಹೊಂದಿಕೆ ಆಗುವಂತೆ ಉತ್ತರ ಕೊಟ್ಟಿದ್ದಾರೆ. ಈ ಪ್ರಶ್ನೋತ್ತರ ಸಕತ್​ ವೈರಲ್​ ಆಗಿದ್ದು, ನೆಟ್ಟಿಗರು ತುಂಬಾ ಖುಷಿ ಪಟ್ಟಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ಗಳು (Comments) ಬರುತ್ತಿವೆ.

Read more Photos on
click me!

Recommended Stories