ಉತ್ತರ ಭಾರತದ ಸೊಸೆಯಾಗಿ ಮೊದಲ ದೀಪಾವಳಿ ಆಚರಿಸಿದ ನಟಿ Vaishnavi Gowda: ಸೀತಾರಾಮ ನಟಿ ಫೋಟೋಗಳಿವು

Published : Oct 21, 2025, 12:36 PM IST

Actress Vaishnavi Gowda Photos: ನಟಿ ವೈಷ್ಣವಿ ಗೌಡ ಅವರಿಗೆ ಮದುವೆಯಾದಬಳಿಕ ಇದು ಮೊದಲ ದೀಪಾವಳಿ ಹಬ್ಬ. ಪತಿ ಅನುಕೂಲ್‌ ಮಿಶ್ರಾ ಜೊತೆಗೆ ಅವರು ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

PREV
16
ಮದುವೆ ಬಳಿಕ ಮೊದಲ ಹಬ್ಬ

ನಟಿ ವೈಷ್ಣವಿ ಗೌಡ ಅವರಿಗೆ ಮದುವೆಯಾದಬಳಿಕ ಇದು ಮೊದಲ ದೀಪಾವಳಿ ಹಬ್ಬ. ಪತಿ ಅನುಕೂಲ್‌ ಮಿಶ್ರಾ ಜೊತೆಗೆ ಅವರು ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

26
ಸೀರೆಯುಟ್ಟು ಮಿಂಚಿದ ನಟಿ

ಕೆಂಪು ಬಣ್ಣದ ಸೀರೆಯುಟ್ಟು ಅವರು ಮಿರ ಮಿರ ಮಿಂಚಿದ್ದಾರೆ. ಇನ್ನು ಅನುಕೂಲ್‌ ಮಿಶ್ರಾ ಕೂಡ ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು, ಹಬ್ಬವನ್ನು ಆಚರಿಸಿದ್ದಾರೆ. ಮದುವೆಯಾದ ಬಳಿಕ ಮೊದಲ ಹಬ್ಬವಾಗಿದ್ದರಿಂದ ಇದು ವಿಶೇಷವಾಗಿದೆ.

36
ದೀಪಾವಳಿ ಹಬ್ಬದ ಶುಭಾಶಯ

ಬೆಳಕು, ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ, ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಸೀತಾರಾಮ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.

46
‘ಸೀತಾರಾಮʼ ಧಾರಾವಾಹಿ ನಟಿ

ವೈಷ್ಣವಿ ಗೌಡ ಅವರು ಕೊನೆಯದಾಗಿ ‘ಸೀತಾರಾಮʼ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ಒಂದು ಮೈಕ್ರೋ ಸಿರೀಸ್‌ನಲ್ಲಿ ನಟಿಸಿದ್ದರು. ಇದರಲ್ಲಿ ನಟ ಸ್ಕಂದ ಅಶೋಕ್‌ ಕೂಡ ಅಭಿನಯಿಸಿದ್ದಾರೆ.

56
ಬೆಂಗಳೂರಿನಲ್ಲಿ ಮದುವೆ

ಕಳೆದ ಜೂನ್‌ ತಿಂಗಳಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್‌ ಮಿಶ್ರಾ ಅವರು ಮದುವೆಯಾಗಿದ್ದರು. ಬೆಂಗಳೂರಿನ ಹೊರವಲಯದಲ್ಲಿ ಈ ಮದುವೆ ನಡೆದಿತ್ತು. ಅದ್ದೂರಿ ಮದುವೆಗೆ ಕನ್ನಡ ಕಿರುತೆರೆಯ ಗಣ್ಯರು, ಸಂಬಂಧಿಕರು, ಸ್ನೇಹಿತರು ಬಂದಿದ್ದರು.

66
ಅರೇಂಜ್‌ ಮ್ಯಾರೇಜ್‌

ಅನುಕೂಲ್‌ ಮಿಶ್ರಾ ಅವರು ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚಂಡೀಗಢದವರು. ಮ್ಯಾಟ್ರಿಮೋನಿ ಮೂಲಕ ಇವರಿಬ್ಬರ ಪರಿಚಯ ಆಗಿ ಮದುವೆಯಾಗಿತ್ತು. ಪಕ್ಕಾ ಅರೇಂಜ್‌ ಮ್ಯಾರೇಜ್‌ ಅಂತೆ.

Read more Photos on
click me!

Recommended Stories