ಆತನ ಜೊತೆ ಸೆಕ್ಸ್‌ ನಿರಾಕರಿಸಿದೆ, ಅರ್ಧ ಶೂಟ್‌ ಆದ ಚಿತ್ರದಿಂದ ನನ್ನ ಹೊರಹಾಕಿದ್ರು ಎಂದ ನಟಿ

First Published | Sep 29, 2023, 8:55 PM IST

ಬಾಲಿವುಡ್‌ನಲ್ಲಿ ಕಾಸ್ಟಿಂಗ್‌ ಕೌಚ್‌ ಸುದ್ದಿಗಳು ಹೊಸದೇನಲ್ಲ. ಪ್ರತಿನಿತ್ಯ ಎನ್ನುವಂತೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ, ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಬಹುದು ಎನ್ನುವ ನಿರೀಕ್ಷೆ ಹುಟ್ಟಿಸಿದ್ದ ನಟಿಯೊಬ್ಬರು ಕೂಡ ಕಾಸ್ಟಿಂಗ್‌ ಕೌಚ್‌ನ ಕರಾಳ ಅನುಭವಕ್ಕೆ ಒಳಗಾಗಿದ್ದರು.

2012ರಲ್ಲಿ ಜನ್ನತ್‌ 2 ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದವರು ದೆಹಲಿ ಮೂಲದ ಇಶಾ ಗುಪ್ತಾ. 2007ರಲ್ಲಿ ಫೆಮಿನಾ ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಆಗಿದ್ದ ಇಶಾ ಗುಪ್ತಾ, ಮಾಡೆಲಿಂಗ್‌ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು.

ಅದಾದ ಬಳಿಕ ರಾಜ್‌ 3ಡಿ, ಗೋರಿ ತೇರೆ ಪ್ಯಾರ್‌ ಮೇ, ಹಮ್‌ಶಕಲ್ಸ್‌, ಬೇಬಿ, ರುಸ್ತುಮ್‌, ಟೋಟಲ್‌ ಧಮಾಲ್‌, ಪಲ್ಟಾನ್‌, ಬಾದ್‌ಶಾಹೋ ಸೇರಿದಂತೆ ಇನ್ನೂ ಕೆಲ ಚಿತ್ರಗಳಲ್ಲಿ ನಟಿಸಿದ್ದರು.

Tap to resize

37 ವರ್ಷದ ಇಶಾ ಗುಪ್ತಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು, ಏಕ್‌ ಬದ್ನಾಮ್‌.. ಆಶ್ರಮ್‌ ಸೀಸನ್‌-3 ಅಲ್ಲಿ. ಬಾಬಿ ಡಿಯೋಲ್‌ಗೆ ಎದುರಾಗಿ ಅವರು ನಟಿಸಿದ್ದರು.

ಹಾಗಂತ ಇಶಾ ಗುಪ್ತಾ ಎಲ್ಲೂ ಮರೆಯಾಗಿಲ್ಲ. ಸಿನಿಮಾದಲ್ಲಿ ಬಂದ ಅವಕಾಶಗಳಲ್ಲಿ ನಟಿಸುತ್ತಾ, ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹಾಟ್‌ ಫೋಟೋಗಳನ್ನು ಹಾಕುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಜೀವನದಲ್ಲಿ ಎದುರಿಸಿದ ಆಘಾತಕಾರಿ ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ. ಹೊರಾಂಗಣ ಚಿತ್ರೀಕರಣದ ವೇಳೆ ಈ ಘಟನೆ ಆಗಿತ್ತು ಎಂದಿದ್ದಾರೆ.

ಇಶಾ ಗುಪ್ತಾಗೆ ಒಮ್ಮೆ ಅಲ್ಲ, ಎರಡು ಬಾರಿ ಕಾಸ್ಟಿಂಗ್‌ ಕೌಚ್‌ ಅನುಭವವಾಗಿದೆಯಂತೆ. ಎರಡೂ ಬಾರಿಯೂ ಹೇಗೋ ತಪ್ಪಿಸಿಕೊಂಡಿದ್ದೇನೆ ಎಂದು ನಿರಾಳರಾಗಿದ್ದಾರೆ.

ಮೊದಲ ಘಟನೆಯಲ್ಲಿ ಚಿತ್ರವೊಂದು ಹೆಚ್ಚೂ ಕಡಿಮೆ ಅರ್ಧಪಾಲು ಶೂಟಿಂಗ್‌ ಮುಗಿಸಿತ್ತು. ಈ ಹಂತದಲ್ಲಿ ಚಿತ್ರ ನಿರ್ಮಾಣ ಮಾಡಿದ ವ್ಯಕ್ತಿ ನನ್ನೊಂದಿಗೆ ಸೆಕ್ಸ್‌ ಬಯಕೆ ವ್ಯಕ್ತಪಡಿಸಿದ್ದ ಎಂದು ಇಶಾ ಹೇಳಿದ್ದಾರೆ.

ನಾನು ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದೆ. ಈ ಹಂತದಲ್ಲಿ ಬಂದ ಚಿತ್ರದ ಸಹ ನಿರ್ಮಾಪಕ, ನಿರ್ದೇಶಕರಿಗೆ ನಾನು ಚಿತ್ರದಲ್ಲಿ ಇರೋದು ಇಷ್ಟವಿಲ್ಲ ಎಂದಿದ್ದ. ಅದಾದ ಮೇಲೆ ಸೆಟ್‌ನಲ್ಲಿದ್ದು ನಾನೇನು ಮಾಡಲಿ. ಕೆಲವೊಂದು ನಿರ್ಮಾಪಕರು ಇದೇ ಕಾರಣಕ್ಕಾಗಿ ನನಗೆ ಸಿನಿಮಾ ಆಫರ್‌ ಮಾಡುತ್ತಿರಲಿಲ್ಲ ಎಂದಿದ್ದಾರೆ.

ನಿರ್ಮಾಪಕರ ಜೊತೆ ಸೆಕ್ಸ್‌ ಮಾಡಲು ಇಷ್ಟವಿಲ್ಲ ಎಂದಾದಲ್ಲಿ, ಅವರನ್ನು ಸಿನಿಮಾ ಹೀರೋಯಿನ್‌ ಆಗಿ ಯಾಕೆ ನಾವು ಆಯ್ಕೆ ಮಾಡಬೇಕು ಎಂದು ಅವರು ಹೇಳಿದ್ದನ್ನೂ ನಾನು ಕೇಳಿದ್ದೇನೆ ಎಂದು ಸ್ಪಾಟ್‌ಬೂಯೇಗೆ ನೀಡಿದ ಸಂದರ್ಶನದಲ್ಲಿ ಇಶಾ ಹೇಳಿದ್ದಾರೆ.

ಇನ್ನೊಮ್ಮೆ ಹೊರಾಂಗಣ ಚಿತ್ರೀಕರಣದ ವೇಳೆ ನನ್ನ ಕೋಣೆಯ ಬಾಗಿಲನ್ನು ಯಾವುದೇ ವ್ಯಕ್ತಿ ನಿರಂತರವಾಗಿ ಬಡಿಯುತ್ತಿದ್ದ. ಈ ವೇಳೆ ನನ್ನ ಮೇಕಪ್‌ ಆರ್ಟಿಸ್ಟ್‌ಗೆ ನನ್ನ ರೂಮ್‌ನಲ್ಲಿಯೇ ಮಲಗಿಕೊಳ್ಳುವಂತೆ ಹೇಳಿದ್ದೆ ಎಂದು ಇಶಾ ತಿಳಿಸಿದ್ದಾರೆ.

ಆಗ ಇಬ್ಬರು ವ್ಯಕ್ತಿಗಳು ನನ್ನನ್ನು ಕಾಸ್ಟಿಂಗ್‌ ಕೌಚ್ ಟ್ರ್ಯಾಪ್‌ಗೆ ಹಾಕಲು ಬಯಸಿದ್ದರು. ನಾನು ಇದನ್ನು ಅರ್ಥ ಮಾಡಿಕೊಂಡಿದ್ದೆ.ಹಾಗಿದ್ದರೂ ಆ ಸಿನಿಮಾದಲ್ಲಿ ನಾನು ನಟಿಸಿದ್ದೆ ಯಾಕೆಂದರೆ, ಕಾಸ್ಟಿಂಗ್‌ ಕೌಚ್‌ ಮಾಡಲು ಅವರು ಸಣ್ಣ ಪ್ರಯತ್ನ ಮಾಡಿದ್ದರು ಎಂದಿದ್ದಾರೆ.

ಹೊರಾಂಗಣ ಚಿತ್ರೀಕರಣದ ವೇಳೆ ನಾನು ಅವರ ಕಾಸ್ಟಿಂಗ್‌ ಕೌಚ್‌ ಟ್ರ್ಯಾಪ್‌ಗೆ ಬೀಳಬಹುದು ಎಂದು ಆತ ಅಂದುಕೊಂಡಿದ್ದ. ಆದರೆ, ನಾನು ಸ್ಮಾರ್ಟ್‌ ಆಗಿದ್ದೆ. ಹೊರಾಂಗಣ ಚಿತ್ರೀಕರಣದ ವೇಳೆಯಲ್ಲೂ ಎಚ್ಚರಿಕೆ ವಹಿಸಿದ್ದೆ ಎಂದಿದ್ದಾರೆ.

ಹೊರಾಂಗಣ ಚಿತ್ರೀಕರಣ ಇರುವಾಗ ನಾನು ಒಬ್ಬಳೇ ಮಲಗಿಕೊಳ್ಳೋದಿಲ್ಲ ಎಂದು ಅವರಿಗೆ ತಿಳಿಸಿದ್ದೆ. ಇದಕ್ಕಾಗಿ ಅವರ ಎದುರೇ ನನ್ನ ಮೇಕಪ್‌ ಆರ್ಟಿಸ್ಟ್‌ಅನ್ನು ಕರೆದು ಅವರೊಂದಿಗೆ ನನ್ನ ರೂಮ್‌ನಲ್ಲಿ ಮಲಗಿಕೊಳ್ಳುತ್ತಿದ್ದೆ ಎಂದು ತಿಳಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಖ್ಯಾತಿ ಗಳಿಸಿರುವ ಇಶಾ ಗುಪ್ತಾ, ತಮ್ಮ ಹೊಸ ರೀತಿಯ ಬಟ್ಟೆಗಳು ಹಾಗೂ ಮೈಮಾಟವನ್ನು ತೋರಿಸುವ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇದಕ್ಕೂ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಶಾ ಗುಪ್ತಾ, ನಾನು ಕಪ್ಪಗಿರುವುದಕ್ಕಾಗಿ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ ಎಂದಿದ್ದರು.

ಸಿನಿಮಾದ ಚಿತ್ರೀಕರಣದ ವೇಳೆ ನನ್ನ ಚರ್ಮದ ಬಣ್ಣದ ಕಾರಣಕ್ಕಾಗಿ ಸಾಕಷ್ಟು ಕುಹಕಗಳನ್ನೂ ಎದುರಿಸಿದ್ದೆ ಎಂದು ತಿಳಿಸಿದ್ದರು.

ಅಚಾನಕ್‌ ಆಗಿ ತುಟಿಗೆ ತುಟಿ ತಾಗಿದ್ದಕ್ಕೆ ಹೀಗೆ ಮಾಡಿಬಿಟ್ರಾ ಕೆಜಿಎಫ್‌ ನಟಿ!

ಚಿತ್ರದ ಆಡಿಷನ್‌ಗೆ ಹೋಗಿದ್ದಾಗ, ಚರ್ಮ ಬಿಳಿಯಾಗುವ ಇಂಜೆಕ್ಷನ್‌ ತೆಗೆದುಕೊಳ್ಳುವಂತೆ ಹಲವರು ನನಗೆ ಸಲಹೆ ನೀಡಿದ್ದರು. ಆದರೆ, ನಾನು ಅದಾವುದನ್ನೂ ಮಾಡಿಲ್ಲ ಎಂದಿದ್ದಾರೆ.

ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆ ಕರ್ನಾಟಕದ ಪ್ರಖ್ಯಾತ ನಟಿಯ ಮದುವೆ?

Latest Videos

click me!