Sai Pallavi new hairstyle: ಸದಾ ಉದ್ದನೆಯ ಗುಂಗುರು ಕೂದಲಿನಿಂದ ಮಿಂಚುತ್ತಿದ್ದ ಸಾಯಿ ಪಲ್ಲವಿ ಇದೀಗ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಿಗ್ನೇಚರ್ ಕೂದಲಿಗೆ ಕತ್ತರಿ ಹಾಕಿ ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ಮಿಂಚಿರುವ ಅವರ ಹೊಸ ಲುಕ್ ಹಾಗೂ ಟ್ಯಾಟೂ ಈಗ ಎಲ್ಲರ ಗಮನಸೆಳೆದಿದೆ.
ಹೊಸ ಶಾರ್ಟ್ ಹೇರ್‌ಸ್ಟೈಲ್ ಸೌತ್ ಸಿನಿಮಾರಂಗದ ‘ನ್ಯಾಚುರಲ್ ಬ್ಯೂಟಿ’ ಸಾಯಿ ಪಲ್ಲವಿ ಇತ್ತೀಚೆಗೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಹೊಸ ಲುಕ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸದಾ ತಮ್ಮ ಉದ್ದನೆಯ, ಸುಂದರ ಗುಂಗುರು ಕೇಶರಾಶಿಯಿಂದಲೇ ಅಭಿಮಾನಿಗಳ ಮನಗೆದ್ದಿದ್ದ ಸಾಯಿ ಪಲ್ಲವಿ, ಇದೀಗ ತಮ್ಮ ಕೂದಲನ್ನು ಕತ್ತರಿಸಿ (Haircut) ಹೊಸ ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಅನಿರೀಕ್ಷಿತ ಬದಲಾವಣೆ ನೆಟ್ಟಿಗರ ನಡುವೆ ದೊಡ್ಡ ಚರ್ಚೆಗೇ ಕಾರಣವಾಗಿದೆ.
25
ಉದ್ದ ಕೂದಲು ಕತ್ತರಿಸಿದ್ರಾ ನ್ಯಾಚುರಲ್ ಬ್ಯೂಟಿ?
ಉದ್ದ ಕೂದಲು ಕತ್ತರಿಸಿದ್ರಾ ನ್ಯಾಚುರಲ್ ಬ್ಯೂಟಿ? ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕಾಗಿ ಮುಂಬೈಗೆ ಆಗಮಿಸಿದ್ದ ಸಾಯಿ ಪಲ್ಲವಿ, ಏರ್‌ಪೋರ್ಟ್‌ನಲ್ಲಿ ಎಂದಿನಂತೆ ಯಾವುದೇ ಆಡಂಬರವಿಲ್ಲದೆ ಅತ್ಯಂತ ಸರಳ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದರು. ಆದರೆ, ಎಲ್ಲರ ಗಮನ ಸೆಳೆದಿದ್ದು ಅವರ ಕೇಶವಿನ್ಯಾಸ. ತಮ್ಮ ಸಿಗ್ನೇಚರ್ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ, ಭುಜದವರೆಗಿನ ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ಅವರು ಕಾಣಿಸಿಕೊಂಡಿದ್ದೇ ತಡ, ವಿಡಿಯೋಗಳು ಇಂಟರ್ನೆಟ್‌ನಲ್ಲಿ ಕಾಳ್ಗಿಚ್ಚಿನಂತೆ ಹರಿದಾಡತೊಡಗಿದವು.
35
ಸಾಯಿ ಪಲ್ಲವಿ ಹೇರ್‌ಸ್ಟೈಲ್‌ಗೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಸಾಯಿ ಪಲ್ಲವಿ ಹೇರ್‌ಸ್ಟೈಲ್‌ಗೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ ಸಾಯಿ ಪಲ್ಲವಿ ಅವರ ಈ ಹೊಸ ಹೇರ್‌ಕಟ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತರಹೇವಾರಿ ಕಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ..
ಹೊಸ ಲುಕ್‌ಗೆ ಫಿದಾ ಆದವರು "ಹೇರ್‌ಕಟ್ ಮಾಡಿಸಿಕೊಂಡ ಮೇಲೆ ಸಾಯಿ ಪಲ್ಲವಿ ಇನ್ನು ಕ್ಯೂಟ್ ಆಗಿ, ಸೂಪರ್ ಆಗಿ ಕಾಣಿಸುತ್ತಿದ್ದಾರೆ", "ಸರಳತೆಯ ರಾಣಿ ಸಾಯಿ ಪಲ್ಲವಿ ಯಾವ ಹೇರ್‌ಸ್ಟೈಲ್‌ನಲ್ಲೂ ಮುದ್ದಾಗಿಯೇ ಇರುತ್ತಾರೆ" ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಅವರ ಉದ್ದ ಕೂದಲು ಮಿಸ್ ಮಾಡಿಕೊಂಡ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. "ಸಾಯಿ ಚೇಚಿ, ನಿಮ್ಮ ಆ ಹಳೆಯ ಉದ್ದ ಕೂದಲನ್ನು ನಾವು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ, ಪ್ಲೀಸ್ ಬೇಗನೆ ಮತ್ತೆ ಉದ್ದ ಕೂದಲು ಬೆಳೆಸಿಕೊಳ್ಳಿ", "ಕೊನೆಗೂ ಕೂದಲನ್ನು ಕತ್ತರಿಸಿಯೇ ಬಿಟ್ರಾ?" ಎಂದು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ.
ಗಮನ ಸೆಳೆದ ‘ಟ್ಯಾಟೂ’ ಹೇರ್‌ಸ್ಟೈಲ್ ಜೊತೆಗೆ ಅವರ ಕೈಯ್ಯಲ್ಲಿದ್ದ ವಿಶೇಷವಾದ ಟ್ಯಾಟೂ ಕೂಡ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಇದು ‘ರಾಮಾಯಣ’ ಸಿನಿಮಾಗಾಗಿ ಹಾಕಿಸಿಕೊಂಡ ಟ್ಯಾಟೂ ಇರಬಹುದೇ ಎಂದು ನೆಟ್ಟಿಗರು ಊಹಿಸಿದ್ದರು. ಆದರೆ, ಇದು ಸಾಯಿ ಪಲ್ಲವಿ ಹಾಗೂ ಅವರ ತಂಗಿ ಪೂಜಾ ಕಣ್ಣನ್ ಇಬ್ಬರೂ ಒಟ್ಟಾಗಿ ಹಾಕಿಸಿಕೊಂಡಿರುವ ‘ಮ್ಯಾಚಿಂಗ್ ಸಿಸ್ಟರ್ ಟ್ಯಾಟೂ’ ಎಂಬುದು ಸ್ಪಷ್ಟವಾಗಿದೆ. ಇಬ್ಬರು ಹೆಣ್ಣುಮಕ್ಕಳು ಸಂಭ್ರಮದಿಂದ ನರ್ತಿಸುತ್ತಿರುವ (Two dancing girls) ಈ ಟ್ಯಾಟೂ ‘ಸ್ವಾತಂತ್ರ್ಯ, ಸಡಗರ ಮತ್ತು ಬದುಕನ್ನು ಪ್ರೀತಿಸುವುದು’ ಎಂಬ ಅರ್ಥವನ್ನು ನೀಡುತ್ತದೆ.
55
‘ರಾಮಾಯಣ’ದ ಸೀತೆ
‘ರಾಮಾಯಣ’ದ ಸೀತೆ ನಿತೇಶ್ ತಿವಾರಿ ನಿರ್ದೇಶನದ ಬರೋಬ್ಬರಿ ₹4,000 ಕೋಟಿ ವೆಚ್ಚದ 'ರಾಮಾಯಣ' ಭಾಗ-1 ಚಿತ್ರದಲ್ಲಿ ಸಾಯಿ ಪಲ್ಲವಿ ಸೀತಾಮಾತೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಂಬೈ ಪ್ರಚಾರ ಸಮಾರಂಭದಲ್ಲಿ ರಣಬೀರ್ ಕಪೂರ್ ಮತ್ತು ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಜೊತೆ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ, ಇದೀಗ ತಮ್ಮ ಹೊಸ ಲುಕ್ ಮತ್ತು ಸರಳತೆಯಿಂದಲೇ ಎಲ್ಲೆಡೆ ಟ್ರೆಂಡಿಂಗ್‌ನಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.